ಭಾರತದ ಸೇನಾ ಶಸ್ತ್ರಸ್ತ್ರ ಆಧುನಿಕ, ಚೀನಾ, ಪಾಕಿಸ್ತಾನಕ್ಕೆ ನಡುಕ
ಭಾರತೀಯ ಸೇನೆ ಬರೋಬ್ಬರಿ 40 ಸಾವಿರ ಕೋಟಿ ರುಪಾಯಿ ವೆಚ್ಚದಲ್ಲಿ ಸೇನೆಯ ಶಸ್ತ್ರಾಸ್ತ್ರಗಳ ಸಂಪೂರ್ಣ ಆಧುನಿಕರಣಕ್ಕೆ ಒಪ್ಪಿಗೆ ಸೂಚಿಸಿದ್ದು, ಗಡಿಯಲ್ಲಿ ಉಪಟಳ ಮಾಡುವ ಚೀನಾ ಹಾಗೂ ಪಾಕಿಸ್ತಾನಕ್ಕೆ ನಡುಕ ಹುಟ್ಟಿದೆ.
ಅಪಾರ ಪ್ರಮಾಣದ ಮಷೀನ್ ಗನ್, ಕಾರ್ಬೈನ್ ಅಥವಾ ಚಿಕ್ಕ ಬಂದೂಕು, ಅಸಾಲ್ಟ್ ರೈಫಲ್ ಖರೀದಿಸಲು ಸೇನೆ ಮುಂದಾಗಿದೆ.
ಹಿಂದೆಯೇ ರಕ್ಷಣಾ ಸಚಿವಾಲಯ ಶಸ್ತ್ರಾಸ್ತ್ರ ಆಧುನೀಕರಣಗೊಳಿಸಲು ಸೇನೆಗೆ ಸಂಪೂರ್ಣ ಆರ್ಥಿಕ ಸ್ವಾತಂತ್ರ್ಯ ನೀಡಿದ್ದು, ಈಗ ಸೇನೆ ದಿಟ್ಟ ಹಾಗೂ ಮಹತ್ತರ ಹೆಜ್ಜೆ ಇಟ್ಟಿರುವುದು ವೈರಿ ರಾಷ್ಟ್ರಗಳ ನಿದ್ದೆಗೆಡಿಸಿದೆ. ಆದಾಗ್ಯೂ ಹಳೆ ಶಸ್ತ್ರಾಸ್ತ್ರಗಳನ್ನು ಉಳಿಸಿಕೊಳ್ಳದಿರಲು ಸಹ ಸೇನೆ ನಿರ್ಧರಿಸಿದೆ. ಸದ್ಯದಲ್ಲೇ ಹೊಸ ಶಸ್ತ್ರಾಸ್ತ್ರ ಖರೀದಿ ಪ್ರಕ್ರಿಯೆ ಮುಗಿಯಲಿದ್ದು, ನೂತನ ಬಂದೂಕುಗಳು ಸೈನಿಕರ ಕೈಯಲ್ಲಿ ನಳನಳಿಸಲಿವೆ ಎಂದು ತಿಳಿದುಬಂದಿದೆ.
ಶಸ್ತ್ರಾಸ್ತ್ರಗಳ ಆಧುನಿಕರಣ ಯೋಜನೆ ಪ್ರಮುಖವಾಗಿದ್ದು, ಇದು ಸೈನ್ಯದ ಆತ್ಮ ಹಾಗೂ ದೈಹಿಕ ಬಲ ಹೆಚ್ಚಿಸಲಿದೆ ಎಂದು ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೂಲಗಳ ಪ್ರಕಾರ ಸೇನೆಗೆ 44 ಸಾವಿರ ಕಾರ್ಬೈನ್, 7 ಲಕ್ಷ ಅಸಲ್ಟ್ ರೈಫಲ್ ಹಾಗೂ 44 ಸಾವಿರ ಲೈಟ್ ಕೋಂಬ್ಯಾಟ್ ಗನ್ಸ್ ಸೇರಲಿವೆ ಎಂದು ತಿಳಿದುಬಂದಿದೆ.
Leave A Reply