ಮಂಜುನಾಥನ ಸನ್ನಿಧಾನಕ್ಕೆ ಮೋದಿ, ಸಕಲ ಸಿದ್ಧತೆ, ಬಿಗಿ ಬಂದೋಬಸ್ತ್
ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಭಾನುವಾರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಗೆ ಭೇಟಿ ನೀಡಲಿದ್ದು, ಮಂಜುನಾಥ ಸ್ವಾಮಿ ದೇವಾಲಯದಲ್ಲಿ ಅದ್ದೂರಿಯಾಗಿ ಸಿಂಗಾರಗೊಳಿಸಲಾಗಿದೆ.
ಆದಾಗ್ಯೂ ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಸಿದ್ಧತೆ ಪೂರ್ಣಗೊಂಡಿದ್ದು, ಭಾರಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಬೆಳಗ್ಗೆ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಆಗಮಿಸಲಿರುವ ಮೋದಿ, ಬಳಿಕ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸ್ವಸಹಾಯ ಸಂಘಗಳ 38 ಲಕ್ಷ ಸದಸ್ಯರಲ್ಲಿ 10 ಲಕ್ಷ ಸದಸ್ಯರು ಜನಧನ ಖಾತೆ ಹೊಂದಿದ್ದು, ಅವರಿಗೆ ರುಪೇ ಕಾರ್ಡ್ ವಿತರಿಸುವ ಕಾರ್ಯಕ್ರಮಕ್ಕೆ ಪ್ರಧಾನಿ ಚಾಲನೆ ನೀಡಲಿದ್ದಾರೆ. ಬಳಿಕ ಬೃಹತ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಲಿದ್ದಾರೆ.
ನರೇಂದ್ರ ಮೋದಿ ಅವರ ಈ ಒಂದು ದಿನಧ ಭೇಟಿಯಲ್ಲಿ ಬೆಂಗಳೂರು, ಧರ್ಮಸ್ಥಳ ಹಾಗೂ ಬೀದರ್ ಗೆ ಭೇಟಿ ನೀಡಲಿದ್ದಾರೆ. ಬೀದರ್ ನಲ್ಲಿ ಬೀದರ್-ಕಲಬುರಗಿ ರೈಲಿಗೆ ಮೋದಿ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ 1.30ರಿಂದ ಮೋದಿ ಧರ್ಮಸ್ಥಳದಿಂದ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.
ಬಿಗಿ ಬಂದೋಬಸ್ತ್
ಮೋದಿ ಭೇಟಿ ಹಿನ್ನೆಲೆಯಲ್ಲಿ ಧರ್ಮಸ್ಥಳದಲ್ಲಿ 2500 ಪೊಲೀಸ್ ಸಿಬ್ಬಂದಿ, ವಿಶೇಷ ರಕ್ಷಣಾ ಪಡೆ ನಿಯೋಜಿಸಲಾಗಿದೆ. ಇದೇ ಕಾರಣಕ್ಕೆ ಭಾನುವಾರ ಮಧ್ಯಾಹ್ನದವರೆಗೆ ಸಾರ್ವಜನಿಕರಿಗೆ ಧರ್ಮಸ್ಥಳ ದರ್ಶನ ಸ್ಥಗಿತಗೊಳಿಸಲಾಗಿದೆ.
ಹೀಗಿದೆ ನರೇಂದ್ರ ಮೋದಿ ವೇಳಾಪಟ್ಟಿ
-
ಬೆಳಗ್ಗೆ 7.30ಕ್ಕೆ ದಹಲಿಯಿಂದ ವಿಮಾನದಲ್ಲಿ ಧರ್ಮಸ್ಥಳದತ್ತ ಮೋದಿ.
-
15ಕ್ಕೆ ಮಂಗಳೂರಿಗೆ ಆಗಮನ
-
30ಕ್ಕೆ ಧರ್ಮಸ್ಥಳ ಮಂಜುನಾಥನ ದರ್ಶನ
-
30ಕ್ಕೆ ಉಜಿರೆಯಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಫಲಾನುಭವಿಗಳಿಗೆ ರುಪೇ ಕಾರ್ಡ್ ವಿತರಣೆ
-
30ಕ್ಕೆ ಬೆಂಗಳೂರಿಗೆ ತೆರಳಲಿರುವ ಪ್ರಧಾನಿ.
-
ಮಧ್ಯಾಹ್ನ30 ಬೆಂಗಳೂರಿನ ಅರಮನೆ ಆವರಣದಲ್ಲಿ ಸೌಂದರ್ಯ ಲಹರಿ ಪಾರಾಯಣ
-
ಸಂಜೆ30 ಬೀದರ್-ಕಲಬುರಗಿ ನೂತನ ರೈಲು ಮಾರ್ಗ ಲೋಕಾರ್ಪಣೆ
Leave A Reply