ಸೋನಿಯಾ ತವರು ಕ್ಷೇತ್ರದ ಉಷ್ಣವಿದ್ಯುತ್ ಸ್ಥಾವರದಲ್ಲಿ ದುರಂತ, 18 ಸಾವು
ಲಖನೌ : ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಲೋಕಸಭಾ ಕ್ಷೇತ್ರ ರಾಯ್‍ಬರೇಲಿಯಲ್ಲಿ ರಾಷ್ಟ್ರೀಯ ಉಷ್ಣವಿದ್ಯುತ್ ಸ್ಥಾವರದಲ್ಲಿ(ಎನ್‍ಟಿಪಿಸಿ) ಅವಘಡ ಸಂಭವಿಸಿದ್ದರಿಂದ 18 ಕಾರ್ಮಿಕರು ಮೃತರಾಗಿದ್ದಾರೆ. 100ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿದೆ.
ಉಂಛಾಹರ್ ಪ್ರದೇಶದಲ್ಲಿನ ಉಷ್ಣವಿದ್ಯುತ್ ಸ್ಥಾವರದ 500ಮೇ. ವ್ಯಾಟ್ ಸಾಮಥ್ರ್ಯದ ಬಾಯ್ಲರ್‍ನಲ್ಲಿ ಬೂದಿ ಸರಬರಾಜು ಪೈಪ್ ಅಧಿಕ ಒತ್ತಡದಿಂದ ಸ್ಪೋಟಗೊಂಡಿದೆ.
ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆನಂದ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಂತರಿಕ ತನಿಖೆಗೂ ಎನ್‍ಟಿಪಿಸಿ ಆದೇಶಿಸಿದೆ. ರಾಷ್ಟ್ರೀಯ ವಿಪತ್ತು ರಕ್ಷಣಾ ಪಡೆ ಕಾರ್ಯಾಚರಣೆ ನಡೆಸುತ್ತಿದ್ದು, ಮೃತರ ಸಂಖ್ಯೆ ಹೆಚ್ಚಾಗಲಿದೆ ಎಂದಿದೆ. ಇನ್ನೂ 10-15 ಕಾರ್ಮಿಕರು ಬಾಯ್ಲರ್ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಗುಜರಾತ್ ಚುನಾವಣೆ ರ್ಯಾಲಿ ಸ್ಥಗಿತ, ರಾಹುಲ್ ದೌಡು : ತಾಯಿ ಸೋನಿಯಾರ ಲೋಕಸಭಾ ಕ್ಷೇತ್ರದಲ್ಲಿನ ದುರಂತಕ್ಕೆ ನವಸರ್ಜನ್ ಚುನಾವಣಾ ರ್ಯಾಲಿ ತಾತ್ಕಾಲಿಕ ಸ್ಥಗಿತಗೊಳಿಸಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ತೆರಳಿದ್ದಾರೆ. ಅನಾರೋಗ್ಯದ ಕಾರಣ ಸೋನಿಯಾ ಗಾಂಧಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಕ್ಷೇತ್ರದ ಜವಾಬ್ದಾರಿ ರಾಹುಲ್ ಹೆಗಲಿಗೆ ಬಿದ್ದಿದೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ. ಮಧ್ಯಾಹ್ನಕ್ಕೆ ಮತ್ತೆ ರಾಹುಲ್ ಗುಜರಾತ್‍ಗೆ ವಾಪಸಾಗಲಿದ್ದಾರೆ.
Leave A Reply