ಉಗ್ರರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಬೇರೆ ರೀತಿಯ ಉತ್ತರ: ಪಾಕಿಸ್ತಾನಕ್ಕೆ ಅಮೆರಿಕ ತಪರಾಕಿ
ವಾಷಿಂಗ್ಟನ್: ಭಾರತದಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಹೇಗೆ ಪಾಕಿಸ್ತಾನವನ್ನು ಬಗ್ಗುಬಡಿಯುತ್ತಿದ್ದಾರೋ, ಹಾಗೆಯೇ ಅಮರಿಕದಲ್ಲಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದ ಮೇಲೆ ಪಾಕಿಸ್ತಾನದ ವಿರುದ್ಧ ಹಲವು ಅಸ್ತ್ರ ಬಳಸುತ್ತಿದ್ದಾರೆ.
ಪಾಕಿಸ್ತಾನ ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಈ ದಾರಿಯಲ್ಲಿ ಪಾಕಿಸ್ತಾನ ಎಡವಿದರೆ ಅಮೆರಿಕ ಬೇರೆಯದೇ ರೀತಿಯಲ್ಲಿ ಉತ್ತರಿಸಬೇಕಾಗುತ್ತದೆ ಎಂದು ಸರ್ಕಾರದ ಕಾರ್ಯದರ್ಶಿ ರೆಕ್ಸ್ ಟಿಲ್ಲರ್ ಸನ್ ಪಾಕಿಗೆ ಭಾರಿ ತಪರಾಕಿ ನೀಡಿದ್ದಾರೆ.
ಪಾಕಿಸ್ತಾನಕ್ಕೆ ಉಗ್ರರ ವಿರುದ್ಧ ಕ್ರಮ ಕೈಗೊಳ್ಳದೆ ಬೇರೆ ದಾರಿಯಿಲ್ಲ. ಅದು ಮೊದಲು ಉಗ್ರರ ಸ್ವರ್ಗ ಎಂಬ ಹಣೆಪಟ್ಟಿಯಿಂದ ಹೊರಬರಬೇಕು. ಉಗ್ರರನ್ನು ಸಾಕಿ-ಸಲಹುವುದನ್ನು ಬಿಡಬೇಕು ಎಂದು ಆಗ್ರಹಿಸಿದ್ದಾರೆ.
ಉಗ್ರರನ್ನು ಪೋಷಣೆ ಮಾಡುವುದರಿಂದಲೇ ಕುಖ್ಯಾತಿಯಾಗಿರುವ ಪಾಕಿಸ್ತಾನ ಮೂಲತಃ ಸಾರ್ವಭೌಮತ್ವ ರಾಷ್ಟ್ರ. ಹಾಗಾಗಿ ನಾವು ಯಾವುದೇ ಬೇಡಿಕೆ ಇಡದೇ, ಭಯೋತ್ಪಾದನೆ ನಿಗ್ರಹಿಸಿ ಎಂದು ಹೇಳುತ್ತಿದ್ದೇವೆ. ಒಂದು ವೇಳೆ ಪಾಕಿಸ್ತಾನ ತನ್ನ ಚಾಳಿಯೇ ಮುಂದುವರಿಸಿದರೆ ಅಥವಾ ಉಗ್ರ ಪೋಷಣೆಯಲ್ಲಿ ಮುಂದುವರಿದರೆ ಯಾವ ತಂತ್ರ ಬಳಸಿ ಅದನ್ನು ತಡೆಯಬೇಕು ಎಂಬುದು ನಮಗೆ ಗೊತ್ತು ಎಂದಿದ್ದಾರೆ.
ನಾವು ಇದುವರೆಗೂ ಪಾಕಿಸ್ತಾನದ ಜತೆ ನಡೆಸಿದ ಮಾತುಕತೆಯಲ್ಲಿ ಪಾಕಿಸ್ತಾನದ್ದೇ ಶೇ.80ರಷ್ಟು ಮಾತು ಕೇಳಿದ್ದೇವೆ ಹಾಗೂ ನಾವು ಶೇ.20ರಷ್ಟು ಮಾತ್ರ ಮಾತನಾಡಿದ್ದೇವೆ. ಆದರೆ ಈಗ ಕಾಲ ಬದಲಾಗಿದೆ. ಪಾಕ್ ಪ್ರಧಾನಿ ಅಬ್ಬಾಸಿ ಜತೆ ನಾವು ಮಾತನಾಡಿದ್ದು, ಇನ್ನು ಮುಂದೆ ಪಾಕಿಸ್ತಾನ ಬರೀ ಬಾಯಿಮಾತಿನಲ್ಲೇ ಭಯೋತ್ಪಾದನೆ ನಿಗ್ರಹಿಸದೆ, ಕಾರ್ಯ ರೂಪಕ್ಕೆ ತರಬೇಕು ಎಂದು ಜಿನೀವಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರೆಕ್ಸ್ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
Leave A Reply