ವಿಜಯ್ ಮಲ್ಯ ಬಂಧನ
ಭಾರತದಲ್ಲಿ ಬ್ಯಾಂಕುಗಳಿಗೆ ೯೦೦೦ ಕೋಟಿ ರು.ಗಳ ಬಾಕಿ ಉಳಿಸಿಕೊಂಡು, ಇಂಗ್ಲೆಂಡ್‌ಗೆ ಹೋಗಿ ಉಳಿದುಕೊಂಡಿರುವ ಉದ್ಯಮಿ ವಿಜಯ್ ಮಲ್ಯನನ್ನ ಇಂಗ್ಲೆಂಡ್‌ನಲ್ಲಿ ಎರಡನೇ ಬಾರಿ ಬಂಧಿಸಲಾಗಿದೆ.
ಹಣ ದುರ್ಬಳಕೆ ಆರೋಪದಲ್ಲಿ ವಿಜಯ್ ಮಲ್ಯನನ್ನು ಭಾರತಕ್ಕೆ ಕಳುಹಿಸುವಂತೆ ಭಾರತ ೨೦೧೭ರ ಫೆಬ್ರವರಿಯಲ್ಲಿ ಇಂಗ್ಲೆಂಡ್‌ಗೆ ಮನವಿ ಮಾಡಿತ್ತು. ಅದರ ನಂತರ ಕೆಲವು ದಾಖಲೆಗಳನ್ನು ನೀಡಿದ ಹಿನ್ನೆಲೆಯಲ್ಲಿ ಏಪ್ರಿಲ್‌ನಲ್ಲಿ ಮಲ್ಯನನ್ನು ಒಮ್ಮೆ ಬಂಧಿಸಲಾಗಿತ್ತು. ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.
ಹಿಂದಿನ ತಿಂಗಳಷ್ಟೇ ಮಲ್ಯನ ವಿರುದ್ಧ ಇನ್ನಷ್ಟು ದಾಖಲೆಗಳನ್ನು ಭಾರತ ಸರ್ಕಾರ ಒದಗಿಸಿತ್ತು. ಈ ಹಿನ್ನೆಲೆಯಲ್ಲಿ ಮಲ್ಯನನ್ನು ಮತ್ತೆ ಬಂಧಿಸಿರಬಹುದು ಎಂಬ ಅನುಮಾನವಿದೆ. ಹಿಂದಿನ ಬಾರಿಯಂತೆ ಈ ಬಾರಿಯೂ ಬಿಡುಗಡೆ ಮಾಡಲಾಗುವುದೇ ಇಲ್ಲವೇ ಎಂಬುದು ಇನ್ನೂ ತಿಳಿದುಬಂದಿಲ್ಲ. ಎರಡನೇ ಬಾರಿ ಬಂಧನವಾಗಿರುವುದು ಭಾರತ ಕೇಂದ್ರ ಸರಕಾರದ ಪ್ರಯತ್ನದ ಫಲ ಎಂದು ಭಾವಿಸಲಾಗುತ್ತಿದೆ. ಕೇಂದ್ರ ಸರಕಾರ ಇಂಗ್ಲೆಂಡಿನ ನ್ಯಾಯಾಲಯಕ್ಕೆ ಮಲ್ಯನ ವಿರುದ್ಧ ಸಾಕಷ್ಟು ದಾಖಲೆಗಳನ್ನು ಒದಗಿಸಿತ್ತು. ವಿಜಯ್ ಮಲ್ಯನನ್ನು ದೇಶಕ್ಕೆ ಮರಳಿ ಕರೆತಂದು, ಕಾನೂನು ಕ್ರಮ ಜರುಗಿಸುವ ಬಗ್ಗೆ ಕೇಂದ್ರ ಸರಕಾರ ಉತ್ಸುಕವಾಗಿದೆ.
Leave A Reply