ಒಳ್ಳೆಯ ಮನುಷ್ಯನಾದವನು ರಾಷ್ಟ್ರಗೀತೆಗೆ ಗೌರವ ನೀಡುತ್ತಾನೆ: ಸೋನು ನಿಗಂ
ಮುಂಬೈ: ಥಿಯೇಟರ್ ಗಳಲ್ಲಿ ರಾಷ್ಟ್ರಗೀತೆ ಮೊಳಗುವಾಗ ಎದ್ದು ನಿಲ್ಲುವ ಅವಶ್ಯಕತೆಯಿಲ್ಲ ಎಂದು ಸುಪ್ರೀ ಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ದೇಶಾದ್ಯಂತ ಈ ಕುರಿತು ಚರ್ಚೆಗಳಾಗುತ್ತಿವೆ.
“ನಿಜಯವಾದ ಮನುಷ್ಯನಾದವನು ರಾಷ್ಟ್ರಗೀತೆ ಮೊಳಗುವಾಗ ಎದ್ದು ನಿಂತು ಗೌರವ ಸಲ್ಲಿಸುತ್ತಾನೆ ಎಂದು ಗಾಯಕ ಸೋನು ನಿಗಂ ಹೇಳಿದ್ದಾರೆ.
ದೇಶ ಹಾಗೂ ದೇಶಗೀತೆಗೆ ಗೌರವ ಸಲ್ಲಿಸುವ ಉದ್ದೇಶದಿಂದ ನಾನು ಎದ್ದುನಿಲ್ಲಲು ಬಯಸುತ್ತೇನೆ. ನಾವು ನಮ್ಮ ತಂದೆ-ತಾಯಿಯರನ್ನು ಗೌರವಿಸುತ್ತೇವೆ ಹಾಗೂ ಅವರಿಗೆ ಗೌರವ ತರದ ಕೆಲಸ ಮಾಡುವುದಿಲ್ಲ ಮತ್ತು ಅಲ್ಲಿಗೆ ಅವರನ್ನು ಕರೆದೊಯ್ಯುವುದಿಲ್ಲ. ಹಾಗೆಯೇ ರಾಷ್ಟ್ರಗೀತೆಯೂ ತಂದೆ-ತಾಯಿಯಂತಿದ್ದು ಎದ್ದು ನಿಂತು ಗೌರವಿಸುವುದು ನಮ್ಮ ಕರ್ತವ್ಯ ಎಂದಿದ್ದಾರೆ.
ಬರೀ ಸಿನಿಮಾ ಮಂದಿರಗಳಲ್ಲಿ ಅಷ್ಟೇ ಅಲ್ಲ, ದೇಶದ ಯಾವುದೇ ಮೂಲೆಯಲ್ಲಿ ರಾಷ್ಟ್ರಗೀತೆ ಕೇಳಿಸಿದರೂ ನಿಜವಾದ ಮನುಷ್ಯನಾದವನು ಎದ್ದು ನಿಲ್ಲಬೇಕು. ಅಷ್ಟಕ್ಕೂ ನಾವೇನು, ಪಾಕಿಸ್ತಾನ, ಅಮೆರಿಕದ ರಾಷ್ಟ್ರಗೀತೆ ಎದ್ದು ನಿಲ್ಲುವುದಿಲ್ಲವಲ್ಲ? ನಮ್ಮ ದೇಶದ ರಾಷ್ಟ್ರಗೀತೆಗೆ ಗೌರವ ಸಲ್ಲಿಸುತ್ತೇವೆ ಅಷ್ಟೆ ಎಂದು ಹೇಳಿಕೆ ಇರುವ ವೀಡಿಯೋ ಒಂದನ್ನು ಸೋನು ನಿಗಂ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿದ್ದಾರೆ.
Leave A Reply