ಶ್ರೀರಾಮಸೇನೆ ರಾಜ್ಯ ಉಪಾಧ್ಯಕ್ಷ, ಹಿಂದುತ್ವ ಪ್ರತಿಪಾದಕ ಸಿದ್ಧಲಿಂಗ ಶ್ರೀಗಳ ಬಂಧನ
ಕಲಬುರಗಿ: ಪ್ರಬಲ ಹಿಂದೂತ್ವದ ಪ್ರತಿಪಾದಕ, ಸಿದ್ದರಾಮಯ್ಯ ಕಾಂಗ್ರೆಸ್ ಸರಕಾರವನ್ನುಮತ್ತು ರಾಜ್ಯ ಸರಕಾರದ ಅಲ್ಪಸಂಖ್ಯಾತರ ತುಷ್ಟೀಕರಣ ನೀತಿಯನ್ನು ಪ್ರಬಲವಾಗಿ ಖಂಡಿಸಿ, ಕಾಂಗ್ರೆಸ್ ಮುಖಂಡರಿಗೆ ಮುಳ್ಳಾಗಿದ್ದ ಶ್ರೀರಾಮಸೇನೆಯ ರಾಜ್ಯ ಉಪಾಧ್ಯಕ್ಷ ಜೇವರ್ಗಿ ತಾಲೂಕಿನ ಆಂದೋಲಾದ ಸಿದ್ಧಲಿಂಗ ಶ್ರೀಗಳನ್ನು ಜೇವರ್ಗಿ ಪೊಲೀಸರು ಬಂಧಿಸಿದ್ದಾರೆ. ಕೊಲೆ ಯತ್ನಕ್ಕೆ ಪ್ರಚೋದನೆ ಆರೋಪದ ಮೇಲೆ ಶ್ರೀಗಳನ್ನು ಆಂದೋಲಾದಲ್ಲಿ ವಶಪಡಿಸಿಕೊಳ್ಳಲಾಗಿದೆ.
ಸಿದ್ಧಲಿಂಗ ಶ್ರೀಗಳ ವಿರುದ್ಧ ನಾಲ್ಕು ಪ್ರಕರಣಗಳು ದಾಖಲಾಗಿದ್ದು, ಒಂದು ಪ್ರಕರದಲ್ಲಿ ಜಾಮೀನು ದೊರೆತಿದೆ. ಇನ್ನು ಮೂರು ಪ್ರಕರಣಗಳ ವಿಚಾರಣೆಗಾಗಿ ಪೊಲೀಸರು ಬಂಧಿಸಿದ್ದಾರೆ. ಇನ್ನು ಪೊಲೀಸರು ಟಿಪ್ಪು ಸುಲ್ತಾನ ಜಯಂತಿಯನ್ನು ಯಶಸ್ವಿ ಮಾಡಲು ಶ್ರೀಗಳನ್ನು ಬಂಧಿಸಿದ್ದಾರೆ. ಇದಕ್ಕೆ ರಾಜ್ಯ ಸರಕಾರದ ಕುಮ್ಮಕ್ಕಿದೆ ಎಂದು ಭಕ್ತರು ಆರೋಪಿಸಿದ್ದಾರೆ. ಈ ಹಿಂದೆ ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಸಿದ್ಧಲಿಂಗ ಶ್ರೀಗಳು ಪ್ರತಿಭಟನೆ, ಹೋರಾಟ ಮತ್ತು ಭಾಷಣಗಳನ್ನು ಮಾಡಿದ್ದರು. ಇದರಿಂದ ಕಾಂಗ್ರೆಸ್ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದ್ದರು.
ಅಲ್ಲದೇ ಸಿದ್ಧಲಿಂಗ ಶ್ರೀ 2018 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಕೇಳಿ ಬರುತಿದ್ದು, ಅದಕ್ಕಾಗಿಯೇ ಈಗಿನಿಂದಲೇ ಅವರನ್ನು ಹಣಿಯುವ ಕೆಲಸ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಸಿದ್ಧಲಿಂಗ ಶ್ರೀಗಳನ್ನು ಬಂಧಿಸಿದರೆ ಹೋರಾಟ ಮಾಡಲಾಗುವುದು ಎಂದು ಶ್ರೀರಾಮಚಂದ್ರಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಸೇರಿ ಹಲವು ಸ್ವಾಮೀಜಿಗಳು ಭಾನುವಾರ ಕಲಬುರಗಿಯಲ್ಲಿ ಎಚ್ಚರಿಕೆ ನೀಡಿದ್ದರು. ಆದರೂ ಸರಕಾರ ಶತಾಯಗತಾಯ ಪ್ರಬಲ ಹಿಂದೂತ್ವದ ಪ್ರತಿಪಾದಕರಾದ ಸಿದ್ಧಲಿಂಗ ಶ್ರೀಗಳನ್ನು ಹತ್ತಿಕ್ಕಲು ಮುಂದಾಗಿದೆ ಎಂದು ಆರೋಪಿಸಿದೆ.
Leave A Reply