• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಕೋಮುವಾದಿ ಚಕ್ರವರ್ತಿಯ ನೇರ ಪ್ರಶ್ನೆಗೆ ಮುಖ್ಯಮಂತ್ರಿ ಜವಾಬು ನೀಡಲು ಶಕ್ತರೇ ?

chakravarhy sulibele Posted On October 30, 2017
0


0
Shares
  • Share On Facebook
  • Tweet It

ಮುಖ್ಯಮಂತ್ರಿಗಳಿಗೆ ಪ್ರಶ್ನೆ ಕೇಳಲೆಂದು ಕುಳಿತರೆ ನನ್ನ ಬಳಿ ಬೆಟ್ಟದಷ್ಟಿವೆ. ಆದರೆ ಅವರಿಗೆ ಪುರಸೊತ್ತು ಮತ್ತು ವ್ಯವಧಾನ ಬೇಕಲ್ಲವೇ? ನಾನು ಹತ್ತಿರ ಬಂದೊಡನೆ ಅವರಿಗೆ ಕೋಮುವಾದಿಯ ವಾಸನೆ ಬಡಿದರೆ ನಾನೇನು ಮಾಡಲಿ? ಅವರು ಈ ಐದು ವರ್ಷ ಮೋದಿಯವರನ್ನು ದೂಷಿಸುತ್ತ ಸಮಯ ಕಳೆಯುವ ಬದಲು ಅವರನ್ನು ಆಂತರ್ಯದಲ್ಲಿ ಅನುಸರಿಸಿದ್ದರೂ ಇಂದಿನ ಕರ್ನಾಟಕದ ಚಿತ್ರಣ ಬದಲಾಗಿರುತ್ತಿತ್ತು.

ಏನೇ ಹೇಳಿ, ಐದೇ ವರ್ಷಗಳಲ್ಲಿ ಬೆಂಗಳೂರಿನ ರಂಗು ಕೆಡಿಸಿದ ಕೀರ್ತಿ ಸಿದ್ದರಾಮಯ್ಯನವರಿಗೆ ಸಲ್ಲಬೇಕಾದ್ದೇ. ಬೆಂಗಳೂರೆಂದರೆ ಜಾಗತಿಕ ಸಾಫ್ಟ್ವೇರ್ ಉದ್ದಿಮೆಯ ರಾಜಧಾನಿ ಎಂಬ ಹೆಗ್ಗಳಿಕೆಯಿಂದ ಹೊಂಡಗಳ ರಸ್ತೆಯುಳ್ಳ ಮಹಾ ನಗರಿ ಎಂಬಂತಹ ಪರಿಸ್ಥಿತಿಗೆ ತಂದು ನಿಲ್ಲಿಸಿದರಲ್ಲ, ಶಭಾಷ್ ಎನ್ನಲೇಬೇಕು. ಅದ್ಯಾವ ಧೈರ್ಯದ ಮೇಲೆ ವಿಧಾನಸೌಧದ ವಜ್ರ ಮಹೋತ್ಸವವನ್ನು ಆಚರಿಸುವ ನಿರ್ಣಯ ಮಾಡಿದರೋ ದೇವರೇ ಬಲ್ಲ. ಪುಣ್ಯ, ಇದಕ್ಕೆ ಜಾಗತಿಕ ನಾಯಕರನ್ನು ಕರೆಯುವ ಸಾಹಸ ಅವರು ಮಾಡಲಿಲ್ಲ. ಇಲ್ಲವಾದರೆ ಅವರೆಲ್ಲ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಕೆಂಪೇಗೌಡರ ಬೆಂಗಳೂರಿನ ಹಾದಿಯಲ್ಲಿ ಸಾಗಿ ಬಂದು ವಿಧಾನ ಸೌಧ ಸೇರುವ ವೇಳೆಗೆ ಕಾರ್ಯಕ್ರಮವೇ ಮುಗಿದು ಹೋಗಿಬಿಟ್ಟಿರುತ್ತಿತ್ತು!



ಐದು ವರ್ಷಗಳಲ್ಲಿ ಈಗಿನ  ಸರ್ಕಾರ ರಾಜ್ಯ ಹಾಳು ಮಾಡಿತು. ಅದಕ್ಕೂ ಮುನ್ನ ಭರವಸೆ ಹುಟ್ಟಿಸಿದ್ದ ಭಾಜಪಾ ಸರ್ಕಾರ   ಸ್ವಹಿತಾಸಕ್ತಿಯಲ್ಲಿ ಮುಳುಗಿ ರಾಜ್ಯವನ್ನು ಪ್ರಪಾತಕ್ಕೆ ತಳ್ಳಿತು. ಅವೆಲ್ಲದರ ಪರಿಣಾಮವಾಗಿ ಈಗ ಒಂದು ಮಳೆಗೆ ತಡೆಯದ ರಸ್ತೆಗಳು ತುಂಬಿವೆ. ದುಡಿದು ತಿನ್ನುವ ಉದ್ಯೋಗಶೀಲ ಸ್ವಾಭಿಮಾನೀ ತರುಣ ಇಂದಿರಾ ಕ್ಯಾಂಟೀನ್ ಎದುರು ಸಾಲಿನಲ್ಲಿ ನಿಂತಿರುತ್ತಾನೆ. ಕೃಷಿಯೆಂದರೆ ಸ್ವಾವಲಂಬಿ ಎನ್ನುವ ಕಲ್ಪನೆ ಹೋಗಿ ಸಾಲ ಮನ್ನಾಕ್ಕೆ ತಂದು ನಿಲ್ಲಿಸಲಾಗಿದೆ. ಸಂತರನ್ನು  ಪಾರ್ಟಿಗಳಾಗಿ ವಿಂಗಡಿಸಿ ಧರ್ಮದ ಮೂಲ ಕಲ್ಪನೆಯನ್ನೇ ನಾಶ ಮಾಡಲಾಗಿದೆ. ಪರಿಸರದ ಕಥೆಯಂತೂ ಕೇಳಲೇ ಬೇಡಿ. ಈ ಐದು ವರ್ಷಗಳಲ್ಲಿ ಹಿಂದೆಂದಿಗಿಂತ ಹೆಚ್ಚು ಶೋಷಣೆಗೊಳಗಾಗಿರುವುದು ನಮ್ಮ ಘಟ್ಟ-ಬೆಟ್ಟಗಳೇ. ನದಿಯ ನೀರು ಕಳೆದ ಒಂದು ದಶಕದಲ್ಲಿ ಅಪಾರ ಪ್ರಮಾಣದಲ್ಲಿ ಇಳಿತಗೊಂಡಿದೆ. ಯಾವುದೂ ದಾಖಲೆ ಇಲ್ಲದೇ ಮಾತನಾಡುತ್ತಿಲ್ಲ.

ಪಕ್ಕದ ಕೇರಳದಲ್ಲಿ ಜನರ ಸರಾಸರಿ ಆಯಸ್ಸು 75 ಆದರೆ ನಮ್ಮಲ್ಲಿ ಅದು 68 ರಷ್ಟಿರಬಹುದು ಅಷ್ಟೇ. ದೆಹಲಿಯಿಂದ ಹಿಡಿದು ಬಂಗಾಳದವರೆಗೆ ಈ ವಿಚಾರದಲ್ಲಿ ಹಿಂದಿರುವವರು ನಾವೇ! 17 ರಾಜ್ಯಗಳ ತುಲನೆಯಲ್ಲಿ ನಾವೇ ಕಡೆ. ಪ್ರತಿಯೊಬ್ಬ ವ್ಯಕ್ತಿಗೂ ಆರೋಗ್ಯಕ್ಕಾಗಿ ಸರ್ಕಾರದಿಂದ ಖರ್ಚು ಮಾಡುವ ಹಣದಲ್ಲಿ ಹಿಮಾಚಲ ಪ್ರದೇಶ ತನ್ನ ಪ್ರಜೆಯ ಮೇಲೆ ಏಳು ಸಾವಿರದಷ್ಟು ವ್ಯಯಿಸಿದರೆ ನಾವು ಪ್ರತಿಯೊಬ್ಬರಿಗೂ 2 ಸಾವಿರವನ್ನೂ ಖರ್ಚು  ಮಾಡುತ್ತಿಲ್ಲ. ನಮಗಿಂತ ಗುಜರಾತು, ತಮಿಳು ನಾಡುಗಳು ಬಿಡಿ; ತೆಲಂಗಾಣವೂ ಮುಂದಿದೆ. ಕೇಂದ್ರಸರ್ಕಾರ  ಆರೋಗ್ಯಕ್ಕೆಂದು ನೀಡುವ ಅನುದಾನದಲ್ಲಿ ಪೂರ್ತಿ ಹಣವನ್ನೂ ಬಳಸದೇ ಮರಳಿಸಿಬಿಡುವ ವರ್ಗಕ್ಕೆ ಸೇರಿದ್ದೇವೆ ನಾವು. ಯಡಿಯೂರಪ್ಪನವರ ಕಾಲಕ್ಕೆ ಅನುದಾನದಲ್ಲಿ ಸ್ವಲ್ಪ ಹೆಚ್ಚಿನ ಬಳಕೆ ಕಂಡುಬಂದಿತ್ತಾದರೂ ಅದು ಮರಳಿದ್ದೇ ಹೆಚ್ಚು! ಈ ಕಾರಣದಿಂದಾಗಿಯೇ ರಾಜಸ್ಥಾನದಲ್ಲಿ ಎರಡೂವರೆ ಸಾವಿರ, ಮಧ್ಯಪ್ರದೇಶದಲ್ಲಿ ಒಂದೂವರೆ ಸಾವಿರ ಸರ್ಕಾರಿ ಆಸ್ಪತ್ರೆಗಳಿದ್ದರೆ ನಮ್ಮಲ್ಲಿ ಇರೋದು 765 ಮಾತ್ರ! ನಮಗಿಂತ ಕಡಿಮೆ ಜನಸಂಖ್ಯೆಯ ಛತ್ತೀಸ ಗಢದಲ್ಲೂ ಎರಡು ಸಾವಿರಕ್ಕೂ ಹೆಚ್ಚು ಸಕರ್ಾರೀ ಆಸ್ಪತ್ರೆಗಳಿವೆ. ಇದರರ್ಥ ಏನು ಗೊತ್ತೇ? ನಮ್ಮಲ್ಲಿ 80 ಸಾವಿರ ಜನರಿಗೆ ಒಂದು ಆಸ್ಪತ್ರೆ ಎಂದಾದರೆ ಗುಜರಾತಿನಲ್ಲಿ 38 ಸಾವಿರ ಜನಕ್ಕೆ ಒಂದು ಸರ್ಕಾರಿ ಆಸ್ಪತ್ರೆ!



ಶಿಕ್ಷಣದ ವಿಚಾರದಲ್ಲೇನೂ ನಾವು ಸುಧಾರಿಸಿಲ್ಲ. 2010-11 ರಲ್ಲಿ 11 ಲಕ್ಷ ಜನ ಐದನೇ ತರಗತಿಯಲ್ಲಿದ್ದರೆ 10ನೇ ತರಗತಿಗೆ ಬರುವ ವೇಳೆಗೆ ಈ ಪ್ರಮಾಣ ಎಂಟು ಲಕ್ಷಕ್ಕೂ ಕಡಿಮೆಯಾಗಿತ್ತು. ಪ್ರತೀ ವರ್ಷದ ಅಂಕಿ ಅಂಶವೂ ಇದನ್ನೇ ಹೇಳುತ್ತಿದೆ. ನವೆಂಬರ್ನ ಹೊಸ್ತಿಲಲ್ಲಿ ನಿಂತು ಚಚರ್ಿಸಲೇಬೇಕಾದ ಅಂಶವೊಂದಿದೆ. 2010-11ರಲ್ಲಿ ಕನ್ನಡ ಮಾಧ್ಯಮದಲ್ಲಿ 74 ಲಕ್ಷ ಜನ ದಾಖಲಾಗಿದ್ದರೆ, ಕಳೆದ ವರ್ಷ ಆ ಪ್ರಮಾಣ 69 ಲಕ್ಷಕ್ಕಿಳಿದಿತ್ತು. ಅದಕ್ಕೆ ಪ್ರತಿಯಾಗಿ ಆಂಗ್ಲ ಮಾಧ್ಯಮಕ್ಕೆ 2010-11 ರಲ್ಲಿ ಹದಿನೆಂಟೂವರೆ ಲಕ್ಷ ಜನ ಸೇರ್ಪಡೆಯಾಗಿದ್ದರೆ ಕಳೆದ ವರ್ಷ ದಾಖಲಾತಿ 25 ಲಕ್ಷದ ಆಸು ಪಾಸಿನಲ್ಲಿದೆ! ಆಗೆಲ್ಲ ಸಕರ್ಾರಿ ಶಾಲೆಗಳ ದಾಖಲಾತಿ ಖಾಸಗಿಯವರಿಗಿಂತ ಹೆಚ್ಚಾಗಿತ್ತು. ಕಳೆದ ವರ್ಷದಿಂದ ದೃಶ್ಯ ಬದಲಾಗಿದೆ. ಈಗ  ಸರ್ಕಾರಿ ಶಾಲೆಗಳಿಗೆ ಮಕ್ಕಳ ಸಂಖ್ಯೆ ಇಳಿಮುಖವಾಗುತ್ತಿದೆ. ಕ್ರಮೇಣ ಶಾಲೆಗಳು ಮುಚ್ಚುತ್ತ ಜನಸಾಮಾನ್ಯರ ಕುರಿತಂತೆ ಸರ್ಕಾರದ   ಜವಾಬ್ದಾರಿಯೇ ಇಲ್ಲವಾದರೆ ಅಚ್ಚರಿ ಪಡಬೇಕಿಲ್ಲ. ಅದಾಗಲೇ ಆ ದಿಸೆಯಲ್ಲಿ ನಮ್ಮಸರ್ಕಾರ  ಧಾವಂತದಿಂದಲೇ ಓಡುತ್ತಿದೆ. ಕಳೆದೆರಡು ವರ್ಷಗಳ ಅವಧಿಯಲ್ಲಿ ಭಾಗ್ಯಗಳ ಮೇಲೆ ಹಣ ಸುರಿದ ಸರ್ಕಾರ ಶಿಕ್ಷಣದಲ್ಲಿ ಮಾಡಿದ ಹೂಡಿಕೆ ಹಿಂದಿನ ವರ್ಷಕ್ಕಿಂತ ಶೇಕಡಾ ಹತ್ತರಷ್ಟು ಹೆಚ್ಚು ಅಷ್ಟೇ! ಅಂದರೆ ಶಿಕ್ಷಣಕ್ಕೆ ಕೊಡುತ್ತಿರುವ ಗಮನ ದಿನೇ ದಿನೇ ಇಳಿಮುಖವಾಗುತ್ತಿದೆ ಎನ್ನುವುದಂತೂ ಸ್ಪಷ್ಟ. ಸಿಕ್ಕಿಂನಂತಹ ರಾಜ್ಯಗಳು ಪ್ರತಿ ವ್ಯಕ್ತಿಯ ಮೇಲೆ ಪ್ರತಿ ವರ್ಷ ಶಿಕ್ಷಣಕ್ಕೆಂದೇ 12 ಸಾವಿರಕ್ಕಿಂತಲೂ ಹೆಚ್ಚು ಹಣ ವ್ಯಯಿಸುತ್ತಿದ್ದರೆ ನಾವು 2 ಸಾವಿರದಷ್ಟು ಹಣವನ್ನಷ್ಟೇ ಖಚರ್ು ಮಾಡುತ್ತಿರೋದು. ಸರ್ಕಾರದ ಅಂಕಿ ಅಂಶಗಳನ್ನೇ ನಂಬುವುದಾದರೆ ಬುದ್ಧಿವಂತರ ಜಿಲ್ಲೆಯಾದ ಉತ್ತರ ಕನ್ನಡದಲ್ಲಿಯೇ 164 ಹಳ್ಳಿಗಳಲ್ಲಿ ಒಬ್ಬನಾದರೂ ಪದವೀಧರನಿಲ್ಲ. ಶಿವಮೊಗ್ಗದಲ್ಲಿ ಈ ಸಂಖ್ಯೆ 100! ಪ್ರತೀ ವರ್ಷ ಪ್ರಮಾಣವಚನ ಸ್ವೀಕರಿಸಿ ಐದೈದು ವರ್ಷಗಳ ಕಾಲ ಆಳ್ವಿಕೆ ನಡೆಸುವ ಯಾವೊಬ್ಬ ಶಿಕ್ಷಣ ಮಂತ್ರಿಗೂ ಇದು ಅವಮಾನಕರ ಸಂಗತಿ ಎನಿಸುವುದಿಲ್ಲವೇನು?!



ಶಿಕ್ಷಣ ಎಲ್ಲರಿಗೂ ಸಂಬಂಧಪಟ್ಟ ಸಂಗತಿಯಲ್ಲವೆಂದು ನೀವು ಹೇಳಬಹುದು. ರಾಜ್ಯದ ರಸ್ತೆಗಳ ಕಥೆ ಹೇಗಿದೆ? 2015ರಲ್ಲಿ ಪಂಜಾಬು ತನ್ನ ರಾಜ್ಯದ 98 ಪ್ರತಿಶತ ಹಳ್ಳಿಗಳಿಗೆ ಟಾರು ಹಾಕಿದರೆ ಕರ್ನಾಟಕ  58 ಪ್ರತಿಶತ ದಾಟಲಿಲ್ಲ. ಪ್ರಗತಿಯತ್ತ ಓಟವೆಂದರೆ ಇದೇ ಏನು? ಜಾತಿಗಳನ್ನು ಒಡೆಯುವ, ಟಿಪ್ಪೂ ಜಯಂತಿಗೆ ಕೊಡುವ ಲಕ್ಷ್ಯವನ್ನು ಸಿದ್ದರಾಮಯ್ಯನವರು ರಾಜ್ಯದೆಡೆಗೆ ನೀಡಿದ್ದರೆ ಒಂದಷ್ಟು ಹಳ್ಳಿಗಳು ಟಾರು ರಸ್ತೆಯನ್ನು ಕಂಡಿರುತ್ತಿದ್ದವು. ಪ್ರತೀ ಎರಡು ಪ್ರತಿಶತದಷ್ಟು ಜನಸಂಖ್ಯೆ ಹೆಚ್ಚಳಕ್ಕೆ ನಮ್ಮಲ್ಲಿ ಶೇಕಡಾ 10ರಷ್ಟು ವಾಹನಗಳ ಸಂಖ್ಯೆ ವೃದ್ಧಿಯಾಗುತ್ತಿದೆ. ಅದರ ಮೇಲೆ ನಿರಂತರ ತೆರಿಗೆ ಹೇರಿ ಹಣ ಕ್ರೋಢೀಕರಿಸುವ ಆಳುವ ಧಣಿಗಳಿಗೆ ಅವುಗಳಿಗೆ ಅಗತ್ಯವಾಗಿ ಬೇಕಾದ ಮೂಲ ಸೌಕರ್ಯದ ಕುರಿತಂತೆ ಮಾತ್ರ ಆಲೋಚನೆ ಇಲ್ಲವೆಂದರೆ ಹೇಗೆ? ರಸ್ತೆಗಳ ಕಥೆ ಹೀಗಾದರೆ ನೀರಿನದ್ದು ಮತ್ತೂ ಕೆಟ್ಟದ್ದು. ಶುದ್ಧ ಕುಡಿಯುವ ನೀರು ಪ್ರತಿಯೊಬ್ಬ ನಾಗರೀಕನ ಅಧಿಕಾರ. ಆದರೆ ಈ ಕುರಿತಂತೆ ಸಕರ್ಾರಗಳು ಎಂದಾದರೂ ಯೋಚಿಸಿವೆಯೇನು? ಗುಜರಾತಿನ ಅಹ್ಮದಾಬಾದಿನಲ್ಲಿ ಉತ್ಪಾದನೆಯಾಗುವ ಅಷ್ಟೂ ಕೊಳಚೆ ನೀರನ್ನೂ ಶುದ್ಧಗೊಳಿಸಿದರೆ ಬೆಂಗಳೂರಿನಲ್ಲಿ ಶೇಕಡಾ ಹತ್ತರಷ್ಟು ಮಾತ್ರ ಮರುಬಳಕೆಗೆ ಸೂಕ್ತವಾಗುತ್ತದೆ. ಎಷ್ಟೊಂದು ನಗರಾಭಿವೃದ್ಧಿ ಸಚಿವರುಗಳು ಆಗಿ ಹೋದರು, ಒಬ್ಬರಿಗಾದರೂ ಈ ಬಗ್ಗೆ ಕಾಳಜಿ ಇರಲಿಲ್ಲ. ಅದಾಗಲೇ ಅಂತರ್ಜಲ ಮಟ್ಟ ಪಾತಾಳ ತಲುಪಿ ರಾಜ್ಯದ ಶೇಕಡಾ ಎಂಟರಷ್ಟು ತಾಲೂಕುಗಳು ಭಯಾನಕ ಸ್ಥಿತಿಯಲ್ಲಿವೆ. ಶೇಕಡಾ ಮುವ್ವತ್ತರಷ್ಟು ಅದಾಗಲೇ ನೀರಿನ ಸಾಕಷ್ಟು ಶೋಷಣೆ ಮಾಡಿ ಮುಗಿಸಿವೆ. ಇವಿಷ್ಟೂ ಎರಡು ವರ್ಷಗಳಷ್ಟು ಹಳೆಯ ದಾಖಲೆ. ಈಗಿನ ಸ್ಥಿತಿ ಇನ್ನೂ ಭಯಾನಕವಾಗಿರಲು ಸಾಕು.

ರಾಜ್ಯದಲ್ಲಿ ಇಷ್ಟೊಂದು ಇಂಜಿನಿಯರಿಂಗ್ ಕಾಲೇಜುಗಳಿಗೆ ಅನುಮತಿ ಕೊಟ್ಟು ಲಕ್ಷ ಲಕ್ಷ ಇಂಜಿನಿಯರುಗಳನ್ನು ಮಾರುಕಟ್ಟೆಗೆ ತಂದು ಬಿಡುತ್ತಿದ್ದೇವಲ್ಲ, ಎಂದಾದರೂ ಅವರ ಕೌಶಲ್ಯದ ಕುರಿತಂತೆ ಮುಖ್ಯಮಂತ್ರಿಗಳು ಆಲೋಚಿಸಿದ್ದಾರಾ? ಖಾಸಗಿ ಸಂಸ್ಥೆಯೊಂದು ಕೊಟ್ಟಿರುವ ವರದಿಯ ಪ್ರಕಾರ ಕನರ್ಾಟಕದ ಇಂಜಿನಿಯರಿಂಗ್ ವಿದ್ಯಾರ್ಥಿ ಗಳಲ್ಲಿ ವಿದ್ಯಾರ್ಥಿಗಳಲ್ಲಿ ಸ್ಟಾರ್ಟ್ಸ್ಪ್ ಗೆ ಕೌಶಲ್ಯದೊಂದಿಗೆ ಬರುವವರು ಶೇಕಡಾ ನಾಲ್ಕರಷ್ಟು ಮಾತ್ರ. ಇದರ ಹತ್ತು ಪಟ್ಟು ಜನ ಬಿಪಿಓಗೆ ಸಾಲುವಂತಹ ಕೌಶಲವಷ್ಟೇ ಹೊಂದಿರುವಂಥವರು. ಬುದ್ಧಿವಂತರ ನಾಡಾಗಿರುವ ಕರ್ನಾಟಕದಿಂದ ನಾವು ಕಳೆದ ಹತ್ತು ವರ್ಷಗಳಲ್ಲಿ ಹುಟ್ಟು ಹಾಕಿರುವುದು ಇಂಥದ್ದೇ ಮಂದಿಯನ್ನು ಎಂಬುದು ಅವಮಾನಕರ ಸಂಗತಿಯಲ್ಲವೇನು? ಹಾಗಂತ ಬಿಪಿಓಗಳನ್ನು ಜರಿಯುತ್ತಿಲ್ಲ ಆದರೆ ಅದಕ್ಕೆ ಇಂಜಿನಿಯರಿಂಗ್ ವಿದ್ಯಾರ್ಥಿಗಳೇ ಬೇಕೆಂದಿಲ್ಲ ಅಷ್ಟೇ. ತರುಣರಲ್ಲಿ ವ್ಯಾಪಾರವನ್ನು, ಹೊಸ ಹೊಸ ಸವಾಲುಗಳನ್ನು ಸ್ವೀಕರಿಸುವ ಮನೋಭೂಮಿಕೆ ನಿರ್ಮಾಣ  ಮಾಡುವ ಆಲೋಚನೆಯಿದ್ದರಲ್ಲವೇ ಅವೆಲ್ಲ ಸಾಧ್ಯವಾಗೋದು.



ಹೀಗೆ ಮುಖ್ಯಮಂತ್ರಿಗಳಿಗೆ ಪ್ರಶ್ನೆ ಕೇಳಲೆಂದು ಕುಳಿತರೆ ನನ್ನ ಬಳಿ ಬೆಟ್ಟದಷ್ಟಿವೆ. ಆದರೆ ಅವರಿಗೆ ಪುರಸೊತ್ತು ಮತ್ತು ವ್ಯವಧಾನ ಬೇಕಲ್ಲವೇ? ನಾನು ಹತ್ತಿರ ಬಂದೊಡನೆ ಅವರಿಗೆ ಕೋಮುವಾದಿಯ ವಾಸನೆ ಬಡಿದರೆ ನಾನೇನು ಮಾಡಲಿ? ಅವರು ಈ ಐದು ವರ್ಷ ಮೋದಿಯವರನ್ನು ದೂಷಿಸುತ್ತ ಸಮಯ ಕಳೆಯುವ ಬದಲು ಅವರನ್ನು ಆಂತರ್ಯದಲ್ಲಿ ಅನುಸರಿಸಿದ್ದರೂ ಇಂದಿನ ಕನರ್ಾಟಕದ ಚಿತ್ರಣ ಬದಲಾಗಿರುತ್ತಿತ್ತು. ರಾಜ್ಯದ ಸರ್ಕಾರಿ ವೆಬ್ಸೈಟುಗಳ ಮೇಲೆ ಒಮ್ಮೆ ಕಣ್ಣಾಡಿಸಿದರೆ ನಾನೇಕೆ ಹೀಗೆ ಹೇಳುತ್ತಿದ್ದೇನೆಂದು ನಿಮಗೆ ಸ್ಪಷ್ಟವಾಗಿ ಅರಿವಾಗುತ್ತದೆ. ಕೇಂದ್ರದ ಮಾಹಿತಿ ನೀಡುವ ಜಾಲತಾಣಗಳು ಎಲ್ಲಾ ಮಾಹಿತಿಗಳನ್ನು ಸಮಗ್ರವಾಗಿ ಕ್ರೋಢೀಕರಿಸಿದ್ದರೆ ರಾಜ್ಯದಲ್ಲಿ ಆ ಕುರಿತಂತೆ ಗಮನವನ್ನೇ ಹರಿಸಿಲ್ಲ. ಇವರ ಬಳಿ ಇರೋದು ಜಾತಿ ಗಣತಿಯ ಮಾಹಿತಿ ಮಾತ್ರ. ಹೇಗಾದರೂ ಮಾಡಿ ಜಾತಿಯ ಲೆಕ್ಕಾಚಾರವನ್ನು ಮತ್ತೆ ಮತ್ತೆ ಮಾಡುತ್ತ ಅಧಿಕಾರಕ್ಕೆ ಮತ್ತೆ ಬಂದರಾಯ್ತೆಂಬ ದುದರ್ೃಷ್ಟಿ ಮಾತ್ರ. ಇದು ಬಹಳ ದಿನಗಳ ಕಾಲ ನಡೆಯುವುದಿಲ್ಲವೆಂಬುದನ್ನು ಈ ಬಾರಿ ಸಮರ್ಥವಾಗಿ ತೋರಿಸಬೇಕಿದೆ. ಸಾವಿರ ರೂಪಾಯಿಗೆಲ್ಲ ಓಟು ಹಾಕಿ ಸಾವಿರಾರು ದಿನಗಳ ಜೀತ ಮಾಡುವುದಕ್ಕಿಂತ ರಾಜ್ಯದ ಅಭಿವೃದ್ಧಿಯ ಕನಸನ್ನು ಕಟ್ಟಿ ಅದಕ್ಕೆ ತಕ್ಕಂತೆ ಹೆಜ್ಜೆ ಹಾಕುವುದು ಅಗತ್ಯ.

ಆದರೆ ಕನ್ನಡಿಗರ ದೌಭರ್ಾಗ್ಯವೇನು ಗೊತ್ತೇ? ಆಳುವ ಪಕ್ಷವಂತೂ ಸಮರ್ಥವಲ್ಲ ಎಂದು ಸಾಬೀತು ಪಡಿಸಿಕೊಂಡಿದೆ; ಅತ್ತ ವಿರೋಧ ಪಕ್ಷಗಳೂ ಬೆಪ್ಪು ತಕ್ಕಡಿಗಳಂತಿವೆ. ನಾಗರಿಕರು ಪ್ರಜ್ಞಾವಂತರಾದರೂ ಆಯ್ಕೆ ಸಲೀಸಿಲ್ಲ!

0
Shares
  • Share On Facebook
  • Tweet It




Trending Now
ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
chakravarhy sulibele September 16, 2025
ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
chakravarhy sulibele September 16, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
  • Popular Posts

    • 1
      ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • 2
      ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • 3
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • 4
      ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • 5
      ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search