ಕಾಶ್ಮೀರದಲ್ಲಿ ಹಿಂದೂ ಪಂಡಿತರಿಗಿಲ್ಲ ನೆಮ್ಮದಿ, ಮುಸ್ಲಿಮರಿಂದ ದಾಳಿ
ಶ್ರೀನಗರ: ಕಾಶ್ಮೀರದಲ್ಲಿ ಹಿಂದೂ ಪಂಡಿತರು ನೆಮ್ಮದಿಯಿಂದ ಇರುವಂತಿಲ್ಲ ಎಂಬಂತೆ ಶಪಥಗೈದಿರುವ ಮುಸ್ಲಿಮರು ಮತ್ತೆ ಹಿಂದೂಗಳ ಮೇಲೆ ಕಿರುಕುಳ ನೀಡಲು ಆರಂಭಿಸಿದ್ದಾರೆ.
ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಹಿಂದೂ ಕುಟುಂಬವೊಂದು ದೀಪ ಹಚ್ಚಿ, ಮನೆಯನ್ನು ದೀಪಗಳಿಂದ ಅಲಂಕಾರ ಮಾಡಿ ದೀಪಾವಳಿ ಆಚರಿಸಲು ಸಿದ್ಧವಾಗಿದ್ದರು. ಆಗ ಕೆಲ ಮುಸ್ಲಿಂ ಮೂಲಭೂತವಾದಿಗಳು ಹಿಂದೂ ಕುಟುಂಬದ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಅಲ್ಲದೆ ಹಿಂದೂಗಳು ಈ ಕುರಿತು ಪ್ರಶ್ನಿಸಿದರೆ, ಕಾಶ್ಮೀರದಲ್ಲಿ ಹಿಂದೂ ಹಬ್ಬ ಆಚರಿಸಲು ಬಿಡುವುದಿಲ್ಲ. ಹಾಗೊಂದು ವೇಳೆ ಆಚರಿಸಲೇಬೇಕು ಎಂದಿದ್ದರೆ ಜಮ್ಮುವಿಗೆ ತೆರಳಿ, ಅಲ್ಲೇ ನೆಲೆಸಿ ಎಂದಿದ್ದಾರೆ.
ಇದರಿಂದ ವಿಚಲಿತರಾದ ಹಿಂದೂಗಳು ಭದ್ರತಾ ಸಿಬ್ಬಂದಿಯನ್ನು ಕರೆದಿದ್ದಾರೆ. ಬಳಿಕ ಪೊಲೀಸರು ಹಿಂದೂಗಳಿಗೆ ರಕ್ಷಣೆ ಒದಗಿಸಿದರಾದರೂ ಹಬ್ಬ ಆಚರಣೆಗೆ ಅವಕಾಶ ನೀಡಿಲ್ಲ ಎಂದು ತಿಳಿದುಬಂದಿದೆ.
ಆದಾಗ್ಯೂ, ಒಬ್ಬ ಮುಸ್ಲಿಮನ ಮೇಲೆ ದಾಳಿಯಾದರೆ ಬೊಬ್ಬೆ ಹಾಕುವ, ಎಡಪಂಥೀಯರ ಕೊಲೆಯಾದರೂ ಹಿಂದೂಗಳೆ ಕೊಂದರು ಎಂದು ತಾರಸ್ವರದಲ್ಲಿ ಚೀರಾಡುವ ಬುದ್ಧಿಜೀವಿಗಳು ಮಾತ್ರ ಹಿಂದೂಗಳಿಗೆ ಏನೇ ಆದರೂ, ದಶಕಗಳಿಂದ ಕಾಶ್ಮೀರದಲ್ಲಿ ಹಿಂದೂ ಪಂಡಿತರ ಮೇಲೆ ಹಲ್ಲೆಯಾಗುತ್ತಿದ್ದರೂ, ಈ ಕುರಿತು ಮಾತ್ರ ಸೊಲ್ಲೆತ್ತದೆ ತಮ್ಮ ಇಬ್ಬಂದಿತನ ಪ್ರದರ್ಶಿಸುತ್ತಿದ್ದಾರೆ.
Leave A Reply