80 ಲಕ್ಷ ರೈತ ಕುಟುಂಬಗಳಲ್ಲಿ ಒಬ್ಬ ರೈತರಿಗೂ ರಾಜ್ಯೋತ್ಸವ ಪ್ರಶಸ್ತಿ ಏಕೆ ಕೊಡಲಿಲ್ಲ: ಎಚ್ಡಿಕೆ ಪ್ರಶ್ನೆ
Posted On November 2, 2017
0
ಬೆಂಗಳೂರು: ರಾಜ್ಯ ಸರ್ಕಾರ 62 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿಯೇನೋ ನೀಡಿದೆ, ಆದರೆ ಪ್ರಶಸ್ತಿಗೆ ಒಬ್ಬ ರೈತರೂ ಸರ್ಕಾರದ ಕಣ್ಣಿಗೆ ಬೀಳಲಿಲ್ಲವೇ, ಸಿಗಲಿಲ್ಲವೇ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ ನೆಲ, ಜಲ, ಭಾಷೆ ಉಳಿವಿಗೆ ರೈತರದ್ದೇ ಪ್ರಮುಖ ಪಾತ್ರ. ಅವರಿಂದಲೇ ನಾಡು ಉಳಿದಿರುವುದು. ರಾಜ್ಯದಲ್ಲಿ 80 ಲಕ್ಷ ರೈತರಿದ್ದಾರೆ, ಆದರೆ ರಾಜ್ಯ ಸರ್ಕಾರ ಒಬ್ಬ ರೈತರಿಗೂ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ನೀಡಿಲ್ಲ ಎಂದು ಕುಮಾರಸ್ವಾಮಿ ಟ್ವಿಟರ್ ನಲ್ಲಿ ಅಸಮಾಧಾನ ಹೊರಹಾಕಿದ್ದಾರೆ.
ಎಲ್ಲ ಕ್ಷೇತ್ರಗಳಲ್ಲಿ ಸಾಧಕರನ್ನು ಪರಿಗಣಿಸಿರುವ ಸರ್ಕಾರದ ಕಣ್ಣಿಗೆ ರೈತರೇಕೆ ಬೀಳಲಿಲ್ಲ? ರೈತ ಹಾಗೂ ಕೃಷಿಕರ ಬಗ್ಗೆ ಸರ್ಕಾರದ ಧೋರಣೆಗೆ ಇದೇ ಉತ್ತಮ ನಿದರ್ಶನ ಎಂದು ಜರಿದಿದ್ದಾರೆ.
ಕನ್ನಡವೇ ಬರದ ರಾಮಚಂದ್ರ ಗುಹಾ ಅವರಂಥ ಸೋ ಕಾಲ್ಡ್ ಇತಿಹಾಸಕಾರರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿರುವ ಸರ್ಕಾರಕ್ಕೆ ರೈತರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡದಿರುವುದು ನಿಜಕ್ಕೂ ಸಾರ್ವಜನಿಕವಾಗಿಯೂ ಖಂಡನೀಯವೇ ಸರಿ.
Trending Now
ವಿಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ-ಎಲ್ ಇಡಿ ಸ್ಕ್ರೀನ್ ಗೆ ಆರತಿ!
December 17, 2025
ಅಜಾನ್ ಚರ್ಚೆಯ ಸಂದರ್ಭದಲ್ಲಿ ದೀಪಾವಳಿ ಪಟಾಕಿ ವಿಷಯ ಎತ್ತಿದ ಸಚಿವ!
December 17, 2025









