ಡೋಕ್ಲಾಂ ಗಡಿ ಬಿಕ್ಕಟ್ಟು ಬಳಿಕ ಮತ್ತೆ ಭಾರತದೊಂದಿಗೆ ಸ್ನೇಹ ಬೆಸೆಯಲು ಚೀನಾ ಇಂಗಿತ
ದೆಹಲಿ: ಸಿಕ್ಕಿಂನ ಡೊಕ್ಲಾಂ ಗಡಿಯಲ್ಲಿ 73 ದಿನ ಸೇನೆ ನಿಯೋಜಿಸಿ ಉಪಟಳ ಮಾಡಿದ್ದ ಚೀನಾಗೆ ಈಗ ಬುದ್ಧಿ ಬಂದಿದ್ದು, ಭಾರತದೊಂದಿಗೆ ಮತ್ತೆ ಹೊಸ ಅಧ್ಯಾಯದ ರೂಪದಲ್ಲಿ ಸ್ನೇಹ ಹಸ್ತ ಚಾಚಿದೆ.
ಭಾರತದಲ್ಲಿರುವ ಚೀನಾ ರಾಯಭಾರಿ ಲುವೋ ಜಾವೋಹೈ, ಚೀನಾ ಹಾಗೂ ಭಾರತ ಹಳೆಯ ಮುನಿಸು ಮರೆತು ಸ್ನೇಹದ ಹೊಸ ಅಧ್ಯಾಯ ತೆರೆಯಲು ಇದು ಸಕಾಲ ಎಂದು ಹೇಳಿದ್ದಾರೆ.
ಭಾರತ ಹಾಗೂ ಚೀನಾ ಹಲವು ಕ್ಷೇತ್ರಗಳಲ್ಲಿ ಏಳಿಗೆ ಸಾಧಿಸಲು ದ್ವಿಪಕ್ಷೀಯ ಸಂಬಂಧ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಈ ದಿಸೆಯಲ್ಲಿ ಎರಡೂ ದೇಶಗಳು ಮತ್ತೆ ಒಂದಾಗಿ ಅಭಿವೃದ್ಧಿ ಪಥದೆಡೆಗೆ ನಡೆಯುವುದು ಒಳಿತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಆದಾಗ್ಯೂ, ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಪ್ರಧಾನಿ ಕ್ಸಿ ಜಿನ್ ಪಿಂಗ್ ನಡುವೆ ಉತ್ತಮವಾಗಿ ಮಾತುಕತೆ ನಡೆದಿದ್ದು, ಇದು ಉಭಯ ರಾಷ್ಟ್ರಗಳ ನಡುವಿನ ಸೌಹಾರ್ದ ವೃದ್ಧಿಯ ಸಂಕೇತ ಎಂದಿದ್ದಾರೆ.
ಕಳೆದ ತಿಂಗಳು ಚೀನಾದಲ್ಲಿ ನಡೆದ ಶೃಂಗಸಭೆಯಲ್ಲಿ ನರೇಂದ್ರ ಮೋದಿ ಜಿನ್ ಪಿಂಗ್ ಭೇಟಿಯಾಗಿ, ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು ಹಾಗೂ ಉಭಯ ರಾಷ್ಟ್ರಗಳ ಪರಸ್ಪರ ಸಹಕಾರ ನೀಡುವ ಕುರಿತು ಪ್ರಸ್ತಾಪಿಸಿದ್ದರು.
Leave A Reply