ಭಾರತ ಪ್ರವಾಸ ಮಾಡದಿರಿ, ವಿದೇಶಿ ಪ್ರವಾಸಿಗರಿಗೆ ಕರೆ ನೀಡಿದ ರೇಡಿಯೋ ಮಿರ್ಚಿ ಉಪಾಧ್ಯಕ್ಷನಿಗೆ ನೋಟಿಸ್!
ನಮ್ಮ ದೇಶದಲ್ಲಿರುವ ಕೆಲವು ಕೆಟ್ಟ ಮನಸ್ಸುಗಳೇ ಹಾಗೆ. ಯಾವುದೇ ಒಂದು ಸಣ್ಣ ಹಾಗೂ ಕ್ಷುಲ್ಲಕ ಘಟನೆ ಮೂಲಕ ಇಡೀ ದೇಶವನ್ನೇ ಹಣಿಯಲು ಮುಂದಾಗುತ್ತಾರೆ. ಆ ಮೂಲಕ ಅವರು ನಮ್ಮವರೋ, ಅಥವಾ ಬೇರೆ ದೇಶದವರಿಗೆ ಹುಟ್ಟಿದವರೋ ಎಂಬ ಅನುಮಾನ ಕಾಡುವಂತೆ ಮಾಡುತ್ತಾರೆ.
ರೇಡಿಯೋ ಮಿರ್ಚಿ ಉಪಾಧ್ಯಕ್ಷ ಆಕಾಶ್ ಬ್ಯಾನರ್ಜಿ ಮಾಡಿದ್ದೂ ಇದನ್ನೇ…
ಆಗಿದ್ದಿಷ್ಟೇ, ಆಗ್ರಾ ಬಳಿಯ ಫತೇಪುರ್ ಸಿಕ್ರಿಯಲ್ಲಿ ಸ್ವಿಡ್ಜರ್ ಲೆಂಡ್ ದಂಪತಿ ಮೇಲೆ ಯಾರೋ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ. ಘಟನೆ ನಡೆದ ಬಳಿಕ ಕೂಡಲೇ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ವಿದೇಶಾಂಗ ವ್ಯವಹಾರಗಳ ಸಚಿವೆ ಸ್ಮೃತಿ ಇರಾನಿ ಸೂಚಿಸಿದ್ದಾರೆ ಹಾಗೂ ದಂಪತಿ ರಕ್ಷಣೆಗೆ ಕ್ರಮ ಕೈಗೊಳ್ಳಿ ಎಂದು ಪೊಲೀಸರಿಗೆ ಸೂಚಿಸಿದ್ದಾರೆ.
ಆದರೆ ಈ ಆಕಾಶ್ ಬ್ಯಾನರ್ಜಿ ಮಾತ್ರ ಸ್ವಿಡ್ಜರ್ ಲೆಂಡ್ ನಾಗರಿಕನಂತೆ ವರ್ತಿಸಿದರು. ಪ್ರವಾಸೋದ್ಯಮದ ಧ್ಯೇಯ ವಾಕ್ಯವಾದ “ಇಂಕ್ರೆಡಿಬಲ್ ಇಂಡಿಯಾ” ಬದಲು, ಭಾರತಕ್ಕೆ ಬರದಿರಿ ಎಂದು ಬದಲಾಯಿಸುವುದೇ ಸೂಕ್ತ ಎಂದು ಟ್ವೀಟ್ ಮಾಡಿದರು. ಇಡೀ ದಿನ ಇದೇ ಚರ್ಚೆಯಾಯಿತು ಸಹ. ಬ್ಯಾನರ್ಜಿ ಹೇಳಿಕೆ ಬೆಂಬಲಿಸಿ ಅಲ್ಲ, ವಿರೋಧಿಸಿ.
ಈಗ ಇಂಥ ದೇಶದ್ರೋಹಿ ಹೇಳಿಕೆ ಖಂಡಿಸಿ ಪ್ರತಿಭಟನೆಗಳಾಗಿವೆ. ಕೇಂದ್ರ ಸರ್ಕಾರ ಬ್ಯಾನರ್ಜಿ ವಿರುದ್ಧ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಇಷ್ಟೆಲ್ಲ ಪ್ರಹಸನ ಆದ ಬಳಿಕ ಬ್ಯಾನರ್ಜಿ ಹಾಗೂ ರೇಡಿಯೋ ಮಿರ್ಚಿ ಸಂಸ್ಥೆ ಕ್ಷಮೆ ಕೇಳಿದೆ.
ಆದರೆ ದೇಶದ ಅನ್ನ ತಿಂದು, ದೇಶದಲ್ಲೇ ಇದ್ದು ದೇಶದ ವಿರುದ್ಧ ಮಾತನಾಡುವ ಇವರು, ಅಮೆರಿಕ, ಆಸ್ಟ್ರೇಲಿಯಾದಲ್ಲಿ ಅನಿವಾಸಿ ಹಾಗೂ ಭಾರತೀಯ ವಿದ್ಯಾರ್ಥಿಗಳ ಮೇಲೆ ಹಲ್ಲೆ, ಹತ್ಯೆಯಾದಾಗ ಇವರು ಆ ದೇಶಕ್ಕೆ ಹೋಗಬೇಡಿ ಎಂದು ಅಭಿಯಾನ ಆರಂಭಿಸಿದ್ದನ್ನು ನೋಡಿದಿರಾ? ತಮ್ಮ ಫಾರಿನ್ ಟೂರ್ ಕ್ಯಾನ್ಸಲ್ ಮಾಡಿ ಪ್ರತಿಭಟನೆ ಮಾಡಿದ್ದನ್ನು ಕೇಳಿದ್ದೀರಾ? ಇವರ ಜನ್ಮಕ್ಕೆ ನಾಚಿಕೆಯೇ ಆಗುವುದಿಲ್ಲವಾ?
Leave A Reply