• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ನೈತಿಕತೆ, ಆತ್ಮವಿಶ್ವಾಸ, ಧೈರ್ಯ ಎಂಬ ಆಯುಧಗಳಿಗೆ ಪೂಜೆ ಮಾಡೋಣ!

Hanumantha Kamath Posted On September 29, 2017


  • Share On Facebook
  • Tweet It

ಎಲ್ಲಾ ಹಿತೈಷಿಗಳಿಗೆ ಆಯುಧ ಪೂಜೆಯ ದಿನದ ಶುಭ ಹಾರೈಕೆಗಳು. ನಿಮ್ಮ ಸ್ಕೂಟರ್, ಬೈಕ್, ಕಾರು, ವ್ಯಾನ್ ಗಳನ್ನು ನೀವು ಇವತ್ತು ಪೂಜಿಸುತ್ತೀರಿ, ಏನಾದರೂ ಯಂತ್ರಗಳಿಗೆ ಸಂಬಂಧಪಟ್ಟ ವ್ಯಾಪಾರ ಮಾಡುವವರು ಯಂತ್ರಗಳಿಗೆ ಪೂಜೆ ಮಾಡುತ್ತಾರೆ. ಇದೆಲ್ಲ ನಾವು ನಮಗೋಸ್ಕರ ಮಾಡುವುದು. ಆದರೆ ದೇಶಕ್ಕಾಗಿ, ನಾಡಿಗಾಗಿ, ನಮ್ಮ ಊರಿನ ಅಭಿವೃದ್ಧಿಗಾಗಿ ಪ್ರಜಾಪ್ರಭುತ್ವ ಎಂಬ ನಮ್ಮ ಆಯುಧವನ್ನು ನಾವು ಬಳಸಲೇಬೇಕು. ಇಲ್ಲದಿದ್ದರೆ ಅದಕ್ಕೆ ಮಣ್ಣು ಹಿಡಿಯುತ್ತದೆ. ಯಾವುದೇ ಪಕ್ಷವಿರಲಿ, ಯಾವುದೇ ಮುಖಂಡ ಇರಲಿ ತಪ್ಪು ಮಾಡಿದರೆ ನಮ್ಮ ವಿರೋಧವನ್ನು ತೋರಿಸಲೇಬೇಕು. ಅದಕ್ಕೆ ನೈತಿಕತೆ ಬೇಕು. ನೈತಿಕತೆ ಎಂಬ ಆಯುಧಕ್ಕೆ ಪೂಜೆಯಾಗಲಿ. ಯಾರಾದರೂ ಭ್ರಷ್ಟಾಚಾರ ಮಾಡಿದಾಗ ನಮ್ಮ ಮಾತುಗಳನ್ನು ಹರಿಯಬಿಡಬೇಕು, ಅದಕ್ಕೆ ಆತ್ಮವಿಶ್ವಾಸದ ಆಯುಧ ಬೇಕು. ಆತ್ಮವಿಶ್ವಾಸಕ್ಕೆ ಪೂಜೆ ಆಗಲಿ. ಸಜ್ಜನರು ಮೌನವಾಗಿರುವುದರಿಂದ ಊರಿನ ಆಡಳಿತ ದಿಕ್ಕುತಪ್ಪುತ್ತದೆ ಎಂದಾಗ ನಿಮ್ಮ ಸತ್ಯದ ಧ್ವನಿ ಮೊಳಗಲಿ. ಸತ್ಯ, ನಿಷ್ಟೆ, ಬದ್ಧತೆ, ನ್ಯಾಯಪರ ನಿಲುವು ಎಂಬ ನಿಮ್ಮ ಹೃದಯ, ಮನಸ್ಸಿನ ಒಳಗಿರುವ ಆಯುಧಗಳಿಗೆ ಪೂಜೆ ಆಗಲಿ.
ಹಾಗೆ ಇವತ್ತು ಮಂಗಳೂರು ಮಹಾನಗರ ಪಾಲಿಕೆಯಲ್ಲಿರುವ ಅವರ ಸ್ವಂತ ವಾಹನಗಳಿಗೂ ಪೂಜೆಯಾಗಿರಬೇಕು. ಅವು ಪೂಜೆ ಮಾಡಿಸಿಕೊಳ್ಳಲು ಮಾತ್ರ ಲಾಯಕ್ಕು. ಅವುಗಳಿಂದ ಆಗುವ ಕೆಲಸ ಅಷ್ಟರಲ್ಲಿಯೇ ಇದೆ. ಉದಾಹರಣೆಗೆ ನಾಲ್ಕು desiliting machines ಇವೆ. ಎರಡು Jetsak ಇವೆ ಹಾಗೆ ಎರಡು Sespoll ಇವೆ. ಇವನ್ನು ಪಾಲಿಕೆ ಸ್ವಂತಕ್ಕೆ ಖರೀದಿಸಿ ಇಟ್ಟಿದೆ. ಪಾಲಿಕೆಯಲ್ಲಿ ಯಾರೋ ತುಂಬಾ ತಲೆ ಇದ್ದವರು ಈ ವಾಹನಗಳ ಅಗತ್ಯ ನೋಡಿ ಖರೀದಿಸಿರಬಹುದು. ಇವುಗಳ ಉಪಯೋಗದ ಬಗ್ಗೆ ಒಂದಿಷ್ಟು ಮಾಹಿತಿ ನಿನ್ನೆ ಕೊಟ್ಟಿದ್ದೆ. ಇವುಗಳನ್ನು ಟೆಂಡರ್ ಕರೆದು ಗುತ್ತಿಗೆದಾರರಿಗೆ ಒಂದು ವರ್ಷದ ಮಟ್ಟಿಗೆ ಒಪ್ಪಂದ ಮಾಡಿ ನಿರ್ವಹಿಸಲು ಕೊಡುತ್ತಾರೆ. ಕೊಡುವಾಗ ಟೆಂಡರ್ ಕಂಡೀಷನ್ ಹಾಕಿ ಕೊಡಲಾಗುತ್ತದೆ. ಇಷ್ಟು ಜನರನ್ನು ಕೆಲಸಕ್ಕೆ ನೇಮಿಸಿಕೊಳ್ಳಬೇಕು. ಡಿಸೀಲ್ ಗುತ್ತಿಗೆದಾರರೇ ಹಾಕಿಕೊಳ್ಳಬೇಕು. ಸಣ್ಣಪುಟ್ಟ ರಿಪೇರಿ ಬಂದರೆ ಅವರೇ ಮಾಡಿಸಿಕೊಳ್ಳಬೇಕು. ಇಂತಹುದೆಲ್ಲಾ ಇರುತ್ತದೆ.
ಒಂದು ವೇಳೆ ಪಾಲಿಕೆಯ ವ್ಯಾಪ್ತಿಯಲ್ಲಿ ಡ್ರೈನೇಜ್ ಬ್ಲಾಕ್ ಆದರೆ ಆಗ ಸಂಬಂಧಿಸಿದ ಜ್ಯೂನಿಯರ್ ಇಂಜಿನಿಯರ್ ಫೋನ್ ಮಾಡಿದರೆ ಅಲ್ಲಿ ಆದಷ್ಟು ಬೇಗ ಹೋಗಿ ಮ್ಯಾನ್ ಹೋಲ್ ಕ್ಲೀನ್ ಮಾಡಿಕೊಡಬೇಕು. ಯಾರದ್ದೂ ಎಮೆರ್ಜೆನಿ ಫೋನ್ ಬರದೇ ಇದ್ದರೆ ಗುತ್ತಿಗೆದಾರರು ಪಾಲಿಕೆಯ 60 ವಾರ್ಡುಗಳ ಮ್ಯಾನ್ ಹೋಲ್ ಗಳನ್ನು ಸರದಿಯಲ್ಲಿ ಕ್ಲೀನ್ ಮಾಡುತ್ತಾ ಬರಬೇಕು. ಮೊದಲಿಗೆ ಈ Jetsak ಹೇಗೆ ಕಾರ್ಯ ನಿರ್ವಹಿಸುತ್ತದೆ ಮತ್ತು ನಗರದ ಸ್ವಚ್ಚತೆಗೆ ಎಷ್ಟು ಮುಖ್ಯ ಎನ್ನುವುದನ್ನು ವಿವರಿಸುತ್ತೇನೆ. ಒಂದು ರಸ್ತೆಯಲ್ಲಿ ಎರಡು ಮ್ಯಾನ್ ಹೋಲ್ ಗಳು ಇವೆ ಎಂದು ಅಂದುಕೊಳ್ಳೋಣ. ಒಂದು ಮ್ಯಾನ್ ಹೋಲ್ ನಿಂದ ಮತ್ತೊಂದರ ನಡುವೆ ಎಲ್ಲಿಯಾದರೂ ತ್ಯಾಜ್ಯ, ಕಲ್ಲು, ಮಣ್ಣು, ಮರಳು ಎಲ್ಲಾ ಸೇರಿ ಬ್ಲಾಕ್ ಆಗಿದೆ ಎಂದು ಇಟ್ಟುಕೊಳ್ಳೋಣ. ಆಗ Jetsak ಒಂದು ಮ್ಯಾನ್ ಹೋಲ್ ನಿಂದ ಮತ್ತೊಂದು ಮ್ಯಾನ್ ಹೋಲ್ ನಡುವಿನ ಬ್ಲಾಕ್ ಅನ್ನು ಕ್ಲೀಯರ್ ಮಾಡುತ್ತದೆ ನಂತರ ಎರಡರಲ್ಲಿ ಒಂದು ಮ್ಯಾನ್ ಹೋಲ್ ಒಳಗೆ desiliting ಇಳಿಯಬಿಟ್ಟು ಆ ತ್ಯಾಜ್ಯವನ್ನು ತೆಗೆಯಲಾಗುತ್ತದೆ. ಹೀಗೆ ಮಾಡಿದರೆ ಏನು ಉಪಯೋಗ ಎಂದು ನಿಮಗೆ ಅನಿಸಬಹುದು.
ಮಳೆಗಾಲದಲ್ಲಿ ಜೋರು ಮಳೆ ಬಂದರೆ ಅನೇಕ ಕಡೆ ಮ್ಯಾನ್ ಹೋಲ್ ಗಳು ಬಾಯಿ ತೆರೆಯುತ್ತಲ್ಲವೇ. ಅದು ಹೇಗೆಂದರೆ ಹೀಗೆ Jetsak ಮತ್ತು desiliting ಸರಿಯಾಗಿ ಬಳಸದೇ ಇದ್ದದ್ದೇ ಕಾರಣವಾಗಿರುತ್ತದೆ. ಈ ಗುತ್ತಿಗೆ ವಹಿಸಿಕೊಂಡವರಿಗೆ ಇದು ರೂಟಿನ್ ಕೆಲಸ. ಅಂದರೆ 60 ವಾರ್ಡುಗಳಲ್ಲಿರುವ ಮ್ಯಾನ್ ಹೋಲ್ ಗಳನ್ನು ಅವರು ಸರದಿಯಲ್ಲಿ ಕ್ಲೀನ್ ಮಾಡುತ್ತಾ ಹೋಗಬೇಕು. ಆದರೆ ಗುತ್ತಿಗೆದಾರ ಏನು ಮಾಡುತ್ತಾನೆ ಎಂದರೆ ಪಾಲಿಕೆಯ ಇಂಜಿನಿಯರ್ ಗಳು ಫೋನ್ ಮಾಡಿ ಹೇಳಿದ್ರೆ ಮಾತ್ರ ಅಲ್ಲಿ ಹೋಗಿ ಕ್ಲೀನ್ ಮಾಡಿಸುತ್ತಾರೆ. ಇಲ್ಲದೇ ಹೋದ್ರೆ ಈ ವಾಹನಗಳಿಗೆ ಜಾಸ್ತಿ ಕೆಲಸ ಮಾಡಿದರೆ ಶೀತ, ನೆಗಡಿ ಆಗುತ್ತದೆಯೇನೋ ಅಂತ ಕಂಬಳಿ ಹೊದ್ದು ಎಲ್ಲಿಯಾದರೂ ಮಲಗಿಸುತ್ತಾರೆ. ಇದನ್ನು ನೋಡಬೇಕಾದವರು ಯಾರು? ಪಾಲಿಕೆಯ ಒಳಚರಂಡಿ ವಿಭಾಗದವರು. ಅವರು ನೋಡುವುದೇ ಇಲ್ಲ. ನಾವು ಮಾತ್ರ ಈ ಮ್ಯಾನ್ ಹೋಲ್ ಗಳಿಂದ ಗುಳ್ಳೆಗುಳ್ಳೆಯಾಕಾರದಲ್ಲಿ ನಮ್ಮ ತ್ಯಾಜ್ಯ ಹೊರಗೆ ಬರುವುದನ್ನು ನೋಡುತ್ತಾ ಪ್ಯಾಂಟ್, ಸೀರೆಯನ್ನು ಒಂದಿಷ್ಟು ಮೇಲಕ್ಕೆ ಎತ್ತಿ ಗಲೀಜು ತಾಗದಂತೆ ಎಚ್ಚರಿಕೆ ವಹಿಸಿ ನಡೆದು ಹೋಗುತ್ತೇವೆ. ಮಕ್ಕಳು ತಮ್ಮ ಸ್ಕೂಲ್ ಶೂಗೆ ಗಲೀಜು ತಾಗುತ್ತದೆ ಅಂತ ಆತಂಕದಿಂದ ನಡೆಯುತ್ತಾರೆ. ಆಗ ಒಂದು ರೊಯ್ಯನೆ ಕಾರು ಬಂದು ನಮ್ಮ ತ್ಯಾಜ್ಯವನ್ನು ನಮ್ಮ ಮೇಲೆನೆ ಹಾರಿಸಿಕೊಂಡು ಹೋಗಿ ಬಿಡುತ್ತದೆ.
ಕಾರಿನ ಒಳಗಿದ್ದವರಿಗೆ ಹೊರಗಿನವರ ಸಂಕಟ ಗೊತ್ತಾಗುವುದಿಲ್ಲ. ಹೊರಗಿನವರು ಯಾರನ್ನು ಶಪಿಸುವುದು ಎಂದು ಕನ್ ಫ್ಯೂಸ್ ಆಗಿ ಕಾರಿನವರನ್ನು ಬೈಯುತ್ತಾರೆ. ಬಿಸಿಲು ಜೋರಿದ್ದರೆ ಮ್ಯಾನ್ ಹೋಲ್ ಒಳಗಿನ ಗಲೀಜು ಹೊರಗೆ ರಂಗೋಲಿ ಬಿಡಿಸುತ್ತದೆ. ಮಳೆ ಬಂದರೆ ಮಳೆ ನೀರಿನೊಂದಿಗೆ ಸೇರಿ ಕಾಕ್ ಟೇಲ್ ಆಗುತ್ತದೆ. ಈ ಯಂತ್ರಗಳನ್ನು ಸರಿಯಾಗಿ ಉಪಯೋಗಿಸಿ ಎಂದು ಜೋರು ಮಾಡಬೇಕಿದ್ದ ಸದಸ್ಯರು ಈಗ ಟೂರಿಗೆ ಹೋಗಿದ್ದಾರೆ, ಸ್ವಚ್ಚತೆಯ ಬಗ್ಗೆ ಅಧ್ಯಯನ ಮಾಡಲು!!

  • Share On Facebook
  • Tweet It


- Advertisement -
clean Mangaluru


Trending Now
ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
Hanumantha Kamath March 25, 2023
ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
Hanumantha Kamath March 24, 2023
Leave A Reply

  • Recent Posts

    • ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
    • ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
    • ಗುಳಿಗನಿಗೆ ತಮಾಷೆ ಮಾಡಿ ಬದುಕುವುದುಂಟೆ!!
    • ನಾವು ಅಂಡರ್ ಸ್ಟ್ಯಾಂಡಿಂಗ್ ಮಾಡಿಕೊಂಡಿದ್ದೇವು ಎಂದು ಒಪ್ಪಿದ ಎಸ್ ಡಿಪಿಐ!!
    • ಲೋಕಾಯುಕ್ತ ಬಲಗೊಂಡಿದೆ ಎನ್ನುವ ಸ್ಯಾಂಪಲ್!
    • ಚುನಾವಣಾ ಪೂರ್ವದ ಕೊನೆಯ ನಾಟಕಕ್ಕೆ ಕಾಂಗ್ರೆಸ್ ರೆಡಿ!!
    • ಲೋಕಾಯುಕ್ತದಲ್ಲಿ ಸಿದ್ದು ಕೇಸ್ ಯಾಕೆ ಮುಚ್ಚಿಹೋದವು!!
  • Popular Posts

    • 1
      ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
    • 2
      ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • 3
      ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • 4
      ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • 5
      ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search