ರಾಜಸ್ತಾನದಲ್ಲೂ ಕೇರಳ ಮಾದರಿಯಲ್ಲಿ ಇಸ್ಲಾಂ ಮತಾಂತರ ಪ್ರಕರಣ, ಹೈಕೋರ್ಟ್ ಎತ್ತಿದೆ ಮತಾಂತರ ಕುರಿತು ಪ್ರಶ್ನೆ
ಜೈಪುರ: ದೇಶದಲ್ಲಿ ಇಸ್ಲಾಮಿಕ್ ಮೂಲಭೂತವಾದಿಗಳು ಲವ್ ಜಿಹಾದ್ ಮೂಲಕ ಹಿಂದೂ ಯುವತಿಯರನ್ನು ಮತಾಂತರಗೊಳಿಸುತ್ತಿರುವ ಕುರಿತು ಅನುಮಾನಗಳು ಎದ್ದಿರುವ, ಕೇರಳದಲ್ಲಿ ಈ ಕುರಿತು ಎನ್ಐಎ ತನಿಖೆ ನಡೆಸುತ್ತಿರುವ ಬೆನ್ನಲ್ಲೇ ರಾಜಸ್ತಾನದಲ್ಲಿ ಇಂಥಾದ್ದೇ ಮತಾಂತರ ಪ್ರಕರಣ ಸುದ್ದಿಯಾಗಿದೆ.
ಹೌದು, 22 ವರ್ಷದ ಹಿಂದೂ ಯುವತಿಯ ಮುಸ್ಲಿಂ ವ್ಯಕ್ತಿಯ ಜತೆ ನಡೆದ ಮದುವೆ ಪ್ರಕರಣ ಈಗ ರಾಜಸ್ತಾನ ಹೈಕೋರ್ಟ್ ಮೆಟ್ಟಿಲೇರಿದ್ದು, ನ್ಯಾಯಾಲಯ ಮತಾಂತರದ ಹಾಗೂ ಅಂತರ್ ಧರ್ಮೀಯ ಮದುವೆ ಕುರಿತು ಹಲವು ಪ್ರಶ್ನೆಗಳನ್ನು ಎತ್ತಿದೆ.
ರಾಜ್ಯದಲ್ಲಿ ಮತಾಂತರ ಕುರಿತು ಯಾವುದೇ ಪ್ರಕ್ರಿಯೆ ಅಥವಾ ಕಾನೂನು ಇದೆಯೇ? ಅಥವಾ ಒಂದೇ ಒಂದು ಅಫಿಡವಿಟ್ ಸಲ್ಲಿಸಿದರೆ ಮತಾಂತರವಾದಂತೆಯೇ? ಎಂದು ಪ್ರಶ್ನಿಸಿ ಯುವತಿಯನ್ನು ವಾರದ ಮಟ್ಟಿಗೆ ಸರ್ಕಾರದ ವಶಕ್ಕೆ ನೀಡಿದೆ. ನ.7ರಂದು ಮಂದಿನ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ತಿಳಿಸಿದೆ.
ಅಲ್ಲದೆ 10 ರೂಪಾಯಿ ಸ್ಟ್ಯಾಂಪ್ ಸಲ್ಲಿಸಿದರೆ ಒಬ್ಬ ಮಹಿಳೆ ಇಸ್ಲಾಮಿಗೆ ಮತಾಂತರವಾದಂತೆಯೇ? ನನ್ನ ಹೆಸರು ಗೋಪಾಲ್ ಇದ್ದು, ನಾಳೆಯೇ ಗೋಪಾಲ್ ಮೊಹಮ್ಮದ್ ಆಗಿ ಬದಲಾಯಿಸಬಹುದೇ ಎಂದು ನ್ಯಾಯಮೂರ್ತಿ ಪ್ರಶ್ನಿಸಿದ್ದಾರೆ.
ಇನ್ನು ಮದುವೆ ಕುರಿತು ನಕಲಿ ದಾಖಲೆ ಸಲ್ಲಿಸಲಾಗಿದೆ ಎಂದು ಯುವತಿ ಕುಟುಂಬಸ್ಥರು ಸಲ್ಲಿಸಿದ ದೂರು ಸ್ವೀಕರಿಸದ ಪೊಲೀಸರ ಕ್ರಮವನ್ನು “ನಿರ್ಲಕ್ಷ್ಯ” ಎಂದು ನ್ಯಾಯಾಲಯ ಜರಿದಿದೆ.
ಆದಾಗ್ಯೂ ಕೇರಳದಲ್ಲೂ ಅಖಿಲಾ ಅಶೋಕನ್ ಎಂಬ ಯುವತಿ ಹದಿಯಾ ಆಗಿ ಮುಸ್ಲಿಂ ಯುವಕನನ್ನು ಮದುವೆಯಾದ ಪ್ರಕರಣ ಹಿಂದೆ ಲವ್ ಜಿಹಾದ್ ಕೈವಾಡ ಇದೆ ಎಂಬ ಆರೋಪ ಕೇಳಿಬರುತ್ತಿರುವ ಬೆನ್ನಲ್ಲೇ ಮತ್ತೊಂದು ಪ್ರಕರಣ ಸುದ್ದಿಯಾಗಿದ್ದು ಬೆಚ್ಚಿಬೀಳಿಸುವಂತಿದೆ.
ಏನಿದು ಪ್ರಕರಣ?
ಪಾಯಲ್ ಸಾಂಘ್ವಿ ಎಂಬ 22 ವರ್ಷದ ಯುವತಿ ಫಯಾಜ್ ಮೋದಿ ಎಂಬ ಮುಸ್ಲಿಂ ಯುವಕನನ್ನು ಮದುವೆಯಾಗಿದ್ದು, ತಾನು ಸಹ ಇಸ್ಲಾಂಗೆ ಮತಾಂತರಗೊಂಡಿದ್ದಾಳೆ. ಹೆಸರನ್ನೂ ಸಹ ಆರಿಫಾ ಎಂದು ಬದಲಾಯಿಸಿಕೊಂಡಿದ್ದಾಳೆ. ಈ ಕುರಿತು ಏ.14ರಂದು ವಿವಾಹದ ಕುರಿತು ದಾಖಲೆ ಸಹ ದಂಪತಿ ಸಲ್ಲಿಸಿದೆ.
ಆದರೆ ಮದುವೆ ಕುರಿತು ನಕಲಿ ದಾಖಲೆ ಸಲ್ಲಿಸಲಾಗಿದೆ ಹಾಗೂ ಯುವತಿಯನ್ನು ಬಲವಂತವಾಗಿ ಮದುವೆ ಹಾಗೂ ಇಸ್ಲಾಮಿಗೆ ಮತಾಂತರಗೊಳಿಸಲಾಗಿದೆ ಎಂದು ಯುವತಿ ಸಹೋದರ ನ್ಯಾಯಾಲಯದ ಮೊರೆ ಹೋಗಿದ್ದು, ಈಗ ಹೈಕೋರ್ಟ್ ಮದುವೆ ಕುರಿತು ವಿಚಾರಣೆ ನಡೆಸುತ್ತಿದೆ.
Leave A Reply