ಮಟನ್ ಬಿರಿಯಾನಿ ಎಂದು ಗೋಮಾಂಸ ವಿತರಣೆ: ಮುಸ್ಲಿಮರ ಬಿರಿಯಾನಿ ಅಂಗಡಿ ಮುಚ್ಚಿಸಿದ ಹಿಂದೂಗಳು
Posted On October 20, 2017
0

ಕೋಲ್ಕತಾ: ಕೋಲ್ಕತಾ ನಗರದ ಮುಸ್ಲಿಮರ ಮಾಲೀಕತ್ವದ ಮಟನ್ ಬಿರಿಯಾನಿ ಹೋಟೆಲ್ ನಲ್ಲಿ ಮಟನ್ ಬಿರಿಯಾನಿ ಎಂದು ಗೋಮಾಂಸ ವಿತರಣೆ ಮಾಡಿದ್ದಕ್ಕೆ ಆಕ್ರೋಶಗೊಂಡ ಹಿಂದೂಗಳು ಹೋಟೆಲ್ ಮುಚ್ಚಿಸಿದ್ದಾರೆ.
ಹಿಂದೂಗಳು ಗೋಮಾಂಸ ಖರೀದಿಸುವುದಿಲ್ಲ. ಇದರಿಂದ ವ್ಯಾಪಾರಕ್ಕೆ ಹಿನ್ನಡೆಯಾಗುತ್ತದೆ ಎಂದು ಬಗೆದ ಮುಸ್ಲಿಮರು ಮಟನ್ ಬಿರಿಯಾನಿ ಹೆಸರಲ್ಲಿ ಗೋಮಾಂಸ ಮಾರುವ ಮೂಲಕ ಹಿಂದೂಗಳಿಗೂ ಗೋಮಾಂಸ ತಿನ್ನಿಸುವ ಹುನ್ನಾರ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮೊದಲಿಗೆ ರಾಜರ್ಹಾತ್, ಮಧ್ಯಮಗ್ರಾಮ್ ಎಂಬ ಪ್ರದೇಶಗಳಲ್ಲಿ ಮುಸ್ಲಿಮರ ಮಾಲೀಕತ್ವದ ಹೋಟೆಲ್ಗಳಲ್ಲಿ ಈ ಆರೋಪ ಕೇಳಿಬಂದಿದ್ದವು. ಈಗ ಉತ್ತರ ಕೋಲ್ಕತಾದ ಶ್ಯಾಮ್ ಬಜಾರ್ ಹಾಜಿ ದಾ ಬಿರಿಯಾನಿ ಎಂಬ ಹೋಟೆಲ್ ನಲ್ಲಿ ಗೋಮಾಂಸ ಮಾರಾಟ ಮಾಡಿದ ಹಿನ್ನೆಲೆಯಲ್ಲಿ ಹಿಂದೂಗಳು ಹೋಟೆಲ್ ಮುಚ್ಚಿದ್ದಾರೆ.