ರಾಮ ದೇವರಲ್ಲ ಎನ್ನುವ ಭಗವಾನರೇ, ಈ ಫತ್ವಾ ವಿರುದ್ಧ ಮಾತನಾಡುವ ತಾಕತ್ತೇಕೆ ನಿಮ್ಮಲ್ಲಿಲ್ಲ?
ರಾಮ ದೇವರಲ್ಲ, ಭಗವದ್ಗೀತೆಯ ಕೆಲವು ಅಂಶಗಳು ಮೌಢ್ಯದಿಂದ ಕೂಡಿವೆ, ಹಾಗಾಗಿ ಅದನ್ನು ಸುಟ್ಟುಹಾಕುವೆ ಎಂದು ಆಗಾಗ ಪತ್ರಿಕೆ, ಟಿವಿಯಲ್ಲಿ ಕಾಣಿಸಿಕೊಂಡು ಪೌರುಷ ಮೆರೆಯುವ ಪ್ರೊ.ಕೆ.ಎಸ್. ಭಗವಾನರು ಅನ್ಯಧರ್ಮಗಳ ಮೂಢನಂಬಿಕೆ, ಅನಾಚಾರದ ವಿರುದ್ಧ ಸೊಲ್ಲೆತ್ತುವುದಿಲ್ಲ, ತುಟಿಕ್ ಪಿಟಿಕ್ ಎನ್ನುವುದಿಲ್ಲ. ಆಗ ಮಾತ್ರ ಭಗವಾನರು ಉತ್ತರಕುಮಾರನಾಗುತ್ತಾರೆ. ಇಬ್ಬಂದಿತನದ ಸರದಾರ?ರಾಗುತ್ತಾರೆ.
ಉತ್ತರ ಪ್ರದೇಶದ ಸಹಾರನ್ ಪುರದಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಮಾಡಬಾರದ ಕೆಲಸವನ್ನೇನೂ ಮಾಡಿರಲಿಲ್ಲ. ಎಲ್ಲ ಆಧುನಿಕ ಮಹಿಳೆಯರಂತೆ ಅವರೂ ಸಹ ಬ್ಯೂಟಿ ಪಾರ್ಲರಿಗೆ ಹೋಗಿ ಹುಬ್ಬನ್ನು ನೀಟು ಮಾಡಿಸಿದ್ದರು ಹಾಗೂ ಆ ಮಟ್ಟಸ ಹುಬ್ಬು ಕಾಣುವಂತೆ ಬಟ್ಟೆ ಧರಿಸಿ ತಿರುಗಾಡಿದ್ದರು.
ದರೂಲ್ ಉಲುಂ ದಿಯೊಬಂದ್ ಎಂಬ ಫತ್ವಾ ಕಾರ್ಖಾನೆ ಕೊತಕೊತ ಕುದ್ದಿದ್ದೇ ಆಗ.
ಹೌದು, ಉಲುಂ ಸಂಸ್ಥೆ ಈಗ ಮಹಿಳೆಯ ವಿರುದ್ಧ ಫತ್ವಾ ಹೊರಡಿಸಿದೆ. ಮಹಿಳೆ ಇಸ್ಲಾಮಿಕ್ ಕಾನೂನನ್ನು ವಿರೋಧಿಸಿ, ಇಸ್ಲಾಮೇತರ ಚಟುವಟಿಕೆಯಲ್ಲಿ ತೊಡಗಿದ ಕಾರಣ ಮಹಿಳೆ ವಿರುದ್ಧ ಫತ್ವಾ ಹೊರಡಿಸಲಾಗಿದೆ ಎಂದು ಸಮಜಾಯಿಷಿ ಬೇರೆ ನೀಡಿದ್ದಾರೆ.
ಅಲ್ಲದೆ ಈ ಸಂಸ್ಥೆ ಮುಖ್ಯಸ್ಥ ದರೂಲ್ ಇಫ್ತಾ ಮೌಲಾನ, “ಕೂದಲು ಮಹಿಳೆಯರ ಅಂದವನ್ನು ಹೆಚ್ಚಿಸುತ್ತದೆ. ಅಂಥ ಕೂದಲು ಕತ್ತರಿಸಿಕೊಳ್ಳುವುದು ಇಸ್ಲಾಂಗೆ ವಿರೋಧವಾದ ಕೃತ್ಯ” ಎಂದಿದ್ದಾನೆ.
ಅಲ್ಲ ಸ್ವಾಮಿ, ಕೂದಲು ಮಹಿಳೆಗೆ ಅಂದ ಎಂದ ಮೇಲೆ, ಹುಬ್ಬು ತೋರಿಸಿದರೇಕೆ ಅವರ ವಿರುದ್ಧ ಫತ್ವಾ ಹೊರಡಿಸಬೇಕು? ಅಷ್ಟಕ್ಕೂ ಆ ಮಹಿಳೆಯೇನು, ಹುಬ್ಬನ್ನೇ ಕತ್ತರಿಸಿಕೊಂಡಿಲ್ಲ, ಟ್ರಿಮ್ ಮಾಡಿಸಿಕೊಂಡಿದ್ದಾರಷ್ಟೇ. ಹೀಗಿರುವಾಗ ಮಹಿಳೆ ವಿರುದ್ಧ ಏಕೆ ಫತ್ವಾ ಹೊರಡಿಸಬೇಕು?
ಹಿಂದೆ ದೇಶದ ಹೆಮ್ಮೆಯ ಆಟಗಾರ್ತಿ ಸಾನಿಯಾ ಮಿರ್ಜಾ ಮಿನಿ ಸ್ಕರ್ಟ್ ಹಾಕಿಕೊಂಡು ಟೆನಿಸ್ ಆಡಿದ್ದಕ್ಕೆ (ಈಗಲೂ ಆಡುತ್ತಿದ್ದಾರೆ) ಇದೇ ಇಸ್ಲಾಮಿಕ್ ಧರ್ಮ ಗುರುಗುಳು ಸಾನಿಯಾ ವಿರುದ್ಧ ಫತ್ವಾ ಹೊರಡಿಸಿದ್ದರು. ಜಮ್ಮು-ಕಾಶ್ಮೀರದಲ್ಲಿ ಯುವತಿಯರು ಕಿರುಚಿತ್ರದಲ್ಲಿ ಅಭಿನಯಿಸಿದ್ದಕ್ಕೆ ಫತ್ವಾ ಹೊರಡಿಸಲಾಗಿತ್ತು. ಸೌದಿ ಅರೇಬಿಯಾದಲ್ಲಿ ಮುಸ್ಲಿಂ ಮಹಿಳೆಯರು ಕಾರು ಓಡಿಸಲು ಅನುಮತಿ ಪಡೆಯಲು ಶತಮಾನ ಬೇಕಾಯಿತು. ಇನ್ನು ಮುಸ್ಲಿಂ ಮಹಿಳೆಯರು ಮಸೀದಿ ಪ್ರವೇಶವಂತೂ ನಿಷಿದ್ಧ ಹಾಗೂ ಅಪರಾಧ ಎಂದೇ ಭಾವಿಸಲಾಗಿದೆ.
ಇಸ್ಲಾಂ ಧರ್ಮದಲ್ಲಿ ಇಷ್ಟೆಲ್ಲ ಅಪಸವ್ಯಗಳಿರುವಾಗ, ಕೆ.ಎಸ್.ಭಗವಾನರಂಥ ವಿಚಾರವಾದಿಗಳು, ಇತ್ತೀಚಗೆ ಒಂದೂ ಪುಸ್ತಕ ಬಿಡುಗಡೆಗೊಳಿಸದಿದ್ದರೂ ಸಾಹಿತಿ ಎಂದು ಕರೆಸಿಕೊಳ್ಳುವವರು, ಮೌಢ್ಯ ನಿಷೇಧ ಮಾಡುತ್ತೇನೆ ಎಂದು ಹಿಂದೂ ಧರ್ಮವನ್ನು ಗುರಿಯಾಗಿಸುವ ಸಿದ್ದರಾಮಯ್ಯರಂಥ ರಾಜಕಾರಣಿಗಳು ಏಕೆ ಈ ಮೌಢ್ಯಗಳ ಬಗ್ಗೆ ಮಾತನಾಡುವುದಿಲ್ಲ? ನಿಮ್ಮ ಜಾತ್ಯತೀತ ಸೂಕ್ಷ್ಮ ಮನಸ್ಸೇಕೆ ಈ ಕುರಿತು ಯೋಚಿಸುವುದಿಲ್ಲ?
ಮುಸ್ಲಿಮರ ವಿರುದ್ಧ ಮಾತನಾಡಿದರೆ ಕಲ್ಲು ಬೀಳುತ್ತವೆ ಎಂಬ ಭಯವೇ? ಹಿಂದೂ ಧರ್ಮದ ವಿರುದ್ಧ ಏನು ಬೇಕಾದರೂ ಮಾತನಾಡಬಹುದು ಎಂಬ ದಾರ್ಷ್ಟ್ಯವೇ? ಎಲ್ಲಿ ಮುಸ್ಲಿಮರ ಮತ ತಪ್ಪುತ್ತವೆ ಎಂಬ ದುರಾಲೋಚನೆಯೇ? ಹಿಂದೂ ಧರ್ಮದ ಬಗ್ಗೆ ಅಷ್ಟೆಲ್ಲ ಮಾತನಾಡುವವರಿಗೆ ಇದನ್ನು ಪ್ರಶ್ನಿಸುವ ತಾಕತ್ತಿಲ್ಲ ಎಂದ ಮೇಲೆ ನಿಮ್ಮಲ್ಲೇ ಏನೋ ಸಮಸ್ಯೆ ಇದೆ ಎಂದು ಅನಿಸುತ್ತದೆ.
Leave A Reply