ತುಳು ಚಿತ್ರರಂಗಕ್ಕೆ ಕೋಸ್ಟಲ್ ವುಡ್ ಹೆಸರು ಬಂದದ್ದು ಹೇಗೆ?
ಈಗ ನಮ್ಮ ಕುಡ್ಲದಲ್ಲಿ .ದಿನಕೊಂದರಂತೆ ಹುಟ್ಟಿಕೊಳ್ಳುವ ತುಳು ಸಿನೆಮಾಗಳ ಸುದ್ದಿ ಆಗಾಗ ಕೋಸ್ಟಲ್ವುಡ್ಎಂಬ ಪದದೊಂದಿಗೆ ಪ್ರಕಟಗೊಳ್ಳುತ್ತಿದೆ.ಈ ಕೋಸ್ಟಲ್ ವುಡ್ ಪದ ಬzಕೆ ಶುರು ಮಾಡಿದ್ದು ಯಾರು ಎನ್ನುವುದರ ಬಗ್ಗೆ ಕುತೂ ಹ ಲವಿದೆಯೇ? ಹಾಲಿವುಡ್,ಸೆಂಡಲ್ ವುಡ್ ನಂತೆನಮ್ಮ ತುಳು ಚಿತ್ರರಂಗಕ್ಕೂ ನಾಮಕರಣ ಮಾಡಿದ್ದು ಸ್ಟೀವನ್ ರೇಗೊ ದಾರಂದಕುಕ್ಕ.ಇವರು ವಿಜಯ ಕರ್ನಾಟಕ ಮಂಗಳೂರು ಆವೃತ್ತಿಯಲ್ಲಿ ಉಪ ಸಂಪಾದಕರಾಗಿ ,ವರದಿಗಾರರಾಗಿ ಎಲ್ಲರಿಗೂ ಚಿರಪರಿಚಿತರು. ಮೂಲತ: ಪುತ್ತೂರು ತಾಲೂಕಿನ ದಾರ೦ದಕುಕ್ಕು ನಿವಾಸಿ ಹಿಲ್ಡಾ ರೇಗೊ ಮತ್ತುಇಗ್ನೇಶಿಯಸ್ ರೇಗೋ ಇವರ ಪುತ್ರ .ಕನ್ನಡ ಸಿನಿಮಾ ಚಿತ್ರರಂಗಕ್ಕೆ ಈಗಾಗಲೇ sandalwood ಎಂಬ ಹೆಸರು ಜಗದೆಲ್ಲೆಡೆ ಹಬ್ಬಿದೆ.ಆದರೆ ಸುಮಾರು 40 ಸಿನಿಮಾ ದಾಟಿದರೂ ಕರಾವಳಿ ತೀರದ ಸಿನಿಮಕ್ಕೊಂದು ನಾಮಕರಣ ಬೇಕು ಎನ್ನುವಾಗ ಇವರಿಗೆ ಹೊಳೆದದ್ದೆ “ಕೊಸ್ಟಲ್ ವುಡ್” ಎಂಬ ಶಬ್ದ .ಈಗ coastalwood ಪದ ದೇಶದೆಲ್ಲೆಡೆ ಹರಡಿದ್ದು ಎಲ್ಲ ಮಾಧ್ಯಮಗಳು ಈಗ ಕೊಸ್ಟಲ್ ವುಡ್ ಎಂದೇ ಇಡೀ ತುಳು ಚಿತ್ರಂಗವನ್ನು ಕರೆಯುತ್ತಿದೆ .ಕರಾವಳಿ ಸಿನಿಮಾ ಸುದ್ದಿಗಳಿಗೆ ಮಸಾಲೆ ಅರೆದು ಓದುಗನನ್ನು ಕುತೂಹಲ ಮೂಡಿಸುವಂತೆ ಮಾಡುವ ಕಲೆ ರೇಗೊರವರದು .ಇತ್ತೇಚೆಗೆ ಕುಡ್ಲ ಗಾಸಿಪ್ ನ್ನುಪ್ರಕಟಿಸಿ ಪ್ರತಿ ವಾರ ಕಾಯುವಂತೆ ಮಾಡುತ್ತಿರುವುದು ನಿಮಗೆಲ್/>ಲರಿಗೂ ತಿಳಿದ ಸಂಗತಿ. ಕನ್ನಡ ಪತ್ರಿಕೆಯಲ್ಲಿ ಅದುಕೂಡ ರಾಜ್ಯವ್ಯಾಪ್ತಿಯ ಅವೃತ್ತಿಯಲ್ಲಿಮಂಗಳೂರಿನ ಸಿನಿಮಾ ಸುದ್ದಿಗಳ ಬಗ್ಗೆ ವಿಶೇಷವಾಗಿ ‘ಕುಡ್ಲ’ ಎನ್ನುವ ತುಳು ಶಬ್ದವನ್ನು ಪ್ರಯೋಗಮಾಡಿದವರಲ್ಲಿ ಇವರು ಮೊದಲಿಗರು.
Leave A Reply