ದಲಿತರೇಕೆ ಗುಡಿ ಪೂಜಾರಿಯಾಗಬಾರದು ಎಂದು ಅರಚಿಕೊಳ್ಳುವವರು ಈ ಸುದ್ದಿ ಓದಿ!
ತಿರುವನಂತಪುರ: ಬ್ರಾಹ್ಮಣರೇನಾದರೂ ಹಿಂದುತ್ವದ ಬಗ್ಗೆ, ಧರ್ಮರಕ್ಷಣೆ, ಸಮಾನತೆ ಬಗ್ಗೆ ಮಾತನಾಡಿದರೆ ಕೇಳಿಬರುವ ಒಂದೇ ಪ್ರಶ್ನೆ, ಬ್ರಾಹ್ಮಣೇತರರೇಕೆ ದೇವಾಲಯದ ಪೂಜಾರಿ, ಅರ್ಚಕರಾಗಬಾರದು ಎಂದು?
ಈ ಪ್ರಶ್ನೆಗೆ ಉತ್ತರ ಸಿಗುಲ ಕಾಲಬಂದಿದ್ದು, ಕೇರಳದಲ್ಲಿ ಟ್ರ್ಯಾವಾನ್ ಕೋರ್ ದೇವಸ್ವೋಮ್ ಎಂಬ ಸಂಸ್ಥೆ ಹಲವು ದೇವಾಲಯಗಳಿಗೆ 6 ದಲಿತರೂ ಸೇರಿ 36 ಜನರ ಬ್ರಾಹ್ಮಣೇತರರನ್ನು ಅರ್ಚಕರನ್ನಾಗಿ ನೇಮಿಸಲು ಶಿಫಾರಸು ಮಾಡಿದೆ.
ಸುಮಾರು 62 ಜನರನ್ನು ಅರ್ಚಕರನ್ನಾಗಿ ನೇಮಿಸಲು ಪಟ್ಟಿ ಬಿಡುಗಡೆಗೊಳಿಸಿದ್ದು, ನೇಮಕಕ್ಕೂ ಪರಿಶಿಷ್ಟ ಜಾತಿ, ಪಂಗಡ ಹಾಗೂ ಇತರೆ ಹಿಂದುಳಿದ ವರ್ಗದವರನ್ನು ಸೇರಿ ಎಲ್ಲರನ್ನೂ ಸಂದರ್ಶನ ಮಾಡಲಾಗಿದೆ ಎಂದು ಮಂಡಳಿ ತಿಳಿಸಿದೆ.
ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗಗಳಿಗೆ ನೇಮಕದಲ್ಲಿ ಶೇ.20ರಷ್ಟು ಮೀಸಲಾತಿ ನೀಡಿದ್ದು ಒಟ್ಟು 20 ಜನ ಈ ವರ್ಗದವರು ಹಾಗೂ ಹಿಂದುಳಿದ ವರ್ಗಗಳಲ್ಲೇ 16 ಜನರಿಗೆ ಜೇಷ್ಠತೆಯ ಆಧಾರದ ಮೇಲೆ ನೇಮಕ ಮಾಡಲಾಗಿದೆ.
ಇದೇ ಮೊದಲ ಬಾರಿಗೆ ಪರಿಶಿಷ್ಟ ಜಾತಿ/ಪಂಗಡ ಹಾಗೂ ಹಿಂದುಳಿದ ವರ್ಗದವರನ್ನು ಅರ್ಚಕರನ್ನಾಗಿ ನೇಮಿಸಿಕೊಳ್ಳಲಾಗುತ್ತಿದೆ ಎಂದು ಮಂಡಳಿ ಅಧ್ಯಕ್ಷ ರಾಜಗೋಪಾಲನ್ ನಾಯರ್ ತಿಳಿಸಿದ್ದಾರೆ. 1949ರಿಂದಲೂ ದೇವಸ್ವೋಮ್ ಮಂಡಳಿ ಕಾರ್ಯನಿರ್ವಹಿಸುತ್ತಿದ್ದು, ಅರ್ಚಕರನ್ನು ನೇಮಿಸುವ ಹೊಣೆ ಹೊತ್ತಿದೆ.
Leave A Reply