ಗಾಂಧೀಜಿ ಕನಸು ನನಸಾಗುವತ್ತ, ಬದಲಾಗುತ್ತಿದೆ ಭಾರತ
ಅಕ್ಟೋಬರ್ 02
ಸರಿಯಾಗಿ ಮೂರು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಮಹಾತ್ಮ ಗಾಂಧೀಜಿ ಕಂಡ ಸ್ವಚ್ಛ ಕನಸು ನನಸು ಮಾಡುವ ದಿಸೆಯಲ್ಲಿ ಸ್ವಚ್ಛ ಭಾರತ ಯೋಜನೆ ಜಾರಿಗೆ ತಂದರು. ಬರೀ ಯೋಜನೆ ಘೋಷಣೆ ಮಾಡಿ ಸುಮ್ಮನಿರದೇ, ತಾವೇ ರಸ್ತೆಗಿಳಿದು ಕಸ ಗುಡಿಸಿದರೆ.
ಇಷ್ಟಾದರೂ ಟೀಕೆಗಳು ವ್ಯಕ್ತವಾದವು. ಒಂದು ದಿನ ಪೊರಕೆ ಹಿಡಿದು ನಿಂತರೆಲ್ಲ ದೇಶ ಸ್ವಚ್ಛವಾಗಲ್ಲ ಎಂದರು. ಯೋಜನೆ ಯಶಸ್ಸಾಗಲು ಸಾಧ್ಯವಿಲ್ಲ ಎಂದು ಅಡ್ಡಬಾಯಿ ಹಾಕಿದರು. ಇದು ಪ್ರಚಾರದ ಗಿಮಿಕ್ ಎಂದು ಕಟಕಿಯಾಡಿದರು.
ಆದರೆ ಏನಾಯಿತು?
ಆದರೆ ಈ ಮೂರು ವರ್ಷಗಳಲ್ಲಿ ಯೋಜನೆ ಯಶಸ್ಸಿನತ್ತ ಸಾಗುತ್ತಿದೆ. ಈ ಅವಧಿಯಲ್ಲಿ ಸ್ವಚ್ಛ ಭಾರತ ಯೋಜನೆ ಜನರಲ್ಲಿ ಜಾಗೃತಿ ಮೂಡಿಸಿದೆ ಎಂದು ಲೋಕಲ್ ಸರ್ಕಲ್ಸ್ ಎಂಬ ಸಂಸ್ಥೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ.
ಈ ಸಂಸ್ಥೆ ಸಾಮಾಜಿಕ ಜಾಲತಾಣಗಳ ಮೂಲಕ 11 ಪ್ರಶ್ನೆ ಕೇಳಿದ್ದು, ಎಲ್ಲದರಲ್ಲೂ ಯೋಜನೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿದೆ ಎಂದೇ ಹೇಳಿದ್ದಾರೆ.
2014ಕ್ಕೆ ಹೋಲಿಸಿದರೆ ನಿಮ್ಮ ಸುತ್ತಲಿನ ವಾತಾವರಣ ಸ್ವಚ್ಛತೆಯಿಂದ ಕೂಡಿದೆಯೇ? ಎಂಬ ಪ್ರಶ್ನೆಗೆ ಪರವಾಗಿಲ್ಲ ಎಂದು ಶೇ.29ರಷ್ಟು ಜನ, ಶೇ.18ರಷ್ಟು ಮಂದಿ ಉತ್ತಮವಾಗಿ ಆಗಿದೆ ಎಂದರೆ ಶೇ.9ರಷ್ಟು ಜನ ಸಂಪೂರ್ಣವಾಗಿ ಸ್ವಚ್ಛವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಶೇ.18ರಷ್ಟು ಜನ ಸಾರ್ವಜನಿಕ ಶೌಚಾಲಯಗಳ ಲಭ್ಯತೆ ಹೆಚ್ಚಾಗಿದೆ ಎಂದು ಅಭಿಪ್ರಾಯ ತಿಳಿಸಿದ್ದಾರೆ. ಆದಾಗ್ಯೂ, ಶೇ.22ರಷ್ಟು ಮಂದಿ ಪುರಸಭೆಯವರು ಸ್ವಚ್ಛತೆಗೆ ಆದ್ಯತೆ ನೀಡುತ್ತಿದ್ದಾರೆ, ನಾಗರಿಕರಲ್ಲಿ ಸ್ವಚ್ಛತೆಯ ಅರಿವು ಮೂಡಿಸಿದೆ ಎಂದು ಶೇ.32ರಷ್ಟು ಜನ ತಿಳಿಸಿದ್ದಾರೆ.
ಹೀಗೆ ಆನ್ ಲೈನ್ ಸಂಸ್ಥೆಯ ಬಹುತೇಕ ಪ್ರಶ್ನೆಗಳಿಗೆ ಯೋಜನೆ ಯಶಸ್ವಿಯಾಗಿದೆ ಎಂದೇ ಅಭಿಪ್ರಾಯ ತಿಳಿಸಿದ್ದಾರೆ.
:
Leave A Reply