ತಾಜ್ ಮಹಲ್ ರಾಷ್ಟ್ರೀಯ ಸ್ಮಾರಕವಾದರೆ, ನಮಾಜ್ ನಿಷೇಧಿಸಿ: ಬಲಮುಕುಂದ್ ಪಾಂಡೆ ಆಗ್ರಹ
ದೆಹಲಿ: ಇತ್ತೀಚೆಗೆ ತಾಜ್ ಮಹಲ್ ಕುರಿತು ನಾನಾ ಚರ್ಚೆಗಳಾಗುತ್ತಿವೆ. ತಾಜ್ ಮಹಲ್ ಪ್ರೇಮದ ಸಂಕೇತ, ಅದು ರಾಷ್ಟ್ರೀಯ ಸುಡುಗಾಡು… ಹೀಗೆ ತಹರೇವಾರಿ ವಿಚಾರ ಮಂಡನೆಗಳಾಗುತ್ತಿವೆ.
ಇವುಗಳ ಬೆನ್ನಲ್ಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಇತಿಹಾಸ ವಿಭಾಗ ಅಖಿಲ ಭಾರತ ಇತಿಹಾಸ ಸಂಕಲನ ಸಮಿತಿ ರಾಷ್ಟ್ರೀಯ ಕಾರ್ಯದರ್ಶಿ ಡಾ.ಬಲ ಮುಕುಂದ್ ಪಾಂಡೆ ನೂತನ ಹಾಗೂ ಸಮಂಜಸ ವಾದ ಮಂಡಿಸಿದ್ದು, “ತಾಜ್ ಮಹಲ್ ರಾಷ್ಟ್ರೀಯ ಐತಿಹಾಸಿಕ ತಾಣವೇ ಆಗಿದ್ದರೆ, “ಸ್ಮಾರಕದಲ್ಲಿ ಮುಸ್ಲಿಮರ ನಮಾಜ್ ನಿಷೇಧಿಸಿ” ಎಂದಿದ್ದಾರೆ.
ಶುಕ್ರವಾರ ನಮಾಜ್ ನಿಷೇಧಿಸುವ ಜತೆಗೆ ಹಿಂದೂಗಳಿಗೂ ಪ್ರಾರ್ಥನೆ ಮಾಡಲು ಅವಕಾಶ ನೀಡಿ. ತಾಜ್ ಮಹಲ್ ಅನ್ನು ಮುಸ್ಲಿಮರು ಧಾರ್ಮಿಕ ಸ್ವತ್ತನ್ನಾಗಿ ಬಳಸುತ್ತಿದ್ದು, ಮೊದಲು ಇದನ್ನು ನಿಷೇಧಿಸಿ. ಆಗ ಅದು ರಾಷ್ಟ್ರೀಯ ಸ್ಮಾರ ಎನಿಸುತ್ತದೆ ಎಂದು ಪಾಂಡೆ ಟಿವಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ತಾಜ್ ಮಹಲ್ ಆವರಣದಲ್ಲಿ ಹಿಂದೂ ಯುವ ವಾಹಿನಿ ಸಂಘಟನೆ ಕಾರ್ಯಕರ್ತರು “ಶಿವ ಚಾಲಿಸ” ಆಚರಿಸಿದ ಹಾಗೂ ಸ್ಮಾರಕದಲ್ಲಿ ಹಿಂದೂಗಳಿಗೆ ಪ್ರಾರ್ಥನೆ ಮಾಡಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದ ಹಿನ್ನೆಲೆ ಪೊಲೀಸರು ಅವರನ್ನು ಬಂಧಿಸಿದ ಬೆನ್ನಲ್ಲೇ ಪಾಂಡೆ ಈ ಹೇಳಿಕೆ ನೀಡಿದ್ದಾರೆ.
Leave A Reply