• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಸುದ್ದಿ 

ರಕ್ತವನ್ನು ಚೆಲ್ಲದೆ ಯುದ್ದವನ್ನು ಗೆಲ್ಲಲು ಸಾಧ್ಯವಿಲ್ಲ ಹಾಗೇನೇ ಬೆವರನ್ನು ಚೆಲ್ಲದೆ ಬದುಕನ್ನು ಗೆಲ್ಲಲು ಸಾಧ್ಯವಿಲ್ಲ-ಅನಂತ್ ಕುಮಾರ್ ಹೆಗ್ಡೆ

Tulunadu News Posted On October 16, 2017
0


0
Shares
  • Share On Facebook
  • Tweet It

ಮಂಗಳೂರಿನ: ಪುರಭವನದಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆ “ಪ್ರಧಾನಮಂತ್ರಿ ಮುದ್ರಾ ” MUDRA(Micro Unit Devolopment Refinancial Agency) ಯೋಜನೆಯ ಪ್ರೋತ್ಸಾಹ ಅಭಿಯಾನ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಅನಂತ್ ಕುಮಾರ್ ಹೆಗ್ಡೆ ಮಾತನಾಡಿದ ಅವರು, ಸಾಲ ಮೇಳ ಹೊಸತೇನಲ್ಲ ಮುಂಚೆಯೂ ಬ್ಯಾಂಕುಗಳು ಸಾಲ ನೀಡುತಿತ್ತು ಮುಂದೆಯೂ ನೀಡುತ್ತಾ ಇರುತ್ತವೆ, ಆದರೆ ಈ ಹಿಂದಿನ ಸಾಲ ಮೇಳಕ್ಕೂ ಈಗಿನ ಸಾಲ ಮೇಳಕ್ಕೂ ವ್ಯತಾಸಗಳಿವೆ, ಈಗಿನ ಪ್ರಧಾನ ಮಂತ್ರಿಯ ಮುದ್ರಾಯೋಜನೆಯು ಜನರಲ್ಲಿ ಆರ್ಥಿಕ ಚಟುವಟಿಕೆ, ಉದ್ದಿಮೆ ಶೀಲತೆ ಹೆಚ್ಚಾಗಬೇಕು, ನಾವೇ ಉದ್ಯೋಗ ಸೃಷ್ಟಿ ಮಾಡುವಂತಾಗಬೇಕು ಈ ನಿಟ್ಟಿನಲ್ಲಿ ಒಂದು ಒಳ್ಳೆಯ ಸಂಕಲ್ಪದೊಂದಿಗೆ ಮುದ್ರಾ ಯೋಜನೆ ಪ್ರಾರಂಭ ಮಾಡಲಾಗಿದೆ, ರಕ್ತವನ್ನು ಚೆಲ್ಲದೆ ಯುದ್ದವನ್ನು ಗೆಲ್ಲಲು ಸಾಧ್ಯವಿಲ್ಲ ಹಾಗೇನೇ ಬೆವರನ್ನು ಚೆಲ್ಲದೆ ಬದುಕನ್ನು ಗೆಲ್ಲಲು ಸಾಧ್ಯವಿಲ್ಲ, ಕೌಶಲ್ಯ ಇಲ್ಲದೇನೆ ಬದುಕು ಸುಂದರವಾಗಲು ಸಾಧ್ಯವಿಲ್ಲ, ಯಶಸ್ಸಿನ ಹೆಜ್ಜೆಯನ್ನಿಡಬೇಕಾದರೆ ಕೌಶಲ್ಯ ಬೇಕು, ಹಾಗಾಗಿ ಭಾರತ ಸರ್ಕಾರ ಕೌಶಲ್ಯ ಅಭಿವೃದ್ದಿ ತರಬೇತಿಗೆ ಎಲ್ಲ ರೀತಿಯ ಸಹಕಾರ ನೀಡಲು ಬಯಸುತ್ತದೆ. ಈ ದೇಶ ಕಟ್ಟಬೇಕಾದರೆ ಸಣ್ಣ ಸಣ್ಣ ಉದ್ಯಮಗಳೇ ಜಾಸ್ತಿಯಾಗಬೇಕು, ಯಾರಿಗೆ ಶ್ರಮದ ಕಲ್ಪನೆ ಇರೋದಿಲ್ಲ ಅಂತಹ ಬದುಕಿಗೆ ಅರ್ಥ ಇರೋದಿಲ್ಲ,  ಶ್ರಮವಿಲ್ಲದೆ ಬದುಕು ಅರ್ಥವಾಗಲು ಸಾಧ್ಯವಿಲ್ಲ, ಒಂದು ಗೆಲುವಿನ ಹಿಂದೆ ಶ್ರಮವಿರುತ್ತದೆ ಈ ನಿಟ್ಟಿನಲ್ಲಿ ಮುದ್ರಾ ಯೋಜನೆಯ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಸಂಸದ ನಳಿನ್ ಕುಮಾರ್ ಕಟೀಲ್ ವಹಿಸಿದ್ದರು ಮತ್ತು ಕೇಂದ್ರ ಸಚಿವರಾದ ಶ್ರೀ ಅನಂತಕುಮಾರ್ ಮುಖ್ಯ ಅಭ್ಯಾಗತರಾಗಿದ್ದರು, ಕಾರ್ಯಕ್ರಮದಲ್ಲಿ ಮುದ್ರಾ ಹಾಗು ಸ್ಟಾಂಡ್ ಅಪ್ ಇಂಡಿಯಾ ಯೋಜನೆಗಳ ಫಲಾನುಭವಿಗಳಿಗೆ ಆಯಾಯ ಬ್ಯಾಂಕ್ ಮುಖೇನ ಚೆಕ್ಗಳನ್ನು ವಿತರಿಸಲಾಯಿತು.

0
Shares
  • Share On Facebook
  • Tweet It




Trending Now
ಮಹಾನಗರ ಪಾಲಿಕೆ ಮೇ 1ರಿಂದ ನೀರಿನ ರೇಷನಿಂಗ್ ಘೋಷಣೆ!
Tulunadu News April 27, 2026
ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
Tulunadu News April 14, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮಹಾನಗರ ಪಾಲಿಕೆ ಮೇ 1ರಿಂದ ನೀರಿನ ರೇಷನಿಂಗ್ ಘೋಷಣೆ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
  • Popular Posts

    • 1
      ಮಹಾನಗರ ಪಾಲಿಕೆ ಮೇ 1ರಿಂದ ನೀರಿನ ರೇಷನಿಂಗ್ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search