ಜಿಎಸ್ ಟಿ ವಿರೋಧಿಸುವವರೇ ನರೇಂದ್ರ ಮೋದಿ ಅವರ ಈ ಮಾತು ಕೇಳಿ. ಒಮ್ಮೆ ಅಂಕಿ-ಅಂಶ ನೋಡಿ.
ದೇಶಾದ್ಯಂತ ಕೆಲವು ಎಡಬಿಡಂಗಿ ಮನಸ್ಸುಗಳು ಸುಖಾಸುಮ್ಮನೆ ಜಿಎಸ್ ಟಿ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿರುವ, ಮೆರ್ಸೆಲ್ ಚಿತ್ರದ ಮೂಲಕ ಜಿಎಸ್ಟಿಯನ್ನು ವಿರೋಧಿಸುವ ಪ್ರಯತ್ನ ವಿವಾದವಾಗಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಸರಕು ಮತ್ತು ಸೇವಾ ತೆರಿಗೆ ಕುರಿತು ಮಾತನಾಡಿದ್ದು, “ಜಿಎಸ್ಟಿಯಿಂದ ಬಡವರಿಗೆ ಅನುಕೂಲ’ ಎಂದಿದ್ದಾರೆ.
ಜಿಎಸ್ಟಿಯಿಂದ ಗ್ರಾಹಕರ ಹಿತಾಸಕ್ತಿಯೇ ಮೇಲಾಗಿದೆ. ಈಗ ಗ್ರಾಹಕರು ಶೇ.10ರಷ್ಟು ಬುಕ್ಕಿಂಗ್ ಮೊತ್ತ ನೀಡಿ ಫ್ಲ್ಯಾಟ ಖರೀದಿಸಬಹುದು. ಅಂದಹಾಗೆ ಇದು ಮೊದಲು ಶೇ.40ರಷ್ಟಿತ್ತು. ಜಿಎಸ್ಟಿಯಿಂದ 5 ಲಕ್ಷ ತೆರಿಗೆದಾರರು ನೋಂದಣಿಯಾಗಿದ್ದಾರೆ. ಅವರು ಕಟ್ಟಿದ ತೆರಿಗೆ ದೇಶದ ಅಭ್ಯುದಯಕ್ಕೆ ಬಳಸಲಾಗುವುದು ಎಂದು ಮೋದಿ ತಿಳಿಸಿದ್ದಾರೆ.
ಜಿಎಸ್ಟಿ ನೂತನ, ಪಾರದರ್ಶಕ, ಪ್ರಾಮಾಣಿಕವಾಗಿ ಉದ್ಯಮ ಕೈಗೊಳ್ಳಲು ಸಹಕಾರಿಯಾಗಿದ್ದು, ಪರೋಕ್ಷ ಹಾಗೂ ಗೌಪ್ಯ ತೆರಿಗೆಯಿಂದ ಮುಕ್ತವಾಗಿದೆ. ಮಧ್ಯವರ್ತಿಗಳ ಉಪಟಳವಿಲ್ಲದೆ ಜನ ನೇರವಾಗಿ ಸರ್ಕಾರಕ್ಕೆ ತೆರಿಗೆ ಪಾವತಿಸಬಹುದಾಗಿದೆ. ಜಿಎಸ್ಟಿಯಿಂದ ಮಾತ್ರ ಇಂಥ ಪಾರದರ್ಶಕತೆ ಕಾಣಬಹುದಾಗಿದೆ ಎಂದು ಹೇಳಿದ್ದಾರೆ.
ಇನ್ನೂ ಜಿಎಸ್ಟಿ ಜನರಿಗೆ ಹತ್ತಿರವಾಗುತ್ತ ಹೋಗುತ್ತದೆ. ಗ್ರಾಹಕ ಸ್ನೇಹಿಯಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಇದರಿಂದ ಉತ್ಪಾದಕರ ನಡುವೆ ಸ್ಪರ್ಧೆ ಉಂಟಾಗಲಿದ್ದು, ಉತ್ಪನ್ನಗಳ ದರದಲ್ಲಿ ಕಡಿಮೆಯಾಗಿ ಬಡ ಹಾಗೂ ಮಧ್ಯಮ ವರ್ಗದವರಿಗೆ ಅನುಕೂಲವಾಗುತ್ತದೆ ಎಂದಿದ್ದಾರೆ.
ಅಲ್ಲದೆ ಮುಂದಿನ ದಿನಗಳಲ್ಲಿ ನೂತನ ಗ್ರಾಹಕ ಹಿತರಕ್ಷಣಾ ಕಾನೂನು ಜಾರಿಗೊಳಿಸುವುದಾಗಿ ಮೋದಿ ಘೋಷಿಸಿದ್ದಾರೆ. ಸುಮ್ಮನೆ ಜಿಎಸ್ಟಿ ಬಗ್ಗೆ ಪೂರ್ವಗೃಹಪೀಡಿತರಾಗದೆ ಅಂಕಿ-ಅಂಶ ದೂರಾಲೋಚನೆ ನೋಡುವುದು ಮುಖ್ಯ.
Leave A Reply