ಸಸಿಕಾಂತ್ ಸೆಂಥಿಲ್ ಎಸ್ ದಕ್ಷಿಣ ಕನ್ನಡದ ನೂತನ ಜಿಲ್ಲಾಧಿಕಾರಿ
Posted On October 11, 2017
0
ಜುಲೈ 22, 2016 ರಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ನೇಮಕವಾಗಿದ್ದ ಡಾ|ಜಗದೀಶ್ ಅವರು ಸುಮಾರು 15 ತಿಂಗಳ ಅಧಿಕಾರಾವಧಿಯನ್ನು ಮುಗಿಸಿ ಭೂ ವಿಜ್ಞಾನ ಮತ್ತು ಗಣಿ ಇಲಾಖೆಯ ನಿರ್ದೇಶಕರಾಗಿ ವರ್ಗಾವಣೆಯಾಗುತ್ತಿದ್ದಾರೆ. ಅವರ ಸ್ಥಾನಕ್ಕೆ ಭೂ ವಿಜ್ಞಾನ ಮತ್ತು ಗಣಿ ಇಲಾಖೆಯ ನಿರ್ದೇಶಕರಾಗಿ ಕಳೆದ ನವೆಂಬರ್ ನಿಂದ ಸೇವೆಯಲ್ಲಿದ್ದ ಸಸಿಕಾಂತ್ ಸೆಂಥಿಲ್ ಎಸ್ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ.
2005 ನೇ ಐಎಎಸ್ ಬ್ಯಾಚಿನ ಜಗದೀಶ್ ಅವರಿಂದ ತೆರವಾಗುತ್ತಿರುವ ಸ್ಥಾನಕ್ಕೆ 2009 ನೇ ಬ್ಯಾಚಿನ 38 ವರ್ಷದ ಸೆಂಥಿಲ್ ಅವರ ನೇಮಕವಾಗಿದೆ.
ತಿರುಚಿರಾಪಳ್ಳಿಯಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿರುವ ಸೆಂಥಿಲ್ ಅವರು ಮೂರು ವರ್ಷ ಬಳ್ಲರಿಯಲ್ಲಿ ಸಹಾಯಕ ಕಮೀಷನರ್ ಆಗಿ, ನಂತರ ಶಿವಮೊಗ್ಗ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾ ಅಧಿಕಾರಿಯಾಗಿ ಬಳಿಕ ಚಿತ್ರದುರ್ಗ ಹಾಗೂ ರಾಯಚೂರಿನಲ್ಲಿ ಜಿಲ್ಲಾಧಿಕಾರಿಯಾಗಿ ಕರ್ಥವ್ಯ ನಿರ್ವಹಿಸಿದ್ದಾರೆ.
Trending Now
ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
December 23, 2025
ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
December 23, 2025









