ನನ್ನ ವಿರುದ್ಧ ಪಿತೂರಿ ಮಾಡುವವರು ಧೂಳಿನ ಕಣಕ್ಕೆ ಸಮಾನ: ಮೋದಿ ಗುಡುಗು
ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿ ನಡೆಯನ್ನು ವಿರೋಧಿಸುವವರಿಗೆ, ಸುಖಾಸುಮ್ಮನೆ ತೆಗಳುವವರಿಗೆ, ವಿರೋಧಿಗಳಿಗೆ ಮೋದಿ ಅವರೇ ಸರಿಯಾದ ಟಾಂಗ್ ನೀಡಿದ್ದು, “ನನ್ನ ವಿರುದ್ಧ ಪಿತೂರಿ ಮಾಡುವವರು ಧೂಳಿನ ಕಣಕ್ಕೆ ಸಮಾನ” ಎಂದಿದ್ದಾರೆ.
ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ಹುಟ್ಟೂರು ವಡನಗರಕ್ಕೆ ಭೇಟಿ ನೀಡಿರುವ ಮೋದಿ ಸೋಮವಾರ ಹಟ್ಕೇಶ್ವರದ ಮಹಾದೇವ ದೇವಾಲಯಕ್ಕೆ ಭೇಟಿ ನೀಡಿದ ಬಳಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು.
ನನ್ನ ವಿರುದ್ಧ ಸುಖಾಸುಮ್ಮನೆ ಆರೋಪ ಮಾಡುತ್ತಾರೆ. ನಾವು ಅಭಿವೃದ್ಧಿ ಬಗ್ಗೆ ಯೋಚಿಸಿದರೆ, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಬೇಕಂತಲೇ ಪಿತೂರಿ ಮಾಡುತ್ತಾರೆ. ಅವರೆಲ್ಲ ಧೂಳಿನ ಕಣಕ್ಕೆ ಸಮಾನ ಎಂದಿದ್ದಾರೆ.
“ನಾನು ನರೇಂದ್ರ ಮೋದಿ, ಮಹಾತ್ಮ ಗಾಂಧೀಜಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಜನಿಸಿದ ನಾಡಿನಲ್ಲಿ ಜನಿಸಿದವನು. ದುರುಳರು ಬರುತ್ತಾರೆ, ಹೋಗುತ್ತಾರೆ, ಆದರೆ ಕೊನಗೆ ಸತ್ಯ ಹಾಗೂ ಪ್ರಾಮಾಣಿಕತೆಯೇ ಗೆಲುವು ಸಾಧಿಸುತ್ತದೆ ಎಂದು ಗುಡುಗಿದ್ದಾರೆ.
ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧವೂ ಟೀಕೆ ಮಾಡಿದ ಮೋದಿ, “ಅಟಲ್ ಬಿಹಾರಿ ವಾಜಪೇಯಿ ಸರ್ಕಾರವಿದ್ದಾಗ ದೇಶ ಗಣನೀಯವಾಗಿ ಅಭಿವೃದ್ಧಿ ಹೊಂದಿತು. ಆದರೆ ನಂತರ ಹತ್ತು ವರ್ಷ ಆಡಳಿತ ನಡೆಸಿದ ಸರ್ಕಾರ ಅಭಿವೃದ್ಧಿ ವಿರೋಧಿಯಂತೆ ಕೆಲಸ ಮಾಡಿತು” ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ವಡನಗರ ಪ್ರವಾಸದಲ್ಲಿದ್ದಾರೆ.
Leave A Reply