ಕೇರಳದಲ್ಲಿ ಲವ್ ಜಿಹಾದ್ ಹೆಡೆಮುರಿಕಟ್ಟಲು ಎನ್ಐಎ ಸಜ್ಜು, 32 ಪ್ರಕರಣ ಪರಿಶೀಲನೆ
ತಿರುವನಂತಪುರ: ಇತ್ತೀಚೆಗೆ ಅಖಿಲಾ ಅಶೋಕನ್ ಎಂಬ ಯುವತಿ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿ ಮತಾಂತರಗೊಂಡ ವಿಚಾರ ದೇಶಾದ್ಯಂತ ಸುದ್ದಿಯಾಯಿತು. ಅಲ್ಲದೆ ಈ ಮದುವೆಯೇ ಅನೂರ್ಜಿತ, ಇದು ಲವ್ ಜಿಹಾದ್ ನಿಂದ ಕೂಡಿದೆ, ಹಾಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಈ ಜಿಹಾದ್ ಕುರಿತು ತನಿಖೆ ನಡೆಸಬೇಕು ಎಂದು ಸೂಚಿಸಿತು.
ಅಖಿಲಾ ಅಶೋಕನ್ ಪ್ರಕರಣದಲ್ಲಿ ಅಖಿಲಾ ತಂದೆಯೇ ಇದು ಜಿಹಾದ್ ಸಂಕೇತ, ಮದುವೆ ಅನೂರ್ಜಿತಗೊಳಿಸಬೇಕು ಎಂದು ಕೋರ್ಟ್ ಮೊರೆ ಹೋಗಿದ್ದರು ಎಂದರೆ ಕೇರಳದಲ್ಲಿ ಜಿಹಾದ್ ಎಷ್ಟರಮಟ್ಟಿಗೆ ವ್ಯಾಪಿಸಿರಬಹುದು ಯೋಚಿಸಿ?
ಈಗ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಎನ್ಐಎ ಲವ್ ಜಿಹಾದ್ ವಿರುದ್ಧ ಸಮರ ಸಾರಿದ್ದು, ಸುಮಾರು 32 ಜಿಹಾದಿ ಪ್ರಕರಣಗಳನ್ನು ಗುರುತಿಸಿ, ಅವುಗಳ ವಿರುದ್ಧ ತನಿಖೆ ನಡೆಸುತ್ತಿದೆ.
ಎನ್ಐಎ ಪ್ರಕಾರ ಕೇರಳದಲ್ಲಿ ಪ್ರಸ್ತುತ ಸುಮಾರು 92 ಜಿಹಾದ್ ಪ್ರಕರಣ ಬೆಳಕಿಗೆ ಬಂದಿದ್ದು, ಅವುಗಳಲ್ಲಿ ಸೂಕ್ಷ್ಮ ಪ್ರಕರಣಗಳನ್ನು ಗುರುತಿಸಿ 32 ಪ್ರಕರಣಗಳ ವಿರುದ್ಧ ತನಿಖೆ ಮಾಡಲಾಗುತ್ತಿದೆ. ಇಂಥ ಪ್ರಕರಣಗಳಲ್ಲಿ ಪೋಷಕರ ದೂರಿಗೆ ಹೆಚ್ಚಿನ ಪ್ರಾಧಾನ್ಯ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಅಷ್ಟೇ ಅಲ್ಲ ಜಿಹಾದ್ ಯಾರ ಹಿಡಿತದಲ್ಲಿದೆ, ಬೆಂಬಲ ಇದೆ ಸೇರಿ ಹಲವು ಅಂಶಗಳ ಆಧಾರಿತವಾಗಿ ಜಿಹಾದ್ ಜಾಲವನ್ನು ಪತ್ತೆಹಚ್ಚಲಾಗುತ್ತಿದೆ ಎಂದು ಎನ್ಐಎ ಮೂಲಗಳು ತಿಳಿಸಿವೆ.
ಶನಿವಾರವಷ್ಟೇ ಕೇರಳದಲ್ಲಿ ಜಿಹಾದ್ ಜಾಸ್ತಿಯಾಗುತ್ತಿದೆ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದರು.
Leave A Reply