ನಿತೀಶ್ ಹೇಳಿದ ಮೇಲಾದರೂ ಎಚ್ಚೆತ್ತುಕೊಳ್ಳಿ ಸಿದ್ದರಾಮಯ್ಯ…
‘ಕರ್ನಾಟಕದಲ್ಲೂ ಮದ್ಯಪಾನ ನಿಷೇಧ ಕಾಯಿದೆ ಜಾರಿಗೆ ತನ್ನಿ’ ಹೀಗೆಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲಹೆ ನೀಡಿದವರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ. ಇತ್ತೀಚೆಗೆ ಬಿಹಾರದಲ್ಲಿ ಮದ್ಯಪಾನ ನಿಷೇಧಿಸಿದನ್ನು ಅಧ್ಯಯನ ಮಾಡಲು ರಾಜ್ಯದಿಂದ ತೆರಳಿದ್ದ ಮದ್ಯಪಾನ ಸಂಯಮ ಮಂಡಳಿಗೆ ನಿತೀಶ್ ಸಲಹೆ ನೀಡಿದ್ದಾರೆ.
ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಎಚ್.ಸಿ. ರುದ್ರಪ್ಪ ನೇತೃತ್ವದ 35 ಜನರ ನಿಯೋಗ ಶುಕ್ರವಾರ ಅರ್ಧಗಂಟೆ ನಿತೀಶ್ ಚರ್ಚೆ ನಡೆಸಿದ್ದಾರೆ. ಆ ವೇಳೆ ‘ಮದ್ಯಪಾನ ನಿಷೇಧದಿಂದ ಸಕಾರಾತ್ಮಕ ಬದಲಾವಣೆಗಳು ಆಗುತ್ತವೆ. ಅದರಿಂದ ಕರ್ನಾಟಕದ ಜನರಿಗೆ ಅನುಕೂಲವಾಗುತ್ತದೆ. ಸಿದ್ದರಾಮಯ್ಯ ಶೀಘ್ರದಲ್ಲಿ ಮದ್ಯಪಾನ ನಿಷೇಧ ಕಾಯಿದೆ ಜಾರಿಗೆ ತರಲಿ. ಅವರು ನನ್ನ ಸ್ನೇಹಿತ ಅವರಿಗೆ ಈ ಮಾತನ್ನು ತಿಳಿಸಿ ಎಂದು ಹೇಳಿದ್ದಾರೆ.
ಆದರೆ ಸದಾ ಸರಕಾರದ ಬೊಕ್ಕಸದ ಲೆಕ್ಕಾಚಾರದಲ್ಲೇ ದಿನಕಳೆಯುವ ಆರ್ಥಿಕ ಸಚಿವ ಸಿದ್ದರಾಮಯ್ಯ ಮದ್ಯಪಾನ ನಿಷೇಧದಂತ ಗಟ್ಟಿ ನಿರ್ಧಾರಕ್ಕೆ ಬರುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರ ಸಿದ್ದರಾಮಯ್ಯನವರೇ ಕೊಡಬೇಕು. ಸಾಲದ ಸುಳಿಯಲ್ಲಿ ರಾಜ್ಯದ ಆರ್ಥಿಕ ಸ್ಥಿತಿ ಇದೆ ಎಂಬುದು ತಿಳಿದ ವಿಚಾರವೇ. ಇನ್ನು ಬಡವರ ಕುಟುಂಬ ನಾಶ ಮಾಡಿ ಬೊಕ್ಕಸ ತುಂಬುವ ಮದ್ಯಪಾನವನ್ನು ನಿಷೇಧಿಸುವ ಘನ ಕಾರ್ಯಕ್ಕೆ ಸಿದ್ದರಾಮಯ್ಯ ಮುಂದಾಗುವರೇ? ಅದು ಚುನಾವಣೆ ಹೊತ್ತಲ್ಲಿ.
ಕರ್ನಾಟಕದಲ್ಲಿ ಮದ್ಯಪಾನದಿಂದ ನಿತ್ಯ ಲಕ್ಷಾಂತರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಅದೆಷ್ಟೋ ಹೆಂಗಸರೂ ಕಣ್ಣಿರಲ್ಲಿ ಕೈತೊಳೆಯುತ್ತಿದ್ದಾರೆ. ಮುಗ್ದ ಮಕ್ಕಳು ಕುಡುಕ ತಂದೆಯ ಚಟಕ್ಕೆ ಬಲಿಯಾಗಿ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ನಿತ್ಯ ನಶೆಯಲ್ಲಿ ಅದೆಷ್ಟೋ ಜೀವಗಳು ಹಾದಿ ಹೆಣವಾಗಿ ಹೋಗುತ್ತಿವೆ. ಅದೆಲ್ಲವನ್ನು ಗಮನಿಸಿಯಾದರೂ ಮದ್ಯ ನಿಷೇಧಕ್ಕೆ ಸಿದ್ದರಾಮಯ್ಯ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೇ ಕಣ್ಣಿರಿಡುವ ಮುಗ್ದ ಮಕ್ಕಳ, ಮಹಿಳೆಯರ ಶಾಪ ತಟ್ಟದೆ ಇರದು.
ಸರಕಾರದ ಬೊಕ್ಕಸ ತುಂಬಿಸುವ ಹಪಾಹಪಿ ಬಿಟ್ಟು, ಕಳೆದ ಹದಿನೆಂಟು ತಿಂಗಳಿಂದ ಮದ್ಯಪಾನ ನಿಷೇಧಿಸಿ ಯಶಸ್ವಿಯಾಗಿ ಸರಕಾರ ನಡೆಸುತ್ತಿರುವ ಬಿಹಾರ ಸರಕಾರದ ಆಡಳಿತವನ್ನು ಮಾದರಿಯಾಗಿಟ್ಟುಕೊಳ್ಳಿ. ಅವರಿವರಿಂದ ಪಾಠ, ಸಲಹೆ ಕೇಳಿ, ಅವರು ಅದರಲ್ಲಿ ಯಶಸ್ವಿಯಾಗಿದ್ದಾರೆ. ನಿವೇಕೆ ಅದನ್ನು ಮಾದರಿಯಾಗಿಟ್ಟುಕೊಳ್ಳಬಾರದು?. ಮತ್ತೇ ಅಲ್ಲೂ ಎನ್ ಡಿಎ ಮಿತ್ರ ಪಕ್ಷ, ಬಿಜೆಪಿ ಜತೆ ಸೇರಿದ ನಿತೀಶ್ ಕುಮಾರ ಎಂದು ರಾಜಕೀಯ ಮಾಡಬೇಡಿ. ಸಲಹೆ ಸಕಾರಾತ್ಮಕವಾಗಿದೆ. ಅದನ್ನು ಜಾರಿಗೆ ತಂದು ಬಡವರಿಗೆ ಅಂಟಿರುವ ಕಂಟಕ ದೂರ ಮಾಡಿ. ಇಲ್ಲವೇ ಜನರೇ ನಿಮಗೆ ಕಂಟಕಕ್ಕೆ ದೂಡುತ್ತಾರೆ.
Leave A Reply