ಪ್ರತಿ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ ಪುತ್ಥಳಿ ನಿರ್ಮಿಸಿ: ರಾಜಸ್ತಾನ ಸರ್ಕಾರ ನಿರ್ದೇಶನ
Posted On October 31, 2017

ಜೈಪುರ: ರಾಜ್ಯದ ಪ್ರತಿ ಕಾಲೇಜು ವಿದ್ಯಾರ್ಥಿಯೂ ದೇಶಪ್ರೇಮಿಯಾಗುವ ಉದ್ದೇಶದಿಂದ ಹಾಗೂ ಸ್ಫೂರ್ತಿದಾಯಕ ವ್ಯಕ್ತಿತ್ವದ ಪರಿಚರ ಇರಲಿ ಎಂದು ರಾಜಸ್ತಾನ ಸರ್ಕಾರ ಎಲ್ಲ ಕಾಲೇಜುಗಳಲ್ಲಿ ಸ್ವಾಮಿ ವಿವೇಕಾನಂದರ ಪುತ್ಥಳಿ ನಿರ್ಮಿಸಿ ಎಂದು ನಿರ್ದೇಶನ ನೀಡಿದೆ.
ಪ್ರತಿ ಕಾಲೇಜುಗಳು ವಿವೇಕಾನಂದರ ಪುತ್ಥಳಿ ಹಾಗೂ ಭಾವಚಿತ್ರ ಹಾಕಬೇಕು ಎಂದು ಸರ್ಕಾರ ಅಧಿಸೂಚನೆ ಹೊರಡಿಸಿದೆ. ಅಲ್ಲದೆ ವಿದ್ಯಾರ್ಥಿಗಳು ಸಮಗ್ರ ಚಿಂತನೆ, ವಿಶಾಲ ನೋಟ ಹಾಗೂ ಪಾರದರ್ಶಕತೆ ಅಳವಡಿಸಿಕೊಳ್ಳಲು ವಿವೇಕಾನಂದರು ಸ್ಫೂರ್ತಿಯಾಗಲಿ ಎಂದು ಸೂಚಿಸಲಾಗಿದೆ.
ವಿವೇಕಾನಂದರು ಯುವಜನರ ಮುಕುಟಮಣಿ. ಹಾಗಾಗಿ ಅವರಿಂದ ವಿದ್ಯಾರ್ಥಿಗಳು ಸ್ಫೂರ್ತಿ ಪಡೆಯಲು ಹಾಗೂ ಪ್ರತಿ ವಿದ್ಯಾರ್ಥಿ ದೇಶಪ್ರೇಮಿಯಾಗಿ ರೂಪಿಸಲು ಯೋಜನೆ ರೂಪಿಸಲಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
- Advertisement -
Leave A Reply