ಮ್ಯಾನ್ಮಾರಿನಲ್ಲಿ ಹಿಂದೂಗಳ ಹತ್ಯೆ: ಕ್ರಮಕ್ಕೆ ಭಾರತ ಆಗ್ರಹ
ದೆಹಲಿ: ಮ್ಯಾನ್ಮಾರಿನ ರಾಖಿನೆ ರಾಜ್ಯದಲ್ಲಿ ಇತ್ತೀಚೆಗೆ 90ಕ್ಕೂ ಅಧಿಕ ಹಿಂದೂಗಳ ಹತ್ಯೆ ಮಾಡಿದ ಶಂಕಿತ ರೋಹಿಂಗ್ಯಾ ಮುಸ್ಲಿಂ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮ್ಯಾನ್ಮಾರ್ ಸರಕಾರಕ್ಕೆ ಭಾರತ ಆಗ್ರಹಿಸಿದೆ.
ಇತ್ತೀಚೆಗೆ ಮ್ಯಾನ್ಮಾರ್ ನಲ್ಲಿ ಸಾಮೂಹಿಕವಾಗಿ ಹತ್ಯೆಗೊಳಗಾದವರೆಲ್ಲರೂ ಹಿಂದೂಗಳು ಎಂದು ತಿಳಿದುಬಂದಿದೆ. ಹಾಗಾಗಿ ಭಾರತ ಈ ಕೃತ್ಯವನ್ನು ಖಂಡಿಸಿದ್ದಲ್ಲದೇ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮ್ಯಾನ್ಮಾರ್ ಸರಕಾರಕ್ಕೆ ಆದೇಶಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ರವೀಶ್ ಕುಮಾರ್ ತಿಳಿಸಿದ್ದಾರೆ.
ಇಂಥ ಉಗ್ರ ಕೃತ್ಯವನ್ನು ಭಾರತ ಎಂದಿಗೂ ಸಹಿಸುವುದಿಲ್ಲ. ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಂಡಿರುವ ಕುರಿತು ಇದುವರೆಗೆ ಯಾವುದೇ ಮಾಹಿತಿ ಬಂದಿಲ್ಲ. ಅಲ್ಲಿನ ಸರಕಾರ ಅಪರಾಧಿಗಳಿಗೆ ಶಿಕ್ಷೆ ವಿಧಿಸುತ್ತದೆ ಎಂಬ ಭರವಸೆ ಇದೆ ಎಂದು ಹೇಳಿದ್ದಾರೆ.
ಆದಾಗ್ಯೂ, ಹತ್ಯಗೊಳಗಾದ ಹಿಂದೂಗಳ ಕುಟುಂಬಸ್ಥರಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಬೇಡಿಕೊಳ್ಳುತ್ತೇವೆ. ಸರಕಾರ ಸಹ ಕುಟುಂಬಸ್ಥರ ನೆರವಿಗೆ ಬರಲು ಮನವಿ ಮಾಡಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
Leave A Reply