ಟಿಪ್ಪು “ಸ್ವಾತಂತ್ರ್ಯ ಹೋರಾಟಗಾರ” ಅಲ್ಲ: ಖ್ಯಾತ ಇತಿಹಾಸಕಾರ ಇರ್ಫಾನ್ ಹಬೀಬ್
ಅಲ್ಪಸಂಖ್ಯಾತರ ಮನವೊಲಿಸಲು ಏನು ಬೇಕಾದರೂ ಮಾಡುವ ಕಾಂಗ್ರೆಸ್ ರಾಜ್ಯದಲ್ಲಿ ಹಿಂದೂ ವಿರೋಧಿ, ತನ್ನ ಸಾಮ್ರಾಜ್ಯಕ್ಕಾಗಿ ಹೋರಾಡಿದ ಟಿಪ್ಪು ಸುಲ್ತಾನ್ ದಿನಾಚರಣೆ ಮಾಡಲು ಹೊರಟಿದೆ. ನ.10ರಂದು ಸರ್ಕಾರದಿಂದಲೇ ಅದ್ದೂರಿ ಕಾರ್ಯಕ್ರಮ ಮಾಡಲಿದ್ದು, ಟಿಪ್ಪು ಸುಲ್ತಾನನನ್ನು ಮೈಸೂರಿನ ಹುಲಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದಾತ, ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಸೋತು ಸುಣ್ಣವಾದರೂ ಬ್ರಿಟಿಷರ ವಿರುದ್ಧ ಹೋರಾಡಿದಾತ ಎಂದು ಸರ್ಕಾರ ಬಣ್ಣ ಹಚ್ಚಿ ಮುಸ್ಲಿಮರನ್ನು ಮತ ಬ್ಯಾಂಕ್ ಮಾಡಲು ಹೊರಟಿದೆ.
ಈಗ ವಿಶ್ವವಿಖ್ಯಾತ ಇತಿಹಾಸಕಾರ ಇರ್ಫಾನ್ ಹಬೀಬ್ ಟಿಪ್ಪುವನ್ನು “ಸ್ವಾತಂತ್ರ್ಯ ಹೋರಾಟಗಾರ” ಎಂದು ಸಂಬೋಧಿಸುವ ಪದ ಸೂಕ್ತವಲ್ಲ ಎಂದು ತಿಳಿಸಿದ್ದು, ಕಾಂಗ್ರೆಸ್ ಸರ್ಕಾರಕ್ಕೆ ಇದರಿಂದ ಹಿನ್ನಡೆಯಾದರೂ ಆದೀತು.
ಟಿಪ್ಪು ಯಾರ ವಿರುದ್ಧವೂ ಯುದ್ಧ ಘೋಷಿಸಿ ಹೋರಾಡಿಲ್ಲ, ಬ್ರಿಟಿಷರ ವಸಾಹಾತು ವಿಸ್ತರಣೆ ವಿರೋಧಿಸಿ ತನ್ನ ರಾಜ್ಯ ಉಳಿಸಿಕೊಳ್ಳುವುದಕ್ಕಷ್ಟೇ ಟಿಪ್ಪು ಸುಲ್ತಾನ್ ಹೋರಾಟ ಮಾಡಿದ್ದು. ಹಾಗಾಗಿ ಆತ ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಎಂದು ಇರ್ಫಾನ್ ಹಬೀಬ್ ತಿಳಿಸಿದ್ದಾರೆ.
ಖ್ಯಾತ ಇತಿಹಾಸಕಾರರೇ ಟಿಪ್ಪು ಸುಲ್ತಾನ್ ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಎಂದರೂ, 1857ಕ್ಕೂ ಮೊದಲು ಸ್ವಾತಂತ್ರ್ಯ ಹೋರಾಟದ ಕಲ್ಪನೆ ಇರಲಿಲ್ಲ ಎಂದು 8ನೇ ಕ್ಲಾಸು ಓದುವ ವಿದ್ಯಾರ್ಥಿಗೆ ಗೊತ್ತಿದ್ದರೂ, ಟಿಪ್ಪು ಸುಲ್ತಾನ್ ಜಯಂತಿ ಆಚರಿಸುತ್ತಿರುವ ಈ ರಾಜ್ಯ ಸರ್ಕಾರದ ಭಂಡತನಕ್ಕೆ ಏನೆನ್ನಬೇಕು?
ಇತಿಹಾಸಕಾರ ಹಬೀಬ್ ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿದ್ದು, ಟಿಪ್ಪು ಸುಲ್ತಾನ್ ಬಗ್ಗೆ ಪುಸ್ತಕ ಸಹ ಬರೆದಿದ್ದಾರೆ.
Leave A Reply