ಗೋಧ್ರೋತ್ತರ ಹಿಂಸೆ: ಮೋದಿ ಅವರಿಗೆ ನೀಡಿದ್ದ ಕ್ಲೀನ್ ಚಿಟ್ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ
Posted On October 6, 2017
0

ಅಹಮದಾಬಾದ್: ಗೋಧ್ರೋತ್ತರ ಗಲಭೆ ಪ್ರಕರಣದಲ್ಲಿ ನರೇಂದ್ರ ಮೋದಿ ಅವರಿಗೆ ನೀಡಿದ್ದ ಕ್ಲೀನ್ ಚಿಟ್ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದು, ಪ್ರಕರಣದಲ್ಲಿ ಮೋದಿ ಅವರನ್ನು ವಿನಾಕಾರಣ ಸಿಲುಕಿಸಲು ಹೊರಟಿದ್ದವರಿಗೆ ಹಿನ್ನಡೆಯಾಗಿದೆ.
ಝಾಕಿಯಾ ಜಾಫ್ರಿ ಎಂಬುವವರು 2002ರ ಗುಜರಾತ್ ಹಿಂಸೆ ಪ್ರಕರಣದಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ಹಲವರಿಗೆ ಕ್ಲೀನ್ ಚಿಟ್ ನೀಡಿದ್ದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
2002ರ ಫೆಬ್ರವರಿ 28ರಂದು ಗುಲ್ಬರ್ಗ್ ಸೊಸೈಟಿಯಲ್ಲಿ ಕಾಂಗ್ರೆಸ್ ಮುಖಂಡ ಎಹ್ಸಾನ್ ಜಾಫ್ರಿ ಸೇರಿ 68 ಮಂದಿಯನ್ನು ಹತ್ಯೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಹಿಂಸಾಚಾರ ಕುರಿತು ಏಕ ಸದಸ್ಯ ತನಿಖಾ ಸಮಿತಿ ರಚಿಸಲಾಗಿದ್ದು, ಈ ಸಮಿತಿಯು ಮೋದಿ ಸೇರಿ 59 ಮಂದಿಗೆ ಕ್ಲೀನ್ ಚಿಟ್ ನೀಡಿತ್ತು.
Trending Now
ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
September 17, 2025
ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
September 17, 2025