ಮುಸ್ಲಿಮರಿಗೂ ಗೋ ಮೂತ್ರ ಆರೋಗ್ಯಕರ: ಬಾಬಾ ರಾಮದೇವ್
ದೆಹಲಿ: ಗೋವುಗಳ ಮೂತ್ರವನ್ನು ಮುಸ್ಲಿಮರಿಗೂ ಆರೋಗ್ಯಕರವಾಗಿರುವುದರಿಂದ, ಅವರೂ ಸಹ ಸೇವಿಸಬೇಕು ಎಂದು ಯೋಗಗುರು, ಪತಂಜಲಿ ಸಂಸ್ಥೆ ಮುಖ್ಯಸ್ಥ ಬಾಬಾ ರಾಮದೇವ್ ಹೇಳಿದ್ದಾರೆ.
ಟಿವಿ ಸಂದರ್ಶನವೊಂದರಲ್ಲಿ, “ಕುರ್ರಾನ್ ನಲ್ಲಿಯೂ ಸಹ ಗೋಮೂತ್ರದ ಪಾವಿತ್ರ್ಯದ ಬಗ್ಗೆ ಉಲ್ಲೇಖಿಸಲಾಗಿದೆ. ಗೋಮೂತ್ರಕ್ಕೆ ನಾನಾ ರೋಗ ತಡೆಯುವ ಸಾಮರ್ಥ್ಯವಿದೆ ಎಂಬುದು ಸಾಬೀತಾಗಿದೆ. ಹಾಗಾಗಿ ಮುಸ್ಲಿಮರು ಸಹ ಗೋಮೂತ್ರ ಸೇವನೆ ಮಾಡಬೇಕು” ಎಂದಿದ್ದಾರೆ.
ಪತಂಜಲಿ ಸಂಸ್ಥೆ ಹಿಂದೂ ಸಂಸ್ಥೆ ಎಂದು ದೂರುತ್ತಾರೆ. ಆದರೆ ನಾನು ಹಮ್ದರ್ದ್ ಸಂಸ್ಥೆಯನ್ನೂ ಬೆಂಬಲಿಸುತ್ತೇನೆ, ಹಿಮಾಲಯ ಸಂಸ್ಥೆಗೂ ಬೆಂಬಲ ಇದೆ. ಹಮ್ದರ್ದ್ ಸಂಸ್ಥೆಯ ಫಾರೂಕ್ ಯೋಗ ಗ್ರಾಮ ನಿರ್ಮಿಸಲು ನನಗೆ ಭೂಮಿ ದಾನ ಮಾಡಿದ್ದಾರೆ. ಇದರ ಬಗ್ಗೆ ಯಾರೂ ಏಕೆ ಮಾತನಾಡುವುದಿಲ್ಲ? ಬರೀ ದ್ವೇಷವನ್ನೇ ಏಕೆ ಬಿತ್ತಲಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.
ಭಾರತದಲ್ಲಿ ಎಲ್ಲರೂ ಒಟ್ಟಾಗಿ ಬಾಳಬೇಕು ಎಂಬುದೇ ನನ್ನ ಆಶಯವಾಗಿದೆ. ಎಲ್ಲರೂ ನನಗೆ ಸಮಾನರು. ಪತಂಜಲಿ ಎಂಬ ಹೆಸರಿಟ್ಟ ಮಾತ್ರಕ್ಕೆ ಬರೀ ಸಂಸ್ಥೆ ಒಂದೇ ವರ್ಗಕ್ಕೆ ಸೀಮಿತವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Leave A Reply