ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರು ಬೇಡ: ಅನಂತಕುಮಾರ್ ಹೆಗಡೆ
ಮಂಗಳೂರು: ಹಲವು ದಿಟ್ಟ ನಡೆ ಹಾಗೂ ಹೇಳಿಕೆಗಳಿಂದಲೇ ಮನೆಮಾತಾಗಿರುವ ಉತ್ತರ ಕನ್ನಡ ಸಂಸದ ಹಾಗೂ ಕೇಂದ್ರ ಕೌಶಲಭಾವೃದ್ಧಿ ಖಾತೆ ರಾಜ್ಯ ಸಚಿವ ಅನಂತಕುಮಾರ್ ಹೆಗಡೆ ಈಗ ಮತ್ತೊಂದು ದಿಟ್ಟ ನಿರ್ಧಾರ ಘೋಷಿಸಿದ್ದು, “ಟಿಪ್ಪು ಸುಲ್ತಾನ್ ಜಯಂತಿಯ ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಹೆಸರು ಮುದ್ರಿಸುವುದು ಬೇಡ” ಎಂದಿದ್ದಾರೆ.
ಹೌದು, ಈ ಕುರಿತು ಅನಂತಕುಮಾರ್ ಹೆಗಡೆ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ತಮ್ಮ ಹೆಸರು ಮುದ್ರಿಸದಂತೆ ತಿಳಿಸಿದ್ದಾರೆ. ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಣೆ ಕುರಿತು ರಾಜ್ಯದ ಎಲ್ಲ ಸರ್ಕಾರಿ ಕಚೇರಿಗಳಿಗೆ ನೋಟಿಸ್ ನೀಡಿದೆ. ಆದರೆ ಸರ್ಕಾರದ ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರು ಉಲ್ಲೇಖಿಸುವುದು ಬೇಡ ಎಂದು ಹೆಗಡೆ ಅವರ ವೈಯಕ್ತಿಕ ಕಾರ್ಯದರ್ಶಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಕಳೆದ ವರ್ಷವೂ ಅನಂತಕುಮಾರ್ ಹೆಗಡೆ ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಹೆಸರು ಉಲ್ಲೇಖಿಸದಂತೆ ಉತ್ತರ ಕನ್ನಡದ ಡೆಪ್ಯೂಟಿ ಕಮಿಷನರ್ ಅವರಿಗೆ ತಿಳಿಸಿದ್ದರು. 2015ರಿಂದಲೂ ಬಿಜೆಪಿ ಟಿಪ್ಪು ಜಯಂತಿಯನ್ನು ವಿರೋಧಿಸುತ್ತಿದೆ.
ಅದರಲ್ಲೂ ಅನಂತಕುಮಾರ್ ಹೆಗಡೆ ಅವರಂತೂ, “ಟಿಪ್ಪು ಕನ್ನಡ ಹಾಗೂ ಹಿಂದೂ ವಿರೋಧಿ. ಅವರ ಜಯಂತಿ ಆಚರಣೆ ಸಲ್ಲ” ಎಂದು ಹೇಳಿಕೆ ನೀಡಿದ್ದರು.
Leave A Reply