ಪ್ರಧಾನ ಮಂತ್ರಿಯ ನಿಂದಿಸುವುದೆಂದರೆ ಅದು ರಾಷ್ಟ್ರದ ಜನರ ನಿಂದಿಸಿದಂತೆ- ಚಕ್ರವರ್ತಿ ಸೂಲಿಬೆಲೆ
Posted On October 13, 2017
0
ಪ್ರಧಾನಿ ನರೇಂದ್ರ ಮೋದಿಯನ್ನು ಹಜ್ ಖಾತೆಯ ಸಚಿವ ರೋಷನ್ ಬೇಗ್ ಸೂ.. ಬೋ..ಮಗ ಎಂದು ಅವಾಚ್ಯವಾಗಿ ನಿಂದಿಸಿ ಮಾತನಾಡಿದ್ದು ಈಗ ವಿವಾದಕ್ಕೆ ಕಾರಣವಾಗಿದೆ.
ಪ್ರಧಾನಿ ಬಗ್ಗೆ ರೋಷನ್ ಬೇಗ್ ಅಶ್ಲೀಲ ಪದ ಬಳಕೆ ವಿಚಾರವಾಗಿ ಚಕ್ರವರ್ತಿ ಸೂಲಿಬೆಲೆ ಮಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದು ನಾಡಿನ ಜನರ ಪ್ರತಿನಿಧಿಯಾಗಿ, ಮಂತ್ರಿ ಪದವಿಯಲ್ಲಿ ಕುಳಿತ ವ್ಯಕ್ತಿಗಳು ರಾಷ್ಟ್ರದ ಪ್ರಧಾನ ಮಂತ್ರಿಯ ಕುರಿತಂತೆ ಇಷ್ಟು ತುಚ್ಛ ಪದಗಳನ್ನು ಬಳಸಬಹುದೇ? ರಾಜ್ಯದ ಪ್ರತಿನಿಧಿ ಆಡುವ ಮಾತೆಂದರೆ ಅದು ರಾಜ್ಯದ ಜನತೆಯ ಮಾತು. ಪ್ರಧಾನ ಮಂತ್ರಿಯ ನಿಂದಿಸುವುದೆಂದರೆ ಅದು ರಾಷ್ಟ್ರದ ಜನರ ನಿಂದಿಸಿದಂತೆ. ಯಾವ ಪಕ್ಷದವರಾದರೂ ಸರಿ ಇನ್ನುಮುಂದೆ ಇಂತಹ ಚಟುವಟಿಕೆಗಳನ್ನು ಸಹಿಸಲು ಸಾಧ್ಯವೇ ಇಲ್ಲ. ಪ್ರಧಾನಿಯನ್ನು ನಿಂದಿಸುವುದೆಂದರೆ ಅದು ನಮ್ಮನ್ನೆಲ್ಲ ನಿಂದಿಸಿದಂತೆ ಎಂದು, iamModi ಎಂಬ ಹ್ಯಾಶ್ ಟ್ಯಾಗ್ನೊಂದಿಗೆ ರಾಜ್ಯದ ಜನತೆಯ ಪರವಾಗಿ ನಾಗರಿಕ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.
Trending Now
ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ
December 22, 2025
ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!
December 22, 2025









