7 ವರ್ಷದ ಹಿಂದೆ ಅಪಹರಣಕ್ಕೀಡಾಗಿ, ಇಸ್ಲಾಮಿಗೆ ಬಲವಂತವಾಗಿ ಮತಾಂತರಗೊಳಿಸಿರುವ ನನ್ನ ಮಕ್ಕಳು, ಹೆಂಡತಿಯನ್ನು ರಕ್ಷಿಸಿ. ಪ್ಲೀಸ್…

ಭಾರತದಲ್ಲಿ ಇಸ್ಲಾಂ ಮೂಲಭೂತವಾದಿಗಳ ಮತಾಂತರದ ದಾಹಕ್ಕೆ ಇದಕ್ಕಿಂತ ನಿದರ್ಶನ ಹಾಗೂ ಘೋರ ಅಣಕ ಬೇರೊಂದಿಲ್ಲ.
ಹೌದು, ಅದು 2010, ಅ.27. ಪ್ರಿಯಾ ರಾಣಿ ಎಂಬ ಮಹಿಳೆ ತನ್ನ ಮುದ್ದಾದ ಅವಳಿ ಮಕ್ಕಳನ್ನು ಕರೆದುಕೊಂಡು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದಳು. ಆಕೆಯ ಮುಖದಲ್ಲಿ ಮುಸ್ಕಾಟ್ ನಲ್ಲಿ ಕೆಲಸ ಮಾಡುತ್ತಿದ್ದ ಗಂಡನನ್ನು ನೋಡುವ, ತೋಳಲ್ಲಿ ಬಂಧಿಯಾಗುವ ಸೆಳೆತವಿತ್ತು.
ಆದರೆ ವಿಮಾನ ನಿಲ್ದಾಣದಿಂದಲೇ ಆಕೆ ಹಾಗೂ ಇಬ್ಬರು ಮಕ್ಕಳು ನಾಪತ್ತೆಯಾದರೂ. ಇನ್ನೂ ಹೆಂಡತಿ ಮಕ್ಕಳು ಬರಲಿಲ್ಲವಲ್ಲ ಎಂಬ ದುಗುಡ ವಿನೋದ್ ಕುಮಾರ್ ಗೆ ಹಲವು ಅನುಮಾನ ಹುಟ್ಟಿಸಿತು. ಕೊನೆಗೆ ಅ.30ರಂದು ಭಾರತಕ್ಕೆ ಬಂದ ವಿನೋದ್, ಹೆಂಡತಿ ಮಕ್ಕಳು ಕಾಣೆಯಾದ ಕುರಿತು ವಿಮಾನ ನಿಲ್ದಾಣ ಪೊಲೀಸರಿಗೆ ದೂರು ನೀಡಿದರು. ಆದರೂ ಯಾವುದೇ ಪ್ರಯೋಜನವಾಗಲಿಲ್ಲ.
ಆದರೆ ಅದೊಂದು ದಿನ ಆತನಿಗೆ ಅಪರಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ಮೊಹಮ್ಮದ್ ಮುನ್ನಾ ಆಶಿಕ್ ಇದ್ದು, ಹೆಂಡತಿ ಮಕ್ಕಳನ್ನು ಅಪಹರಿಸಿದ್ದೇನೆ. ನೀನು ಎಂದಿಗೂ ಭಾರತಕ್ಕೆ ಬರುವಂತಿಲ್ಲ ಎಂದು ಆದೇಶವಿತ್ತಿದ್ದಾನೆ. ಇಲ್ಲದಿದ್ದರೆ ಹೆಂಡತಿ, ಮಕ್ಕಳನ್ನು ಕೊಲ್ಲುವುದಾಗಿ ಬೆದರಿಸಿದ್ದಾನೆ.
ಆದರೆ ಇತ್ತ ಪೊಲೀಸರಿಗೆ ದೂರಿನಿಂದಲೂ ಪ್ರಯೋಜನವಾಗದೆ, ಕಾಣೆಯಾದ ಹೆಂಡತಿ ಮಕ್ಕಳು ಸಹ ಪತ್ತೆಯಾಗದೆ ನೊಂದಿರುವ ವಿನೋದ್, ಸಾರ್ವಜನಿಕವಾಗಿ ನನ್ನ ಹೆಂಡತಿ ಮಕ್ಕಳು ಸಿಕ್ಕರೆ ತಿಳಿಸಿ, ರಕ್ಷಿಸಿ ಎಂದು ಅಂಗಲಾಚಿಕೊಂಡಿದ್ದಾನೆ.
ಅಲ್ಲದೆ, ನನ್ನ ಹೆಂಡತಿ, ಮಕ್ಕಳನ್ನು ಬಲವಂತವಾಗಿ ಮತಾಂತರಗೊಳಿಸಿದ್ದಾರೆ. ಅವಳ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಸಹ ವಿನೋದ್ ಆರೋಪಿಸಿದ್ದಾರೆ. ಈ ಕುರಿತ ವಿಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದ್ದು, ಎಫ್ಐಆರ್ ಪ್ರತಿಗಳು ಸಹ ಅಪಹರಣದ ಕುರಿತು ತಿಳಿಸುತ್ತವೆ.
ಆದರೆ ಧರ್ಮದ ಹೆಸರಿನಲ್ಲಿ ಮತಾಂತರ ಮಾಡುವ, ಇನ್ನೊಬ್ಬರ ಸುಂದರ ಬಾಳಿಗೆ ಕೊಳ್ಳಿ ಇಡುವ ಈ ಇಸ್ಲಾಂ ಮೂಲಭೂತವಾದಕ್ಕೆ ಏನೆನ್ನಬೇಕು ಹೇಳಿ? ಯಾವ ಪ್ರಕಾಶ್ ರಾಜ್, ಯಾವ ಕಮಲ್ ಹಾಸನ್ ಈ ಕುರಿತು ಮಾತನಾಡುತ್ತಾರೆ? ಅಷ್ಟಕ್ಕೂ ವಿನೋದ್ ಗೆ ಬಂದ ಪರಿಸ್ಥಿತಿ ನಮ್ಮಲ್ಲೇ ಯಾರಿಗಾದರೂ ಬಂದಿದ್ದರೆ?