ಭಾರತ ಮೊದಲು ಹಿಂದೂಗಳಿಗೆ ಸಂಬಂಧಿಸಿದ್ದು, ಬಳಿಕ ಬೇರೆಯವರಿಗೆ…
Posted On October 31, 2017

ಮುಂಬೈ: ಭಾರತ ಮೊದಲು ಹಿಂದೂಗಳ ರಾಷ್ಟ್ರ, ಬಳಿಕ ಎಲ್ಲರಿಗೂ ಸಂಬಂಧಿಸಿದ್ದು ಶಿವಸೇನೆ ಮುಖವಾಣಿ “ಸಾಮ್ನಾ” ಪತ್ರಿಕೆಯಲ್ಲಿ ಸಂಪಾದಕೀಯ ಬರೆಯಲಾಗಿದೆ.
ಭಾರತ ಎಲ್ಲರನ್ನೊಳಗೊಂಡ ಹಿಂದೂಸ್ತಾನ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಸಾಮ್ನಾ ಪತ್ರಿಕೆಯಲ್ಲಿ ಭಾರತ ಮೊದಲು ಹಿಂದೂಗಳಿಗೆ ಸಂಬಂಧಿಸಿದ ರಾಷ್ಟ್ರ ಎಂದು ಬರೆಯಲಾಗಿದೆ.
ಕ್ರಿಶ್ಚಿಯನ್ನರಿಗೆ ಅಮೆರಿಕ ಹಾಗೂ ಯೂರೋಪ್ ರಾಷ್ಟ್ರಗಳಿವೆ. ಮುಸ್ಲಿಮರದ್ದೇ ಸುಮಾರು 50 ರಾಷ್ಟ್ರಗಳಿವೆ. ಬೌದ್ಧರಿಗೆ ಜಪಾನ್, ಚೀನಾ, ಶ್ರೀಲಂಕಾಗಳಿವೆ. ಆದರೆ ಭಾರತದ ಹಿಂದೂಗಳಿಗೆ ಯಾವ ರಾಷ್ಟ್ರವೂ ಇಲ್ಲ ಹಾಗಾಗಿ ಭಾರತ ಹಿಂದೂಗಳ ರಾಷ್ಟ್ರ ಎಂದು ಉಲ್ಲೇಖಿಸಲಾಗಿದೆ.
ಭಾರತ ಹಿಂದೂಗಳ ರಾಷ್ಟ್ರವಾಗಿರುವುದರಿಂದ, ಅನಾದಿ ಕಾಲದಿಂದಲೂ ಹಿಂದೂಗಳೇ ಜಾಸ್ತಿ ನೆಲೆಸಿರುವುದರಿಂದ, ಜೈನ, ಬೌದ್ಧ ಧರ್ಮಗಳಿಗೂ ಮೊದಲು ಹಿಂದೂ ಧರ್ಮವೇ ಇದ್ದ ಕಾರಣ ಭಾರತ ಹಿಂದೂಗಳ ರಾಷ್ಟ್ರ ಎಂದು ಪತ್ರಿಕೆಯ ಸಂಪಾದಕೀಯದಲ್ಲಿ ಬರೆಯಲಾಗಿದೆ.
- Advertisement -
Leave A Reply