ಕಾಂಗ್ರೆಸ್ ಯುವರಾಜನಿಗೆ ಮತ್ತೆ ರಮ್ಯಾ ಕೃಪೆಯಿಂದ ಟ್ವೀಟ್ ಮುಖಭಂಗ!
Posted On November 2, 2017
ನವದೆಹಲಿ: ಮಾಜಿ ಸಂಸದೆ ರಮ್ಯಾ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಜವಾಬ್ದಾರಿ ಹೊತ್ತಾಗಿನಿಂದ ಬಾಲಿಷ ಟ್ವೀಟ್‍ಗಳ ಅಭಿಯಾನವನ್ನೇ ಆರಂಭಿಸಿ ಛೀಮಾರಿ ಹಾಕಿಸಿಕೊಳ್ಳುತ್ತಿದ್ದಾರೆ. ಸದಾ ಕಾಲುಕರೆದುಕೊಂಡು ಕೋಳಿ ಜಗಳದ ತಮ್ಮ ಸ್ವಭಾವವನ್ನೇ ಟ್ವೀಟ್‍ನಲ್ಲಿ ಮುಂದುವರಿಸಿ, ಪ್ರಧಾನಿ ಎಂಬ ಗೌರವವೂ ಇಲ್ಲದೇ ಕಾಂಗ್ರೆಸ್ ಹೈಕಮಾಂಡ್‍ಗೆ ಖುಷಿಪಡಿಸಲು ಮನಬಂದಂತೆ ಟ್ವೀಟ್ ಮಾಡಿ ನಗೆಪಾಟಲಿಗೆ ಈಡಾಗುತ್ತಿರುತ್ತಾರೆ. ಬುಧವಾರ ಅಂಥದ್ದೇ ಪ್ರಸಂಗ ನಡೆದಿದೆ.
ಖುದ್ದು ಒಂದು ಅಕ್ಷರನ್ನು ಟ್ವೀಟ್ ಮಾಡದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೆಸರಿನ ಅಧಿಕೃತ ಟ್ವಿಟರ್ ಖಾತೆಯಲ್ಲಿ
” ಉದ್ದಿಮೆಸ್ನೇಹಿ ರಾಷ್ಟ್ರವಾಗಿ ಭಾರತ 100ನೇ ಸ್ಥಾನಕ್ಕೇರಿದ ವಾಸ್ತವತೆ ಎಲ್ಲರಿಗೂ ಗೊತ್ತು. ಇದು ಡಾ.ಜೇಟ್ಲಿ ತಮ್ಮ ಆತ್ಮತೃಪ್ತಿಗೆ ಮಾಡಿಕೊಂಡಿದ್ದು ” ಎಂದು ವ್ಯಂಗವ್ಯಾಗಿ ಟ್ವೀಟ್ ಹಾಕಿದ್ದರು.
ಇಂಥ ಹಲವಾರು ಟೀಕಾಕಾರರಿಗೆ ಮುಟ್ಟು ನೋಡಿಕೊಳ್ಳುವಂತೆ ತಿರುಗೇಟು ಕೊಡುವುದರಲ್ಲಿ ಪಳಗಿದ ಹಿರಿಯ ಬಿಜೆಪಿ ಮುಖಂಡ ಹಾಗೂ ವಿತ್ತ ಸಚಿವ ಅರುಣ್ ಜೇಟ್ಲಿ ಟ್ವೀಟ್ ಮಾಡಿ,
” ಯುಪಿಎ ಮತ್ತು ಎನ್‍ಡಿಎ ನಡುವಿನ ವ್ಯತ್ಯಾಸವಿದು- ಅವರು ಭ್ರಷ್ಟಾಚಾರ ಸ್ನೇಹಿ ವಾತಾವರಣ ನಿರ್ಮಿಸಿದ್ದರು. ನಾವು ಅದನ್ನು ಉದ್ದಿಮೆಸ್ನೇಹಿಯಾಗಿಸಿದೆವು ” ಎಂದು ರಾಹುಲ್ ಮತ್ತು ರಮ್ಯಾ ಹುಡುಗಾಟಕ್ಕೆ ಕಪಾಳಮೋಕ್ಷ ಮಾಡಿದ್ದಾರೆ.
——>>> ಟ್ವಿಟ್ಟರ್‍ನಲ್ಲಿ ರಾಜಕಾರಣ ಮಾಡಿ, ಚುನಾವಣೆ ಗೆಲ್ಲಲಾಗುವುದಿಲ್ಲ ಎಂದು ಕಾಂಗ್ರೆಸ್ ಹಿರಿಯ ರಾಜಕಾರಣಿಗಳು ರಮ್ಯಾ ವರ್ತನೆ ವಿರುದ್ಧ ಹಲವು ಬಾರಿ ಕೆಂಡಕಾರಿದ್ದಾರೆ. ಆದರೂ ರಾಹುಲ್ ಅವರಿಗೆ ಆಪ್ತೆ ಎಂದು ಹೇಳಿಕೊಂಡು ತಮ್ಮ ಒಣಪ್ರತಿಷ್ಠೆಯನ್ನು ರಮ್ಯಾ ಮುಂದುವರಿಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಮಾಹಿತಿ ನೀಡಿವೆ.
- Advertisement -
actressarunbusinesscorruptiondoingeaseformergandhijaitleykannadamandyampndaofrahulramyatweettwitterupa
Trending Now
ಕೆಆರ್ ಎಸ್ ರಸ್ತೆಗೆ ಸಿದ್ಧರಾಮಯ್ಯ ಹೆಸರು ಇಡಲು ಚಿಂತನೆ, ಪರ -ವಿರೋಧ!
December 25, 2024
ರಾಜ್ಯದಲ್ಲಿ ಪ್ರಪ್ರಥಮ ಮೂಳೆ ದಾನ!
December 25, 2024
Leave A Reply