ವಿಶ್ವರೂಪಂ ಚಿತ್ರ ಬ್ಯಾನ್ ಮಾಡಿ ಎಂದು ನಿಮ್ಮ ಚಿತ್ರಕ್ಕೆ ಚಪ್ಪಲಿ ಹಾರ ಹಾಕಿದವರ ಬಗ್ಗೆ ಸ್ವಲ್ಪ ಮಾತಾಡಿ ಕಮಲ್
2013 ಭಾರಿ ಬಜೆಟ್ ನ ತ್ರಿಲ್ಲರ್ ಚಿತ್ರ ವಿಶ್ವರೂಪಂ ರಾಷ್ಟ್ರಾಧ್ಯಂತ ಬಿಡುಗಡೆಯಾಗುತ್ತದೆ. ಆದರೆ ಎಲ್ಲೆಡೆ ಅದಕ್ಕೆ ಅಪಸ್ವರ ಕೇಳಿ ಬರುತ್ತವೆ. ತಮಿಳುನಾಡಿನಲ್ಲಂತೂ ಕಮಲ್ ಹಾಸನ್ ಚಿತ್ರಕ್ಕೆ ಬೆಂಕಿ ಹಚ್ಚಿ, ಚಪ್ಪಲಿ ಹಾರ ಹಾಕಿ, ವಿಶ್ವರೂಪಂ ಫ್ಲೇಕ್ಸ್ ಸುಟ್ಟು ಆಕ್ರೋಶ ವ್ಯಕ್ತಪಡಿಸಲಾಗುತ್ತೆ. ಅಷ್ಟಕ್ಕೆ ಸುಮ್ಮನಾಗದೆ ಚಿತ್ರ ನಿಷೇಧಿಸುವಂತೆ ಪೊಲೀಸರಿಗೆ, ಸರಕಾರಕ್ಕೆ ಮನವಿ ಮಾಡಲಾಗುತ್ತೆ. ಇಷ್ಟೆಲ್ಲಾ ರಾದ್ಧಾಂತ ಮಾಡಿದವರೂ ಮತ್ತಾರೂ ಅಲ್ಲ ಭಯೋತ್ಪಾದನೆ ಧರ್ಮ ಇಲ್ಲ ಎನ್ನುವ ಮುಸ್ಲಿಂ ಸಂಘಟನೆಗಳು. ಆದರೆ ಇಂದು ಕಮಲ್ ಹಾಸನ್ ಹಿಂದೂ ಭಯೋತ್ಪಾದನೆ ಎಂದು ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ಆಡುತ್ತಿದ್ದಾರೆ. ಭಯೋತ್ಪಾದನೆಯ ಮೂಲ ಯಾವುದು ಎಂಬುದರ ಬಗ್ಗೆ ಚಕಾರವೆತ್ತದೇ ಮುಗ್ದ ಹಿಂದೂಗಳ ವಿರುದ್ಧ ಮುಗಿ ಬಿದ್ದಿದ್ದಾರೆ.
ಇದೇ ಕಮಲ್ ಹಾಸನ್ ಅಂದು ನನ್ನ ಮನೆ, ಆಸ್ತಿ ಮಾರಿ ವಿಶ್ವರೂಪಂ ಚಿತ್ರ ಮಾಡಿದ್ದೇನೆ. ನನಗೆ ನಷ್ಟವಾಗುತ್ತಿದೆ ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದು ಮರೆತಿದ್ದಾರೆ. ಅಷ್ಟೇ ಏಕೆ ‘ಅಲ್ಹಾ ಹು ಅಕ್ಬರ್’ ಎನ್ನುತ್ತಲೇ ಇತ್ತೀಚೆಗೆ ನ್ಯೂಯಾರ್ಕ್ ನಲ್ಲಿ ಎಂಟು ಬಲಿ ಪಡೆದ ದೇವ ಸೈನಿಕರ ಸಂತತಿಯನ್ನು ಹೋಗಳುವರೆ. ನಿತ್ಯ ಲಕ್ಷಾಂತರ ಜನ ಮಾರಣ ಹೋಮ ಮಾಡುತ್ತಿರುವ ಸೈತಾನಿ ಸಂಘಟನೆ ಐಸಿಸ್ ಧರ್ಮದವರ ಬಗ್ಗೆ ಮಾತನಾಡೆಂದರೆ ಮರೆಗುಳಿ ಬಂದಂತೆ ಆಡುತ್ತಾರೆ.
ನೂರಾರು ವರ್ಷಗಳಿಂದ ಭಾರತಕ್ಕೆ ಬಂದ ಮುಸ್ಲಿಂರು, ಕಿಶ್ಚಿಯನ್ ರಿಗೆ ಆಶ್ರಯ, ಅನ್ನ, ನೀರು ನೀಡಿ ಪೋಷಿಸಿದ ಸಹನಶೀಲ ಧರ್ಮ ಹಿಂದೂ. ಅಂತಹ ಹಿಂದೂ ಧರ್ಮದಲ್ಲೇ ಭಯೋತ್ಪಾಕರಿದ್ದಾರೆ ಎಂದು ಹೇಳುವ ಕಮಲ್ ಹಾಸನ್ ತಾವು ಯಾವ ಧರ್ಮದಲ್ಲಿ ಹುಟ್ಟಿದ್ದೀರಿ, ಯಾವ ಧರ್ಮದ ಮೂಲ ಸ್ಥಾನದಲ್ಲಿ ಇದ್ದೀರಿ ಎಂಬುದು ಅರ್ಥೈಸಿಕೊಳ್ಳಬೇಕಲ್ಲವೆ. ಸುಖಾ ಸುಮ್ಮನೆ ಕೇಸರಿ ಭಯೋತ್ಪಾದನೆ, ಹಿಂದೂ ಭಯೋತ್ಪಾದನೆ ಎಂದು ಘೀಳಿಡುವುದು ಎಷ್ಟು ಸರಿ?
ಆನಂದ ವಿಕಟನ್ ಪತ್ರಿಕೆಗೆ ಬರೆದಿರುವ ಲೇಖನದಲ್ಲಿ ಹಿಂದೂಗಳಲ್ಲೂ ಭಯೋತ್ಪಾದಕರಿದ್ದಾರೆ. ಹಿಂದೂ ಭಯೋತ್ಪಾದನೆಯೂ ಇದೆ ಎಂಬುದನ್ನು ತಳ್ಳಿಹಾಕುವಂತಿಲ್ಲ ಎಂದಿದ್ದೀರಲ್ಲ. ನಿಮ್ಮ ಚಿತ್ರಕ್ಕೆ ಚಪ್ಪಲಿ ಹಾರ ಹಾಕಿದವರು, ಕಾಶ್ಮೀರದಲ್ಲಿ ನಿತ್ಯ ಸೈನಿಕರ, ಕಾಶ್ರೀರಿ ಪಂಡಿತರ ಮಾರಣ ಹೋಮ ಮಾಡಿದವರು, ಸಿರಿಯಾ, ಅಫ್ಘಾನಿಸ್ತಾನದಲ್ಲಿ ನಿತ್ಯ ಬಾಂಬ್ ಹಾಕುವವರ ಧರ್ಮದ ಬಗ್ಗೆ ಸ್ವಲ್ಪ ಮಾತಾಡಿ ಕಮಲ್ ಹಾಸನ್ ಆಗ ಗೊತ್ತಾಗುತ್ತೆ ನಿಮ್ಮ ಜಾತ್ಯಾತೀತ ನಿಲುವಿನ ಒಳಸೋಗು
ಭಾರತವಷ್ಟೇ ಏಕೆ ಇಡೀ ವಿಶ್ವಕ್ಕೆ ಗೊತ್ತು ಯಾವ ಧರ್ಮದ ದೈವ ಸೈನಿಕರು ಮನುಕುಲಕ್ಕೆ ಮಾರಕವಾಗಿದ್ದಾರೆ ಎಂಬುದು. ತಮ್ಮ ಬಾಯಿಯ ತೆವಲು ತೀರಿಸಿಕೊಳ್ಳಲೋ, ಯಾರನ್ನೋ ಮೆಚ್ಚಿಸಲೋ ಅಥವಾ ರಾಜಕೀಯಕ್ಕೆ ಬರಬೇಕಾದರೆ ಎಡಬಿಡಂಗಿ ಹೇಳಿಕೆ ನೀಡಬೇಕು ಎಂಬ ಹುಚ್ಚಾಟ ಕಮಲ್ ನಟನೆಗೆ ಇರುವ ಗೌರವವನ್ನು ಕಳೆದುಕೊಂಡು ಬಿಡುತ್ತದೆ. ಕೇರಳದಲ್ಲಿ ಸಾಲು ಸಾಲು ಹಿಂದೂಗಳ ಮಾರಣ ಹೋಮ ನಡೆಯುತ್ತಿದೆ. ಕೆಂಪು ರಕ್ತದೋಕುಳಿ ಹರಿಯುತ್ತಿದೆ. ಆದರೂ ಅಲ್ಲಿ ಜ್ಯಾತಾತೀತ ಸರಕಾರವಿದೆ ಎನ್ನುವ ಹಾಸನ್ ಗೆ ಇದೇ ಕಮ್ಯುನಿಸ್ಟ್ ಬೆಂಬಲಿಗರು ಕಾಡಿನಲ್ಲಿ ಅವಿತು ದೇಶದ ನೂರಾರು ಯೋಧರನ್ನು, ಬಡ ಆದಿವಾಸಿಗಳನ್ನು ಬಲಿತೆಗೆದುಕೊಳ್ಳುತ್ತಿರುವುದು ಕಾಣುತ್ತಿಲ್ಲವೇ. ಕಂಡರೂ ಕಾಣದಂತ ಜಾಣ ಕುರುಡುತನವೇ?
ತಮಗೆ ಬುದ್ಧಿಜೀವಿಯಾಗು ತೆವಲು ಇದ್ದರೆ, ಜಾತ್ಯಾತೀತೆಯ ಪಟ್ಟ ಬೇಕಿದ್ದರೆ ಸರಾಗವಾಗಿ ಕಾಂಗ್ರೆಸ್ ಜತೆ ಕೈ ಜೋಡಿಸಿ. ಯುಪಿಎ ಅವಧಿಯಲ್ಲಿ ‘ಕೇಸರಿ ಭಯೋತ್ಪಾದನೆ’ ಎಂದು ಹೇಳಿ ನಂತರ ಕ್ಷಮೆ ಕೇಳಿದ ಅಂದಿನ ಗೃಹ ಸಚಿವ ಸುಶೀಲ್ ಕುಮಾರ ಸಿಂಧೆ ಅವರಂತೆ ಯಾರನ್ನೋ ಮೆಚ್ಚಿಸಲು ಎಡಬಿಡಂಗಿ ಹೇಳಿಕೆ ನೀಡಬೇಡಿ.
ಪ್ರವೀಣಕುಮಾರ ಕಾಸರಗೋಡು
Leave A Reply