ಡೇರಿ ಕ್ರೌರ್ಯ ಜಗಜ್ಜಾಹೀರಿಗೆ ಹಸು ನೇತುಹಾಕಿದ ರೆಸ್ಟೊರೆಂಟ್
Posted On September 28, 2017
>> ” ನೀವು ಕುಡಿಯುವ ಹಾಲಿನ ಹಿಂದಿನ ಅಮಾನವೀಯತೆ ” ಎಂದ ಮಾಲೀಕರು
ಅಡಿಲೇಡ್: ಹೈನುಗಾರಿಕೆ ಕೈಗಾರಿಕರಣದಿಂದ ಪ್ರಾಣಿಗಳನ್ನು ಕೇವಲ ಮಾಂಸದ ಮುದ್ದೆಗಳಂತೆ ಕಾಣುತ್ತಿದೆ ಎಂದು ಹಲವಾರು ಬಾರಿ ಜಾಗತಿಕವಾಗಿ ಪ್ರತಿಭಟನಾ ಕೂಗು ಕೇಳಿಬಂದಿದೆ. ಪ್ರಾಣಿ ದಯಾ ಸಂಘಟನೆಗಳು ಕ್ರೌರ್ಯ ತಡೆಗೆ ವಿಭಿನ್ನ ಅಣಕು ಪ್ರದರ್ಶಗಳಿಂದ ಜಾಗೃತಿಗೆ ಆಗ್ರಹಿಸುತ್ತಿವೆ.
ಆದರೆ ಆಸ್ಟ್ರೇಲಿಯಾದ ಅಡಿಲೇಡ್‍ನಲ್ಲಿರುವ “ಎಟಿಕಾ ರೆಸ್ಟೊರೆಂಟ್” ಹಸುವಿನ ಶರೀರವನ್ನು ಸಂರಕ್ಷಿಸಿ( ಟ್ಯಾಕ್ಸಿಡರ್ಮೈಡ್) ನೇತುಹಾಕಿದೆ. ರೆಸ್ಟೊರೆಂಟ್ ಬರುವವರೆಲ್ಲ ಇದನ್ನು ನೀಡಿ ಹೌಹಾರಿದ್ದಾರೆ. ಏನಿದು? ಎಂದವರಿಗೆ ಸಿಕ್ಕಿದ್ದು ” ನೀವು ಕುಡಿಯುವ ಹಾಲಿನ ಹಿಂದಿನ ಅಮಾನವೀಯತೆ” ಎಂದು ಮಾಲೀಕರು ಉತ್ತರಿಸಿದ್ದಾರೆ.
ಮತ್ತೊಂದು ಹೆಜ್ಜೆ ಮುಂದುವರಿದು ಸಾಮಾಜಿಕ ಜಾಲತಾಣದ ತಮ್ಮ ಅಧಿಕೃತ ಪೇಜ್‍ನಲ್ಲಿಯೂ ರೆಸ್ಟೊರೆಂಟ್ ಮಾಲೀಕರು ಹಸು ನೇತಾಡುತ್ತಿರುವಂತೆ ಚಿತ್ರ ಬಿತ್ತಿಸಿದ್ದಾರೆ. ಇದಕ್ಕೆ ಹಲವರು ಕಿಡಿಕಾರಿದ್ದು, ” ನಿಮ್ಮದೇನು ಸಸ್ಯಹಾರ ಹೋಟೆಲ್ ಅಲ್ಲ. ನೀವು ಹಸುವನ್ನು ಅಲಂಕಾರಿಕ ವಸ್ತುವಂತೆ ಚಿತ್ರಿಸಿದ್ದೀರಿ ” ಎಂದಿದ್ದಾರೆ.
ಮತ್ತೆ ಕೆಲವರು ” ನೋಡಿ ಇನ್ಮುಂದೆ ನಾವು ಮಾಂಸವನ್ನು ಸೂಪರ್ ಮಾರ್ಕೆಟ್‍ಗಳಿಂದ ಬರುವ ವಸ್ತುವಂತೆ ಪರಿಗಣಿಸುವುದು ನಿಲ್ಲಿಸಬೇಕು. ಕಸಾಯಿಖಾನೆ, ಡೇರಿಯಲ್ಲಿನ ಕ್ರೌರ್ಯದಿಂದ ನರಳಿ ನಮ್ಮೆದುರು ಬಿದ್ದಿರುವ ಶವಗಳಂತೆ ಕಂಡಾಗ ಮಾತ್ರ ಪ್ರಾಣಿಗಳಿಗೂ ನಾವು ನ್ಯಾಯ ಸಲ್ಲಿಸಿದಂತೆ” ಎಂದು ತಿಳಿಹೇಳಿದ್ದಾರೆ.
- Advertisement -
Leave A Reply