ಜಮ್ಮು-ಕಾಶ್ಮೀರದಲ್ಲಿ ಹಿಜ್ಬುಲ್ ಮುಖ್ಯಸ್ಥ ಸಲಾಹುದ್ದೀನ್ ಪುತ್ರನ ಸರ್ಕಾರಿ ನೌಕರಿಗೆ ಕತ್ತರಿ
Posted On November 4, 2017

ಶ್ರೀನಗರ: ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಮುಖ್ಯಸ್ಥ ಸೈಯದ್ ಸಲಾಹುದ್ದೀನ್ ಪುತ್ರ ಸೈಯದ್ ಶಹೀದ್ ಯೂಸುಫ್ ಸರ್ಕಾರಿ ನೌಕರಿಗೆ ಜಮ್ಮು-ಕಾಶ್ಮೀರ ಸರ್ಕಾರ ಕತ್ತರಿ ಹಾಕಿದ್ದು, ಅಮಾನತುಗೊಳಿಸಿದೆ.
ಭಯೋತ್ಪಾದಕರಿಂದ ಹಣ ಪಡೆದ ಆರೋಪದಲ್ಲಿ ಕಳೆದ ತಿಂಗಳು ಬಂಧಿತನಾಗಿರುವ ಈತನ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತನಿಖೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಯೂಸುಫ್, ಭಾರತದ ವಾಂಟೆಡ್ ಪಟ್ಟಿಯಲ್ಲಿರುವ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಸದಸ್ಯ ಐಜಾಜ್ ಅಹ್ಮದ್ ಭಟ್ ಎಂಬ ಉಗ್ರನಿಂದ ಹಣ ಪಡೆದಿದ್ದಾನೆ ಎಂಬ ಆರೋಪವಿದ್ದಾನೆ ಎಂಬ ಕಾರಣ ಬಂಧಿಸಲಾಗಿತ್ತು. ಅಹ್ಮದ್ ಭಟ್ ಭಾರತದ ಅನೇಕರಿಗೆ ಹಣ ನೀಡಿದ್ದಾನೆ ಎಂಬ ಆರೋಪವೂ ಇದೆ.
ಇದೇ ಪ್ರಕರಣದಲ್ಲಿ ಎನ್ಐಎ ಈಗಾಗಲೇ ಆರು ಜನರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ. ಅದರಲ್ಲಿ ಇಬ್ಬರನ್ನು ಬಂಧಿಸಿ ವಿಚಾರಣೆಗೊಳಪಡಿಸುತ್ತಿದ್ದು, ಸಲಾಹುದ್ದೀನ್ ಸೇರಿ ನಾಲ್ವರು ಪಾಕ್ ಆಕ್ರಮಿತ ಕಾಶ್ಮೀರ ಸೇರಿ ಹಲವೆಡೆ ತಲೆಮರೆಸಿಕೊಂಡಿದ್ದಾರೆ.
- Advertisement -
Leave A Reply