ಭಾರತಕ್ಕೆ ಸಲಾಂ, ಮೋದಿಗೆ ಧನ್ಯವಾದ
Posted On November 3, 2017
ಅಮೃತಸರ: ಬಂಧಿತರಾಗಿದ್ದ ಪಾಕಿಸ್ತಾನ ಸಹೋದರಿಯರಾದ ಫಾತಿಮಾ ಮತ್ತು ಮುಮ್ತಾಜ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡಿದ್ದಕ್ಕೆ ಇಬ್ಬರೂ ಸಹೋದರಿಯರು ಭಾರತಕ್ಕೆ ಸಲಾಂ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
2006ರ ಮೇ 8ರಂದು ಮಾದಕ ವಸ್ತು ಕಳ್ಳಸಾಗಣೆ ಮಾಡುತ್ತಿದ್ದ ರಷೀದಾ ಹಾಗೂ ಪುತ್ರಿಯರಾದ ಫಾತಿಮಾ ಹಾಗೂ ಮುಮ್ತಾಜ್ ಅವರನ್ನು ಅಂತಾರಾಷ್ಟ್ರೀಯ ಗಡಿ ರೇಖೆ ಬಳಿ ಬಂಧಿಸಲಾಗಿತ್ತು. ಮೂವರಿಗೂ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.
ಇವರ ತಾಯಿ ರಷೀದಾ 2008ರಲ್ಲಿ ಕೋರ್ಟ್ ಗೆ ತೆರಳುವ ವೇಳೆ ಕುಸಿದ್ದು ಬಿದ್ದಿದ್ದು, ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈಗ ಫಾತಿಮಾ ಮತ್ತು ಮುಮ್ತಾಜ್ ರನ್ನು ಬಿಡುಗಡೆಗೊಳಿಸಿ ಪಾಕಿಸ್ತಾನಿ ಅಧಿಕಾರಿಗಳಿಗೆ ಒಪ್ಪಿಸಿದ್ದು, ಇಬ್ಬರೂ ಭಾರತಕ್ಕೆ ಸಲಾಂ ಹಾಗೂ ಮೋದಿಗೆ ಧನ್ಯವಾದ ತಿಳಿಸಿದ್ದಾರೆ.
- Advertisement -
Leave A Reply