ಅಮಿತ್ ಶಾ ಪುತ್ರನ ವಿರುದ್ಧ ವರದಿ ಪ್ರಕರಣ: ದಿ ವೈರ್ ಪೋರ್ಟಲ್ ಗೆ ಸಮನ್ಸ್
Posted On October 25, 2017
ಅಹಮದಾಬಾದ್: ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪುತ್ರ ಜಯ್ ಶಾ ವಿರುದ್ಧ ಅವಹೇಳನಕಾರಿ ವರದಿ ಪ್ರಕರಟಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯ ದಿ ವೈರ್ ಪೋರ್ಟಲ್ ಗೆ ಸಮನ್ಸ್ ನೀಡಿದೆ.
ಜಯ್ ಶಾ ಮಾನನಷ್ಟ ಮೊಕದ್ದಮೆ ಹೂಡಿದ್ದ ಕಾರಣ ಸಮನ್ಸ್ ನೀಡಿದ್ದು, ವಿಚಾರಣೆ ಕೈಗೆತ್ತಿಕೊಂಡ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎಸ್.ಕೆ.ಗಡ್ವಿ ಅವರು ಪತ್ರಕರ್ತೆ ರೋಹಿಣಿ ಸಿಂಗ್, ಐವರು ಸಂಪಾದಕರು ಹಾಗೂ ದಿ ವೈರ್ ಪ್ರಕಾಶಕ ಸಂಸ್ಥೆಗೆ ಸಮನ್ಸ್ ಜಾರಿ ಮಾಡಿ ನವೆಂಬರ್ 13ರ ಗಡುವು ನೀಡಲಾಗಿದೆ.
ಕೇಂದ್ರದಲ್ಲಿ 2014ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜಯ್ ಶಾ ಅವರ ಕಂಪನಿ ವಹಿವಾಟು 50 ಸಾವಿರ ರೂಪಾಯಿಗಳಿಂದ 80 ಕೋಟಿ ರೂಪಾಯಿಗಳಿಗೆ ಹೆಚ್ಚಾಗಿದೆ ಎಂದು ವೆಬ್ ಪೋರ್ಟಲ್ ವರದಿ ಮಾಡಿತ್ತು. ಇದರ ವಿರುದ್ಧ ಜಯ್ ಶಾ ಮಾನನಷ್ಟ ಮೊಕದ್ದಮೆ ಹೂಡಿದ್ದರು.
- Advertisement -
Trending Now
ಆವತ್ತು ಮಗಳನ್ನು ಪಕ್ಷಕ್ಕೆ ತೆಗೆದುಕೊಳ್ಳದೇ ಇದ್ದ ಡಿಕೆ ಕಾದಿದ್ದು ತಂದೆಗಾಗಿ!
October 23, 2024
ನಳಿನ್ ಎಂಬ ಸ್ಥಿತಪ್ರಜ್ಞ ಪ್ರಚಾರಕನಿಂದ ಪ್ರಸ್ತುತದ ತನಕ ಹೇಗೆ ಸಾಧ್ಯ?
October 2, 2024
Leave A Reply