ಕಾಶ್ಮೀರದಲ್ಲಿ ಕಲ್ಲೆಸೆದವರಿಗೆ ಜೈಲು, ಆಸ್ತಿ ಹಾನಿ ಮಾಡಿದರೆ ದಂಡ: ಹೊಸ ಕಾನೂನು
Posted On October 27, 2017
![](https://tulunadunews.com/wp-content/uploads/2017/10/jk.jpg)
ಶ್ರೀನಗರ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಜಮ್ಮು-ಕಾಶ್ಮೀರದಲ್ಲಿ ಉಗ್ರರ ಹಾಗೂ ಪ್ರತ್ಯೇಕತಾವಾದಿಗಳ ಹೆಡೆಮುರಿ ಕಟ್ಟಿದೆ. ಅಲ್ಲದೆ ಇತ್ತೀಚೆಗೆಯಷ್ಟೇ ಕಾಶ್ಮೀರದಲ್ಲಿ ಸಂಧಾನಕಾರರೊಬ್ಬರನ್ನು ನೇಮಿಸಿ ಶಾಂತಿ ಸ್ಥಾಪನೆಗೆ ಮುಂದಾಗಿದೆ.
ಕೇಂದ್ರದ ಈ ನಿರ್ಧಾರವನ್ನು ರಾಜ್ಯ ಸರ್ಕಾರವೂ ಬೆಂಬಲಿಸಿದ್ದು, ಕಾಶ್ಮೀರದಲ್ಲಿ ಕಲ್ಲೆಸೆಯುವವರಿಗೆ ಜೈಲು ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದರೆ ದಂಡ ಹಾಕುವ ಕಾನೂನು ಜಾರಿಗೊಳಿಸುವ ಕುರಿತು ರಾಜ್ಯಪಾಲ ಎನ್.ಎನ್.ವೋಹ್ರಾ ಘೋಷಿಸಿದ್ದಾರೆ.
ಉಗ್ರರು ಹಾಗೂ ಪ್ರತ್ಯೇಕತಾವಾದಿಗಳ ಬೆಂಬಲದಿಂದ ಕಾಶ್ಮೀರದಲ್ಲಿ ಸುಖಾಸುಮ್ಮನೆ ಕಲ್ಲೆಸೆಯುವವರ ಸಂಖ್ಯೆ ಜಾಸ್ತಿಯಾಗಿದ್ದು, ಇದನ್ನು ನಿಯಂತ್ರಿಸಲು ಕಾನೂನು ರಚಿಸಲಾಗಿದೆ ಎಂದು ಪ್ರಕಟಣೆ ಹೊರಡಿಸಿದ್ದಾರೆ.
ಕಲ್ಲೆಸೆಯುವವರಿಗೆ 5 ವರ್ಷ ಜೈಲು ಹಾಗೂ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡುವವರಿಗೆ ಜಮ್ಮು-ಕಾಶ್ಮೀರ ಸಾರ್ವಜನಿಕ ಆಸ್ತಿ ಕಾಯಿದೆ 2017ರ ಅನ್ವಯ ದಂಡ ಹಾಕುವುದಾಗಿ ತಿಳಿಸಿದ್ದಾರೆ.
- Advertisement -
Trending Now
ರಾಜ್ಯ ಸರಕಾರ 350 ಕೋಟಿ ಬಾಕಿ ಹಿನ್ನಲೆ; ದಯಾಮರಣ ನೀಡಲು ಮನವಿ!
January 14, 2025
Leave A Reply