48 ವರ್ಷಗಳಿಂದ ದಟ್ಟಾರಣ್ಯ ವಾಸಿಯಾಗಿದ್ದ ಕೆಂಚಪ್ಪ ಗೌಡ ನಿಧನ!
ನಾಡಿಗೆ ಬರಲೊಪ್ಪದೇ ಕಾಡಿನ ವಾಸಿಯಾಗಿದ್ದ ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ನಿವಾಸಿ ಕೆಂಚಪ್ಪ ಗೌಡ ಆಕ್ಟೋಬರ್ 27 ರಂದು ನಿಧನರಾದರು.
ಮರ್ಕಂಜ ಗ್ರಾಮದ ಕುದನೆಕೋಡಿ ದೊಡ್ಡಣ್ಣ ಗೌಡ ಮತ್ತು ದುಗ್ಗಮ್ಮ ದಂಪತಿಯ ಪುತ್ರ ಕೆಂಚಪ್ಪ, ಕೃಷಿ ಕಾಯಕದಲ್ಲಿ ತೊಡಗಿದ್ದರು. ಕೆಂಚಪ್ಪ ಅವರು ಏಕಾಏಕಿ ತನ್ನ 23 ನೇ ವಯಸ್ಸಿನಲ್ಲಿ ತಮ್ಮ ಮನೆಯಿಂದ ಹೊರಟು ದಟ್ಟವಾದ ರಕ್ಷಿತಾರಣ್ಯದತ್ತ ತೆರಳಿ 48 ವರ್ಷಗಳ ಕಾಲ ಅರಣ್ಯ ವಾಸಿಯಾಗಿದ್ದರು. ಕಾಡಿನಲ್ಲಿಯೇ ಗರಿಯ ಸೂರು ಮಾಡಿಕೊಂಡು, ಜೊಪಡಿ ಸುತ್ತಲೂ ಕಲ್ಲಿನ ಛಾವಣಿ ಮಾಡಿಕೊಂಡು , ಬಿದಿರಿನಿಂದ ಕೂಡಿದ ಮಂಚ, ಅಡಿಕೆಯ ಹಾಳೆ ಅವರ ಹಾಸಿಗೆಯಾಗಿತ್ತು. ವೀಪರಿತ ಮಳೆ ಬಂದರೆ ಮರದ ಪೊಟರೆಯೇ ಅವರ ಆಶ್ರಯ ತಾಣವಾಗಿತ್ತು. ದಟ್ಡ ಕಾಡಿನಲ್ಲಿದ್ದರು ದಿನಕ್ಕೊಂದು ಬಾರಿ ಅರಣ್ಯದಿಂದ ಸೊಪ್ಪು ಕಟ್ಟಿಗೆಗಳನ್ನು ಸಹೋದರನ ಮನೆಗೆ ಒಪ್ಪಿಸಿ ಊಟ ಮಾಡಿ ತೆರಳುತ್ತಿದ್ದರು. ಉಳಿದ ಸಮಯದಲ್ಲಿ ಗೆಡ್ಡೆ ಗೆಣಸುಗಳೇ ಆಹಾರವಾಗಿದ್ದವು. ವಯಸ್ಸಿಗೆ ಸಂಬಂಧಿಸಿದ ಅನಾರೋಗ್ಯದ ಕಾರಣದಿಂದಾಗಿ ಅವರು ಒಂದು ವರ್ಷ ಹಿಂದೆ ತನ್ನ ಸಹೋದರನ ಮನೆಗೆ ಆಗಮಿಸಿದ್ದರು.
ಕಾಡು ಪ್ರಾಣಿಗಳು ಅವರ ಮೇಲೆ ದಾಳಿಮಾಡಲು ಬಂದಾಗ, ಕೆಂಚೆಪ್ಪ ಮರದ ಮೇಲೆ ಹತ್ತಿ, ಜೋರಾಗಿ ಶಬ್ದ ಮಾಡುವ ಮೂಲಕ ಅವುಗಳನ್ನು ಹೆದರಿಸಿ ಓಡಿಸುತಿದ್ದರು. 48 ವರ್ಷಗಳಲ್ಲಿ ಅವರು ಕಾಡಿನಲ್ಲಿ ವಾಸಿಸುತ್ತಿದ್ದರು, ಕೇವಲ ಎರಡು ಬಾರಿ ಆನೆಯಿಂದ ದಾಳಿಯಗಿತ್ತು, ಒಳಗೊಂಡಂತೆ ಕಾಡು ಪ್ರಾಣಿಗಳ ಆಕ್ರಮಣಗಳಿಂದ ತನ್ನನ್ನು ರಕ್ಷಿಸಿಕೊಂಡಿದ್ದರು.
ಬಂಧುಗಳು ಮತ್ತು ಜಿಲ್ಲಾದಿಕಾರಿಗಳು ಅವರನ್ನು ಕಾಡಿನಿಂದ ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಿದ್ದರೂ , ವಿಫಲವಾಗಿದ್ದು ಕಾಡೇ ಅವರ ಸರ್ವಸ್ವವಾಗಿತ್ತು.
Leave A Reply