ನೋಟು ನಿಷೇಧದ ಗುನ್ನ: ನಕಲಿ ಕಂಪನಿಗಳ ವಿರುದ್ಧ ಅಪರಾಧ ಪ್ರಕರಣ ದಾಖಲು
ದೆಹಲಿ: ನೋಟು ಅಮಾನ್ಯ ಜಾರಿಯಿಂದ ಏನು ಪ್ರಯೋಜನವಾಯಿತು ಎಂದು ಸುಖಾಸುಮ್ಮನೆ ಪ್ರಶ್ನಿಸುವವರಿಗೆ ಉತ್ತರ ಸಿಗುವ ಕಾಲ ಬಂದಿದ್ದು, ನಕಲಿ ಕಂಪನಿಗಳ ವಿರುದ್ಧ ಅಪರಾಧ ಪ್ರಕರಣ ದಾಖಲಿಸಲಾಗುತ್ತದೆ ಎಂದು ತಿಳಿದುಬಂದಿದೆ.
ನೋಟು ನಿಷೇಧದ ಬಳಿಕ ಅಕ್ರಮವಾಗಿ ಹಣ ವರ್ಗಾವಣೆ, ಮೋಸ, ಲೆಕ್ಕಪತ್ರ ಇಲ್ಲದಿರುವುದು ಸೇರಿ ನಾನಾ ಅಕ್ರಮಗಳಲ್ಲಿ ತೊಡಗಿರುವ ನಕಲಿ ಕಂಪನಿಗಳ ವಿರುದ್ಧ ಅಪರಾಧ ಪ್ರಕರಣ ದಾಖಲಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಕಂಪನಿಗಳ ಕಾಯ್ದೆ ಪ್ರಕಾರ ಅಕ್ರಮ ಎಸಗಿದ ಕುರಿತು ಯಾವುದೇ ಕಂಪನಿಗಳ ವಿರುದ್ಧದ ಆರೋಪ ಸಾಬೀತಾದರೆ ಕಂಪನಿಗಳ ನೋಂದಣಿ ರದ್ದು ಹಾಗೂ ಮಾಲೀಕರಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲು ಮುಂದಾಗಿದೆ. ಅಲ್ಲದೆ, ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸದ, ಸರಿಯಾದ ದಾಖಲೆ ಹೊಂದಿರದ ಹಾಗೂ 2013ರ ಕಂಪನಿಗಳ ಕಾಯ್ದೆಯ ನಿಯಮ ಉಲ್ಲಂಘಿಸಿದ ಕಂಪನಿಗಳಿಗೂ ಈ ನಿಯಮ ಅನ್ವಯವಾಗುತ್ತದೆ.
ಆದಾಗ್ಯೂ, ಕಳೆದ ತಿಂಗಳು ಕೇಂದ್ರ ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯ, 2 ಲಕ್ಷಕ್ಕೂ ಅಧಿಕ ನಕಲಿ ಕಂಪನಿಗಳ ನೋಂದಣಿ ರದ್ದುಗೊಳಿಸಿದೆ. ಈ ಎರಡು ಲಕ್ಷ ನಕಲಿ ಕಂಪನಿಗಳಲ್ಲಿ ಸುಮಾರು 5,800ಕ್ಕೂ ಅಧಿಕ ಕಂಪನಿಗಳು ಅಕ್ರಮವಾಗಿ 13,140 ಬ್ಯಾಂಕ್ ಖಾತೆ ಹೊಂದಿದ್ದು, ಮೊದಲ ಹಂತವಾಗಿ ಇವುಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.
Leave A Reply