ಭಾರತದೊಂದಿಗೆ ಶತಮಾನದ ಸಂಬಂಧ ಹೊಂದುವ ಇಚ್ಛೆಯಿದೆ: ಅಮೆರಿಕ
ವಾಷಿಂಗ್ಟನ್: ಭಾರತ-ಅಮೆರಿಕ ಬರೀ ರಾಜತಾಂತ್ರಿಕ ಸಂಬಂಧ ಹೊಂದಿರುವ ಜತೆಗೆ ತಾಂತ್ರಿಕ ಸಹಭಾಗಿತ್ವ ಹೊಂದಿರುವ ರಾಷ್ಟ್ರಗಳು ಎಂದು ಅಮೆರಿಕ ಸರ್ಕಾರದ ಕಾರ್ಯದರ್ಶಿ ರೆಕ್ಸ್ ಟಿಲ್ಲರ್ ಸನ್ ಹೇಳಿದ್ದಾರೆ.
ಉಭಯ ರಾಷ್ಟ್ರಗಳ ನಡುವೆ ವಿಶ್ವಾಸಾರ್ಹ ಸಂಬಂಧವೊಂದು ಮೊಳಕೆಯೊಡೆದಿದ್ದು, ಒಗ್ಗೂಡಿ ಕೆಲಸ ಮಾಡಿದರೆ ಉತ್ತಮ ಭವಿಷ್ಯ ಹೊಂದಿವೆ. ಈ ದಿಸೆಯಲ್ಲಿ ಭಾರತ ಉತ್ತಮ ಹೆಜ್ಜೆಯಿಟ್ಟಿದೆ ಎಂದಿದ್ದಾರೆ.
ಎರಡೂ ರಾಷ್ಟ್ರಗಳು ಅಭಿವೃದ್ಧಿಯ ಅಡಿಪಾಯದ ಮೇಲೆ ಬೆಳೆಯುತ್ತಿದ್ದು, ಮುಂದಿನ 100 ವರ್ಷಗಳವರಗೆ ಭಾರತ-ಅಮೆರಿಕ ಉತ್ತಮ ಸಂಬಂಧ, ಪರಸ್ಪರ ಸಹಕಾರ, ಅಭಿವೃದ್ಧಿ, ಏಳಿಗೆ ಹಾಗೂ ಮುಂದಿನ ಪೀಳಿಗೆಗೆ ಭದ್ರ ಭವಿಷ್ಯ ಕಟ್ಟುವ ಜವಾಬ್ದಾರಿ ಹೊಂದಿವೆ ಎಂದು ತಿಳಿಸಿದ್ದಾರೆ.
ಭಾರತದ ನೋಟ್ಯಂತರ ಹಾಗೂ ಜಿಎಸ್ ಟಿ ಕುರಿತು ಪರೋಕ್ಷವಾಗಿ ಉಲ್ಲೇಖಿಸಿದ ರೆಕ್ಸ್, “ಭಾರತ ಇತ್ತೀಚೆಗೆ ಹಲವು ಆರ್ಥಿಕ ಸುಧಾರಣಾ ಕ್ರಮ ಕೈಗೊಂಡಿದೆ. ಮುಂದೆಯೂ ಇಂಥ ಕ್ರಮಗಳನ್ನೇ ತೆಗೆದುಕೊಳ್ಳುವ ಅವಶ್ಯವಿದೆ. ದೇಶೀಯ ಹಾಗೂ ವಿದೇಶಿ ಬಂಡವಾಳ ಹೂಡಿಕೆಯತ್ತ ಭಾರತ ದಿಟ್ಟ ಹೆಜ್ಜೆ ಇಡುವ ಅವಶ್ಯವಿದೆ ಎಂದಿದ್ದಾರೆ.
Leave A Reply