ಇಫ್ತಾರ್ ಕೂಟ ನಿರಾಕರಿಸಿದ್ದ ಟ್ರಂಪ್ ಅವರಿಂದ ಶ್ವೇತಭವನದಲ್ಲಿ ದೀಪಾವಳಿ ಆಚರಣೆ!
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರ ಸಂಪ್ರದಾಯವನ್ನೇ ಮುಂದುವರಿಸಿಕೊಂಡು ಹೋಗಲು ನಿರ್ಧರಿಸಿದ್ದು, ಹಿಂದೂಗಳ, ಅದರಲ್ಲೂ ಭಾರತದ ಪ್ರಮುಖ ಹಬ್ಬವಾದ ದೀಪಾವಳಿಯನ್ನು ಶ್ವೇತಭವನದಲ್ಲಿ ಆಚರಣೆ ಮಾಡಲು ನಿರ್ಧರಿಸಿದ್ದಾರೆ.
ಅಲ್ಲದೆ ಸುಮಾರು 15 ಸಾವಿರ ಅನಿವಾಸಿ ಭಾರತೀಯರು ಶ್ವೇತಭವನದಲ್ಲಿ ನಡೆಯುವ ದೀಪಾವಳಿ ಆಚರಣೆಯಲ್ಲಿ ಪಾಲ್ಗೊಳ್ಳಲಿದ್ದು, ಎಲ್ಲರಿಗೂ ವಿಶೇಷ ಭೋಜನ ಏರ್ಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಆದಾಗ್ಯೂ, ಅನಿವಾಸಿ ಭಾರತೀಯರನ್ನುದ್ದೇಶಿಸಿ ಟ್ರಂಪ್ ಮಾತನಾಡಲಿದ್ದು, ಎಚ್1ಬಿ ವೀಸಾ ಕುರಿತು ಮಹತ್ತರ ಘೋಷಣೆ ಹಾಗೂ ಸಡಿಲಿಕೆ ಕುರಿತು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಶ್ವೇತಭವನದ ಮೂಲಗಳು ತಿಳಿಸಿವೆ.
ಹಿಂದೂಗಳ ಹಬ್ಬಕ್ಕೆ ಇಷ್ಟು ಪ್ರಾಮುಖ್ಯ ಕೊಡುತ್ತಿರುವ ಡೊನಾಲ್ಡ್ ಟ್ರಂಪ್ ದಶಕಗಳಿಂದಲೂ ಶ್ವೇತಭವನದಲ್ಲಿ ಆಚರಿಸುತ್ತಿದ್ದ ರಮ್ಜಾನ್ ಹಾಗೂ ಇಫ್ತಾರ್ ಕೂಟಗಳನ್ನು ನಡೆಸಲು ಈ ಬಾರಿ ನಿರಾಕರಿಸಿದ್ದರು. ಡೊನಾಲ್ಡ್ ಟ್ರಂಪ್ ಅವರ ಈ ನಿರ್ಧಾರದಿಂದ ಭಾರತದ ಎಷ್ಟು ಬುದ್ಧಿಜೀವಿಗಳಿಗೆ, ಎಡಬಿಡಂಗಿಗಳಿಗೆ ಹಾಗೂ ಪ್ರಗತಿಪರರು ಎಂಬ ಬೋರ್ಡ್ ನೇತುಹಾಕಿಕೊಂಡವರಿಗೆ ಹೊಟ್ಟೆಯಲ್ಲಿ ತವಡು ಕುಟ್ಟಿದಂತಾಗುತ್ತಿದೆಯೋ? ಗೊತ್ತಿಲ್ಲ.
Leave A Reply