ಶಾಂತಿ ಮಾತುಕತೆ ಎಂದೂ ದಾಳಿ ಮಾಡುವ ಪಾಕಿಸ್ತಾನ ರಣಹೇಡಿ: ನಿರ್ಮಲ್ ಸಿಂಗ್
Posted On October 2, 2017
ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಕದನ ವಿರಾಮ ಉಲ್ಲಂಘಿಸಿ ಉಪಟಳ ಮಾಡುವ ಪಾಕಿಸ್ತಾನದ ಕೃತ್ಯಕ್ಕೆ ಕಾಶ್ಮೀರ ಉಪ ಮುಖ್ಯಮಂತ್ರಿ ನಿರ್ಮಲ್ ಸಿಂಗ್ “ಪಾಕಿಸ್ತಾನ ರಣಹೇಡಿ” ಎಂದು ಜರಿದಿದ್ದಾರೆ.
ಒಂದೆಡೆ ಪಾಕಿಸ್ತಾನ ಶಾಂತಿ-ಸಂಧಾನದ ಕುರಿತು ಭಾಷಣ ಬಿಗಿಯುತ್ತದೆ. ಆದರೆ ಹಿಂಬಾಗಿಲಿನಿಂದ ದಾಳಿ ಮಾಡಿ ಜಮ್ಮು-ಕಾಶ್ಮೀರ ಜನರನ್ನು ಹತ್ಯೆ ಮಾಡುತ್ತದೆ. ಇದು ಹೇಡಿತನದ ಲಕ್ಷಣ ಎಂದು ಟೀಕಿಸಿದ್ದಾರೆ.
ಸೋಮವಾರ ಬೆಳಗ್ಗೆ ಜಮ್ಮು-ಕಾಶ್ಮೀರ ಗಡಿಯಲ್ಲಿ ಪಾಕಿಸ್ತಾನ ಸೈನಿಕರು ಗಡಿ ನಿಯಮ ಉಲ್ಲಂಘಿಸಿ ಮಾಡಿದ ದಾಳಿಯಲ್ಲಿ ಹತ್ತು ವರ್ಷದ ಬಾಲಕ ಮೃತಪಟ್ಟಿದ್ದು, ಐವರಿಗೆ ಗಾಯಗಳಾಗಿವೆ. ಈ ಹಿನ್ನೆಲೆಯಲ್ಲಿ ನಿರ್ಮಲ್ ಸಿಂಗ್ ಪಾಕಿಸ್ತಾನದ ಕೃತ್ಯವನ್ನು ಖಂಡಿಸಿದ್ದಾರೆ.
ಸೆ.23ರಂದು ಪಾಕಿಸ್ತಾನ ಕದನವಿರಾಮ ಉಲ್ಲಂಘಿಸಿ ಮಾಡಿದ್ದ ದಾಳಿಯಲ್ಲಿ ಇಬ್ಬರು ಬಿಎಸ್ಎಫ್ ಯೋಧರು ಹಾಗೂ ಮೂವರು ನಾಗರಿಕರು ಗಾಯಗೊಂಡಿದ್ದರು. ಪ್ರಸಕ್ತ ವರ್ಷದ ಆಗಸ್ಟ್ ವರೆಗೆ ಪಾಕಿಸ್ತಾನ 285 ಬಾರಿ ಕದನ ವಿರಾಮ ಉಲ್ಲಂಘಿಸಿ ದಾಳಿ ಮಾಡಿದೆ.
- Advertisement -
Leave A Reply