ಆಪ್ ಆಡಳಿತದಲ್ಲಿ ಮಹಿಳೆಯರಿಗೆ ರಕ್ಷಣೆಯಷ್ಟೇ ಅಲ್ಲ, ಆರೋಗ್ಯ, ಶಿಕ್ಷಣವೂ ಸರಿಯಿಲ್ಲ
ದೆಹಲಿ: ಜನಸಾಮಾನ್ಯನ ಪಕ್ಷ ಎಂದು ಅಧಿಕಾರಕ್ಕೆ ಬಂದಿರುವ ಕೇಜ್ರಿವಾಲ್ ಆಡಳಿತವಿರುವ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಜೀವನ ನಡೆಸಲು ಸುರಕ್ಷಿತವಲ್ಲ ಎಂಬುದು ಸಾಬೀತಾಗಿದೆ. ಲಿಂಗತಾರತಮ್ಯ ದೌರ್ಬಲ್ಯ ಸೂಂಚಕದ ಪ್ರಕಾರ ದೆಹಲಿಯಲ್ಲಿ ಶಿಕ್ಷಣ, ಆರೋಗ್ಯ, ಬಡತನ, ರಕ್ಷಣೆ ಸೇರಿ ನಾನಾ ವಿಷಯಗಳಲ್ಲಿ ದೆಹಲಿ ಮಹಿಳೆಯರು ಜೀವನ ಆತಂಕದಲ್ಲೆ ಸಾಗಿದೆ ಎಂಬುದು ತಿಳಿದು ಬಂದಿದೆ.
ಈ ಕುರಿತು ಪ್ಲ್ಯಾನ್ ಇಂಡಿಯಾ ಸಂಸ್ಥೆ ವರದಿ ಸಿದ್ಧಪಡಿಸಿದ್ದು, ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವರದಿಯನ್ನು ಬಿಡುಗಡೆ ಮಾಡಿದೆ. ನಿರ್ಭಯಾ ಪ್ರಕರಣದ ನಂತರವೂ ಎಚ್ಚೆತ್ತುಕೊಳ್ಳದ ಕೇಜ್ರಿವಾಲ್ ಸರಕಾರ, ಪೊಲೀಸ್ ವ್ಯವಸ್ಥೆ ನಮ್ಮ ಕೈಯಲಿಲ್ಲ ಎನ್ನುವ ಸಬೂಬು ಹೇಳುತ್ತಲೇ ದಿನದೂಡುತ್ತಿದೆ. ಸದಾ ಕೇಂದ್ರ ಸರಕಾರದ ಮೇಲೆ ಗೂಬೆ ಕೂಡಿಸುವ ಕೇಜ್ರಿವಾಲ್ ತಮ್ಮ ಸರ್ಕಾರದ ಕೈಯಲ್ಲಿರುವ ಆರೋಗ್ಯ, ಬಡತನ, ಶಿಕ್ಷಣಗಳನ್ನು ನಿಯಂತ್ರಿಸಬಹುದಲ್ಲದೇ. ವರದಿ ಪ್ರಕಾರ ಶಿಕ್ಷಣ, ಆರೋಗ್ಯ ದೊರೆಯುದಿದ್ದರೆ, ಬಡತನ ಕಡಿಮೆಯಾಗದಿದ್ದರೆ ಮಹಿಳೆಯರು ಹೇಗೆ ಸಬಲರಾಗಬೇಕು ಎಂಬುದೇ ಪ್ರಶ್ನೆ.
ವರದಿಯಲ್ಲಿ ಶಿಕ್ಷಣ ನೀಡುವಲ್ಲಿ ಮತ್ತು ಬಡತನ ಕಡಿಮೆ ಮಾಡುವಲ್ಲಿ ಕೇಜ್ರಿವಾಲ್ ಸರಕಾರ ವಿಫಲವಾಗಿದೆ ಎಂಬುದು ಸಾಬೀತಾಗಿದೆ. ರಾಜ್ಯಗಳ ಪಟ್ಟಿಯಲ್ಲಿ 28ನೇ ಸ್ಥಾನವನ್ನು ಹೊಂದಿದೆ. ಅಂದರೆ 29 ರಾಜ್ಯಗಳಲ್ಲಿ ರಾಷ್ಟ್ರ ರಾಜಧಾನಿಯಾದ ದೆಹಲಿಯೇ 28ನೇ ಸ್ಥಾನದಲ್ಲಿರುವುದಕ್ಕೆ ವಿಶ್ಲೇಷಕರು ಆತಂಕ ವ್ಯಕ್ತಪಡಿಸಿದ್ದಾರೆ.
Leave A Reply