ಕಮಲ್ ಹಾಸನ್ ಹೇಳಿಕೆಗೆ ಕಮಲ ಆಕ್ರೋಶ, ಹಫೀಜ್ ಸಯೀದ್ ಗೆ ಹೋಲಿಕೆ
ಮೆಲ್ಲಗೆ ಕಮ್ಯುನಿಸ್ಟ್ ಪಾರ್ಟಿ ಸೇರಲು ಇಚ್ಛಿಸಿರುವ ಅಥವಾ ತಮ್ಮದೇ ಒಂದು ಪಕ್ಷ ಕಟ್ಟಿ ರಾಜಕೀಯ ಪ್ರವೇಶಿಸಲು ಹೊರಟಿರುವ ನಟ ಕಮಲ್ ಹಾಸನ್ “ಹಿಂದೂ ಉಗ್ರವಾದ ಎಲ್ಲ ಎನ್ನುವಂತಿಲ್ಲ” ಎಂಬ ಹೇಳಿಕೆಗೆ ಬಿಜೆಪಿ ಭಾರಿ ಆಕ್ರೋಶ ವ್ಯಕ್ತಪಡಿಸಿದೆ.
ಕಮಲ್ ಹಾಸನ್ ಇಂಥಾ ಹೇಳಿಕೆ ಖಂಡನೀಯವಾಗಿದ್ದು, ಅವರು ಲಷ್ಕರೆ ತೊಯ್ಬಾ ಉಗ್ರ ಸಂಘಟನೆ ಮುಖ್ಯಸ್ಥ ಹಫೀಜ್ ಸಯೀದ್ ಇದ್ದ ಹಾಗೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಜಿ.ವಿ.ಎಲ್.ನರಸಿಂಹರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಹಿಡಿತದಲ್ಲಿರುವ ಕಾಂಗ್ರೆಸ್ ಹಲವು ದಶಕದಿಂದ ಮುಸ್ಲಿಮರ ಮತಕ್ಕಾಗಿ ಭಾರತದ ಸಮುದಾಯ ಹಾಗೂ ಹಿಂದೂಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಅಂಥವರ ಬಗ್ಗೆ ಮಾತನಾಡದ ಕಮಲ್ ಸುಮ್ಮನೆ ಹಿಂದೂಗಳ ವಿರುದ್ಧ ಆರೋಪಿಸುವುದು ಸರಿಯಲ್ಲ ಎಂದಿದ್ದಾರೆ.
ಕಾಂಗ್ರೆಸ್ ಮುಖಂಡರಾದ ಸುಶೀಲ್ ಕುಮಾರ್ ಶಿಂಧೆ ಹಾಗೂ ಪಿ.ಚಿದಂಬರಂ ಸಂಸತ್ತಿನಲ್ಲೇ ಹಿಂದೂ ಭಯೋತ್ಪಾದನೆ ಅಸ್ತಿತ್ವದ ಕುರಿತು ಮಾತನಾಡಿದ್ದರು. ಈಗ ಅವರ ಸಾಲಿಗೆ ಕಮಲ್ ಹಾಸನ್ ಸಹ ಸೇರಿದ್ದು, ಇವರೆಲ್ಲರೂ ಪಾಕಿಸ್ತಾನಕ್ಕೆ ಬೆಂಬಲ ನೀಡುವಂಥವರು, ಇವರೆಲ್ಲರೂ ಹಫೀಜ್ ಸಯೀದ್ ಇದ್ದಹಾಗೆ ಎಂದು ಟೀಕಿಸಿದ್ದಾರೆ.
ತಮಿಳು ವಾರಪತ್ರಿಕೆ ಆನಂದ ವಿಕಟನ್ ನಲ್ಲಿ “ಹಿಂದೂ ಉಗ್ರವಾದವನ್ನು ತಳ್ಳಿಹಾಕುವಂತಿಲ್ಲ. ಕೇರಳದ ಹಿಂಸಾಚಾರಕ್ಕೆ ಹಿಂದೂಗಳೇ ಕಾರಣ. ಬಲಪಂಥೀಯ ಕೋಮುವಾದ ಹೆಚ್ಚಾಗುತ್ತಿದೆ” ಎಂದು ಲೇಖನ ಬರೆದಿದ್ದು ವಿವಾದಕ್ಕೆ ಕಾರಣವಾಗಿದೆ. ಆದರೆ ಇಷ್ಟೆಲ್ಲ ಮಾತನಾಡುವ ಕಮಲ್ ಹಾಸನ್ ಮುಸ್ಲಿಂ ಭಯೋತ್ಪಾದನೆ ಬಗ್ಗೆ ಮಾತನಾಡುವ ಧೈರ್ಯ ಹೊಂದಿದ್ದಾರಾ? ಎಂಬುದೇ ಪ್ರಶ್ನೆ.
Leave A Reply