ರಾಹುಲ್ ಜಾಲತಾಣದ ಖ್ಯಾತಿಯ ಹಿಂದೆ ನಕಲಿ ಟ್ವೀಟ್ ಗಳ ದಂಧೆ?
ಈ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಯಾವುದೇ ದಿಸೆಯಲ್ಲೂ ಖ್ಯಾತಿ ಗಳಿಸಲು ಹೊರಟರೆ, ಪ್ರಮುಖ ಚಿಂತನೆ ಹರಿಬಿಟ್ಟರೆ ಅದರೆ ಹಿಂದೆ ಕೆಲವು ನಕಲಿ ಮುಖವಾಡಗಳು ಇರುತ್ತವೆ ಹಾಗೂ ಅವು ಸಕಾಲಿಕವಾಗಿ ಬಯಲಾಗುತ್ತವೆ ಎಂಬ ಮಾತಿಗೆ ಮತ್ತೊಂದು ಪುಷ್ಟಿ ಸಿಕ್ಕಿದೆ.
ಹೌದು, ರಾಹುಲ್ ಗಾಂಧಿ ಇತ್ತೀಚೆಗೆ ಟ್ವಿಟರ್ ನಲ್ಲಿ ಭಾರಿ ಖ್ಯಾತಿ ಗಳಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರಿಗಿಂತಲೂ ಜಾಸ್ತಿ ರೀ ಟ್ವೀಟ್ ಪಡೆದ ಹೆಗ್ಗಳಿಕೆಗೂ ರಾಹುಲ್ ಖ್ಯಾತಿಯಾಗಿದ್ದರು. ಈ ಖ್ಯಾತಿಯಿಂದಲೇ ಅವರು ಮತ್ತೊಂದಿಷ್ಟು ಫಾಲೋವರ್ ಗಳನ್ನು ಸಹ ಪಡೆದಿದ್ದರು. ಆದರೆ ಈಗ ಇದೆಲ್ಲದರ ಹಿಂದೆ ರಾಹುಲ್ ಗಾಂಧಿ ವಿದೇಶದಲ್ಲಿ ಹೊಂದಿರುವ ನಕಲಿ ಟ್ವಿಟರ್ ಖಾತೆಗಳ ಮರ್ಮವಿದೆ ಎಂಬ ಅನುಮಾನ ವ್ಯಕ್ತವಾಗಿದೆ.
ರಾಹುಲ್ ಗಾಂಧಿ ಕೆಲ ದಿನಗಳ ಹಿಂದೆ ಅಮೆರಿಕ ಪ್ರವಾಸ ಕೈಗೊಂಡಿದ್ದಾಗ ಡೊನಾಲ್ಡ್ ಟ್ರಂಪ್ ಪೋಸ್ಟ್ ಗೆ ರೀ ಟ್ವೀಟ್ ಮಾಡಿದ್ದರು. ಇದಾದ ಕೆಲ ಸಮಯದಲ್ಲೇ ರಾಹುಲ್ ಪ್ರತಿಕ್ರಿಯೆಗೆ ಸುಮಾರು 20 ಸಾವಿರಕ್ಕೂ ಅಧಿಕ ರೀ ಟ್ವೀಟ್ ಗಳು ದಾಖಲಾದವು. ಇದೇ ರಾಹುಲ್ ಖ್ಯಾತಿಯನ್ನು ಹೆಚ್ಚಿಸಿ ಪ್ರಧಾನಿ ಮೋದಿ ಅವರಿಗಿಂತಲೂ ಹೆಚ್ಚಿನ ರೀ ಟ್ವೀಟ್ಸ್ ಪಡೆದ ನಾಯಕ ಎಂಬ ಅಗ್ಗಳಿಕೆಗೆ ಪಾತ್ರರದರು.
ಇದಕ್ಕೆಲ್ಲ ಕಾರಣ, ರಾಹುಲ್ ಗಾಂಧಿಗೆ ರೀ ಟ್ವೀಟ್ ಮಾಡಿರುವ ಹಿಂದೆ ವಿದೇಶಿಗರ ನಕಲಿ ಖಾತೆಗಳೇ ಕಾರಣ ಎಂದು ತಿಳಿದುಬಂದಿದೆ. ಆದಾಗ್ಯೂ ಇದಕ್ಕೆ ನಿದರ್ಶನವಾಗಿ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಢ್ ಅವರು ರಾಹುಲ್ ಖಾತೆಗೆ ಬಂದ ವಿದೇಶಿಗರ ನಕಲಿ ಖಾತೆದಾರರ ಸ್ಕ್ರೀನ್ ಶಾಟ್ ಸಹ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ರಾಹುಲ್ ಗಾಂಧಿಯ ಈ ನಕಲಿ ರೀ ಟ್ವೀಟ್ ಮರ್ಮದ ಕುರಿತು ಕೇಂದ್ರ ಸಚಿವೆ ಸ್ಮೃತಿ ಇರಾನಿ ಪ್ರತಿಕ್ರಿಯಿಸಿದ್ದು, “ರಾಹುಲ್ ಗಾಂಧಿ ಅವರು ರಷ್ಯಾ, ಇಂಡೋನೇಷ್ಯಾ ಹಾಗೂ ಖಜಕಿಸ್ತಾನ್ ದೇಶಗಳ ಚುನಾವಣೆಯಲ್ಲೂ ಗೆಲುವು ಸಾಧಿಸುವ ಯೋಜನೆ ರೂಪಿಸಿದ್ದಾರೆ’ ಎಂದು ಛೇಡಿಸಿದ್ದಾರೆ.
ಇಷ್ಟು ವರ್ಷಗಳಿಂದ ರಾಹುಲ್ ಗಾಂಧಿ ಟ್ವಿಟರ್ ನಲ್ಲಿದ್ದರೂ ಬರದ ಖ್ಯಾತಿ, ಏಕಾಏಕಿ ಬಂದಾಗಲೇ ಅಂಥಾದ್ದೊಂದು ಅನುಮಾನ ಮೂಡಿತ್ತು. ಈಗ ಅದಕ್ಕೆ ರೆಕ್ಕೆಪುಕ್ಕ ಬಂದಿವೆ ಅಷ್ಟೆ. ಕಾಂಗ್ರೆಸ್ ಅಧ್ಯಕ್ಷನಾಗಲು ಹೊರಟಿರುವ ರಾಹುಲ್ ಗಾಂಧಿ ಇಷ್ಟನ್ನೂ ಮೇಂಟೇನ್ ಮಾಡದಿದ್ದರೆ ಹೇಗೆ. ಅದೂ ಇಟಲಿಯ ತಾಯಿಯನ್ನಿಟ್ಟುಕೊಂಡು!
Leave A Reply